ಎಲ್ಲ ಪುಟಗಳು

ಲೇಖಕರು: shashikannada
ವಿಧ: ಬ್ಲಾಗ್ ಬರಹ
January 28, 2008
ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ಕಂಡು ಇದು ಆಶ್ರಮವೋ ಅಥವಾ ಇಂದ್ರನ ಅಮರಾವತಿಯೋ! ಎಂದು ಸೋಜಿಗವೆನಿಸಿತು. ವಿಶಾಲವಾದ ದಳವಾಯಿ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಅತ್ಯುತ್ತಮವಾದ ಪ್ರವಾಸಿ ತಾಣವಾಗಬಹುದಲ್ಲ, ಯಾಕೆ ಸರಕಾರ ಈ ಕಡೆ ಗಮನ ಹರಿಸಿಲ್ಲ ಎಂದು ಆಲೋಚಿಸುತ್ತಿದ್ದೆ. ನಂಜನಗೂಡಿನಿಂದ ಮೈಸೂರು ತುಂಬಾ ಹತ್ತಿರವಿರುವುದರಿಂದ 20-30…
ಲೇಖಕರು: venkatesh
ವಿಧ: Basic page
January 28, 2008
ಅರಾಜಕತೆ, ಅನಿಶ್ಚತೆಯ ಬೀಡೇ, ಅಥವಾ ಅತಿ ಹೆಚ್ಚು ಜ್ಞಾನಪೀಠಪ್ರಶಸ್ತಿವಿಜೇತರ ನಾಡೇ, ಸ್ವಾರ್ಥಿ, ವಿವಾದಾಸ್ಪದ ರಾಜಕಾರಣಿಗಳ ತಾಣವೇ ? ಇವೆಲ್ಲವೂ ಹೌದು. ಮತ್ತೆ ಇನ್ನೂ ಏನೇನೋ ! ಕರ್ನಾಟಕ ಇತಿಹಾಸದಲ್ಲಿ ಬಡ ಶಾಲಾಮಾಸ್ತರ ಮಗನೊಬ್ಬ, ಕನ್ನಡಿಗ, ತನ್ನ ಕನಸನ್ನು ನೇಯ್ದು, ಸಾಕಾರದ ವಸ್ತ್ರವನ್ನು ಜನತೆಗೆ ಕೊಟ್ಟು, ಸುಮಾರು ೮೨,೦೦೦ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ, ದೇಶವಿದೇಶಗಳ, ಜಾಣ-ಜಾಣೆಯರ ರೋಲ್ ಮಾಡೆಲ್ ಆಗಿದ್ದರೂ, ನಮ್ಮಜನತೆಗೆ ಅದನ್ನು…
ಲೇಖಕರು: anivaasi
ವಿಧ: ಬ್ಲಾಗ್ ಬರಹ
January 28, 2008
ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ? ಕಾಣಬೇಕೆಂದರೆ ಎರಡೆರಡು ಕನ್ನಡಿ, ಹಿಂದಕ್ಕೊಂದು ಮುಂದಕ್ಕೊಂದು ಇಲ್ಲದಿದ್ದರೆ ಸಲ್ಲ, ಅಷ್ಟೇ ಅಲ್ಲ, ಎಡಕ್ಕೆ ಕೈ ಹಾಕಿ ಕನ್ನಡಿಯ ಬಲವನ್ನು ಹಿಡಿಯಬರದಿದ್ದರೂ ಸಲ್ಲ. ಉಳಿದವರಿಗೆ ಸದಾ ಕಾಣುತ್ತಿದ್ದ ಇದು ಅಂತೂ ಕನ್ನಡಿಯಲ್ಲಿ ಕಡೆಗೂ ಕಂಡು ಕೆಣಕಿತು. ಹಟತೊಟ್ಟೆ. ಕೈ ತಿರುಚಿಕೊಂಡು ಹಿಂಚಾಚಿದೆ. ಬೆರಳ ತುದಿಗಷ್ಟೆ ತಾಕಿತು, ಇಲ್ಲವೇ ಇಲ್ಲ ಎಂಬಂತೆ…
ಲೇಖಕರು: agilenag
ವಿಧ: Basic page
January 27, 2008
ಮೊನ್ನೆ ಏನಾಯ್ತೂಂತೀರಿ . . . ಬೆಂಗಳೂರಿನಿಂದ ಮೈಸೂರಿಗೆ ಹೊಗ್ತಾ ಇದ್ದಾಗ, ಅರ್ಧ ದಾರಿ ಕ್ರಮಿಸಿದಮೇಲೆ, ನಾಲಗೆಯ ದ್ರವ ಆರತೊಡಗಿದಂತಾಗಿ, ಹಾಗು ಕಿಬ್ಬೊಟ್ಟೆಯು ತುಂಬಿಕೊಂಡುಬಂದು ದಾರಿ ಬದಿಯ ಒಂದು ದೊಡ್ಡ ಆಲದ ಮರದ ಕೆಳಗೆ ಕಾರನ್ನು ನಿಲ್ಲಿಸಿ, ನೀರಾವರಿ ಕಾರ್ಯವನ್ನು ಮೊದಲು ಮುಗಿಸಿ, ಡಿಕ್ಕಿಯಲ್ಲಿದ್ದ ಪ್ಲಾಸ್ಕಿನಿಂದ ಕಾಫಿಯನ್ನು ತೆಗೆದುಕೊಂಡು ಲೋಟಕ್ಕೆ ಬಗ್ಗಿಸಿಕೊಳ್ಳುತಿದ್ದಂತೆಯೇ , ಮೇಲಿನಿಂದ ದಡದಡನೆ ನಮ್ಮ ಪೂರ್ವೀಕರುಗಳ ಆಗಮನವಾಯಿತು. ಒಂದು ಕೆಂಪು ಮೂತಿಯ ಇಂಪೋರ್ಟೆಡ್ ಗಡವ,…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
January 27, 2008
    ಕಶ್ಟ ಇಶ್ಟಗಳ ನಡುವೆ ಬಾಳು            ಎಡರು-ತೊಡರು       ಕಶ್ಟವನ್ನು ಇಶ್ಟಪಟ್ಟಾಗ    ಚಿಗುರುವುದು ನಲಿವಿನ ಪಯಿರು
ಲೇಖಕರು: narendra
ವಿಧ: Basic page
January 27, 2008
ಅತ್ಯಂತ ಸಹೃದಯಿ ಕವಿ, ಮೃದುಮಾತಿನ, ಮಾನವೀಯ ಕಳಕಳಿಯ ಸಾಹಿತಿ ನಿಸಾರ್‌ ಅಹಮ್ಮದ್‌ಗೆ ಈ ಬಾರಿಯ ಪದ್ಮಶ್ರೀ ಒಲಿದಿದೆ. ಇದು ಕನ್ನಡಕ್ಕೆ, ಕನ್ನಡದ ಸಂಸ್ಕಾರಕ್ಕೆ ಸಂದ ಗೌರವ. ನಿಸಾರರ ಕವನಗಳಲ್ಲಿ ತುಂಬಿರುವ ಸಾತ್ವಿಕವಾದ ಸೌಂದರ್ಯಾನುಭೂತಿ , ಅಬ್ಬರದ ಸದ್ದುಗದ್ದಲವಿಲ್ಲದ ಶಬ್ದಸಂಸ್ಕೃತಿ, ನವಿರಾದ ಗೇಯತೆಯ ಸಾಕಾರ, ಹೃದಯವೈಶಾಲ್ಯ ಒಂದೊಂದೂ ಕನ್ನಡ ನಾಡಿನ ಸಾಮಾನ್ಯನ ಸಹಜ ಸಂಸ್ಕಾರವಾಗಿದೆ. ನಿಸಾರ್ ತಮ್ಮ ಸಾಹಿತ್ಯದಿಂದ ಮುಗಿಲಿಗೆ ಕೈಚಾಚಿದವರಲ್ಲ. ಅವರ ನಿಲುವು ನೀತಿಗಳೆಲ್ಲ ಸಾಮಾನ್ಯರಲ್ಲಿ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
January 27, 2008
ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಾದ ಚಂದ್ರಶೇಖರ್,ಹಾಗೂ ಪ್ರಸನ್ನರನ್ನು ನೋಡಿದ ನಾವು ಕುಂಬ್ಲೆಯನ್ನು ಸ್ಪಿನ್ನರ್ ಎಂದು ಒಪ್ಪಲು ರೆಡಿಯಿರಲಿಲ್ಲ. ಹೆಚ್ಚಿನ ಬಾರಿ ಅನಗತ್ಯ ಕಾರಣಕ್ಕೆ ಟೀಮಿನಿಂದ ಹೊರಹಾಕಿದಾಗಲೂ ನಮಗೆ ಬೇಸರ ಅಗಲಿಲ್ಲ. ರಾಜು,ಕಾರ್ತಿಕ್,ಹರಭಜನ್..ರ ಭಜನೆ ಮಾಡುತ್ತಿದ್ದೆವು ಹೊರತು ಕುಂಬ್ಲೆ ಇರಬೇಕಿತ್ತು ಎಂದು ಒಮ್ಮೆಯೂ ಹೇಳಿರಲಿಲ್ಲ. ಇಂಡಿಯಾದ ಕ್ಯಾಪ್ಟನ್ ಆಗಿ ಕುಂಬ್ಲೆಯನ್ನು ಆರಿಸಿದಾಗಲೂ 'ಧೋನಿ'ಆದರೆ ಒಳ್ಳೆಯದಿತ್ತು ಎಂದೆವು. ಏಟು ಬಿದ್ದಾಗಲೂ ಮುಖಕ್ಕೆ…
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
January 27, 2008
ಮಧ್ಯಾನ ಊಟವಿಲ್ಲದಿದ್ದರೂ ಜಾತ್ರೆಯಲ್ಲಿ ಕೊಂಡು ತಿಂದ ಸಂಕ್ರಾಂತಿಯ ಕಬ್ಬು ನನ್ನನ್ನು ಮತ್ತಷ್ಟು ಉತ್ಸಾಹಿಯಾಗಿಸಿತ್ತು. ಕಬ್ಬಿನ ರುಚಿಯೇ ಹಾಗಿತ್ತು ಅನ್ನಿ! ಜರ್ಜರಿತವಾಗಿದ್ದ ಜಾತ್ರೆಯ ಜನದಟ್ಟಣೆ ೩ ಗಂಟೆಯ ನಂತರ ಕಡಿಮೆಯಾಗುತ್ತಾ ಬಂತು. ಮತ್ತೆ ಬೆಟ್ಟದತ್ತ ನಮ್ಮ(ನಾನು, ಕಾಕಾ, ಲೋಕನಥ ಸರ್) ಸವಾರಿ. ನನಗಂತು ಜಾತ್ರೆಯ ಪ್ರತಿಯೊಂದು ದೃಶ್ಯವೂ ವಿನೊತನವೆನಿಸುತ್ತಿತ್ತು. ಹೀಗೂ ಉಂಟೆ ಅಂತ! ಮೈಲಾಪುರದಲ್ಲಿ ಬಸ್ ಸ್ಟ್ಯಾಂಡ್ ಅಂತ ಇಲ್ಲ. ಆದರೆ ಜಾತ್ರೆಯ ಸಮಯದಲ್ಲಿ ಬೆಟ್ಟದ…
ಲೇಖಕರು: svnaik.p
ವಿಧ: ಚರ್ಚೆಯ ವಿಷಯ
January 26, 2008
ಹಲೋ ಸ್ನೇಹಿತರೇ ಹೆಸರು, Chandrashekar ಊರೂ, Bengalore (Malleswaram) ಸ್ವಂತ ಉರು ಹೊನ್ನಾವರ (ಉತ್ತರ ಕನ್ನಡ) ಕೆಲಸ, OFFICE BOY in Software Companyಯಲ್ಲಿ (small Company 6 employs) ನಾನು 10ನೇ ಕ್ಲಾಸ್ ಪಾಸಾಗಿದ್ದೇನೇ. ಯಾವಾಗ್ಲೂ officalli ಕುತ್ಗೊಂಡೆ ಈರ್ಬೇಕು ತೂನ್ಬಾ ಬೇಜಾರು ಆಗ್ತಾ ಇದೆ. ಆದ್ರೂ ನಾನು ಇಲ್ಲೇ COMPUTER ಕಲ್ತಿದ್ದೇನೆ (Basic Networking, Hardware,software instalation, photoshopಲ್ಲಿ ನಮ್ಮ companyಯಲ್ಲಿ work ಮಾಡುವಂತ…
ಲೇಖಕರು: Nitte
ವಿಧ: Basic page
January 26, 2008
ನಡೆ ನಿನ್ನದು ಚುರುಕಾಗದೆ ಹೀಗೇಕೆ ಸಾಗಿದೆ ಮೆಲ್ಲಗೆ... ಕಾರಣವಿಲ್ಲದ ಈ ನಗು ಈಗೇಕೆ ಮಿ೦ಚೆರಗಿದ೦ತೆ ಇಲ್ಲಿ ನನಗೆ... ನೂರಾಸೆಯು ಹೊ೦ಗನಸುಗಳು ಅಡಗಿದೆಯೆ ನಿನ್ನ ಕ೦ಗಳಲ್ಲಿ... ಒಮ್ಮೆ ಬಳಿ ಬ೦ದು ನಗುತ ಹೇಳೆ ಎನಿದೆಯೇ ನಿನ್ನ ಮನದಲ್ಲಿ... ಮೆಲ್ಲ ಬಳುಕುತ ತಿರುಗಿ ನೊಡುತ ನೀ ನಡೆದಿರುವೆ ಹೀಗೆ ಯಾರ ಹಾದಿಯಲ್ಲಿ...? ನಿನ್ನ ಮುಡಿ ಮಲ್ಲಿಗೆಯು ತುಸು ನಾಚದೆ ತಲೆ ಎತ್ತಿದೆ ಜ೦ಭದಲ್ಲಿ... ನಿನ್ನ ಕಾಲ್ಗೆಜ್ಜೆಯು ವೀಣೆಯ ಮೀರಿಸಿದೆ ಸಿಹಿ ಗಾನ ಅದರ ಕೊರಳಿನಲ್ಲಿ... ತ೦ಗಾಳಿಗು ನಶೆ ಎರಿದೆ…