ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ
- ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: tarlesubba (Oct 8 2007 - 5:47am)
- ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: ritershivaram (Jun 7 2007 - 6:11pm)
- ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: ritershivaram (Jun 7 2007 - 6:11pm)
- Re: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: mnsrao (Apr 2 2007 - 1:16am)
- ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ By: ಪ್ರದೀಪ್ ಬೆಳಗಲ್ (Jan 17 2006 - 9:29pm)
- ತರ್ಕಬದ್ಧವಾಗಿದೆ By: tvsrinivas41 (Aug 12 2005 - 11:03pm)
- ನಿಮ್ಮ ವಿಚಾರಗಳು ನಿಜಕ್ಕೂ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. By: (Aug 12 2005 - 9:04pm)
- ವಾಸ್ತವ ಚಿತ್ರಣ By: hpn (Aug 12 2005 - 3:12pm)
- Re: ವಾಸ್ತವ ಚಿತ್ರಣ By: ವೈಭವ (Apr 2 2007 - 9:55am)
- ವಸ್ತುಸ್ಥಿತಿ By: ಶ್ಯಾಮ ಕಶ್ಯಪ (Aug 12 2005 - 11:48pm)


RSS:
ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ
ಇಂಗ್ಲೀಷ್ ಹಾಗೂ ಕನ್ನಡದ ಬಗೆಗಿನ ಚರ್ಚೆ ಹೆಚ್ಚೂ ಕಡಿಮೆ ನಿಂತು ಹೋಗಿದೆ. ಬಹುಶಃ ಮತ್ತೆ ಶಾಲೆ ಪ್ರಾರಂಭವಾಗುವ ವೇಳೆಗೆ ಚಾಲೂ ಆದರೂ ಆದೀತು.
ಇಂಗ್ಲೀಷ್ ನ್ನು ಒಂದನೇ ತರಗತಿಯಿಂದ ಪ್ರಾರಂಭಿಸಲು ಒಪ್ಪಿ, ಜೊತೆ ಜೊತೆಗೆ ಕನ್ನಡ ಮಾಧ್ಯಮ ಕಡ್ಡಾಯ ಜಾರಿ ಎಂಬ ಬೇಡಿಕೆಯನ್ನೂ ಗಂಭೀರವಾಗಿ ಪರಿಗಣಿಸುವಂತೆ ಒಂದು ರಾಜಿಸೂತ್ರವನ್ನೂ ತಯಾರಿಸಲಾಯಿತು. ಆಮೇಲೇನಾಯಿತು ತಿಳಿಯದು.
ಇಂಗ್ಲೀಷ್ ನ್ನು ಒಂದನೇ ಕ್ಲಾಸ್ ನಿಂದ ಪ್ರಾರಂಭಿಸುವುದರ ಬಗೆಗೆ ನನಗಿರುವ ಸಮಸ್ಯೆಯೆಂದರೆ ಅದು ಕುಗ್ಗುತ್ತಿರುವ ಕನ್ನಡ ಬಳಕೆಯನ್ನು ಇನ್ನಷ್ಟು ಕುಗ್ಗಿಸುವ ಸಾಧ್ಯತೆ ಇರುವುದು.ಬದಲಾಗಿ ಇಂದು ಆಗಬೇಕಾಗಿರುವುದು ಕನ್ನಡದ ಬಳಕೆಯ ಹಿಗ್ಗುವಿಕೆ.
ಆದರೆ ಬಗೆಗಿನ ಬುದ್ಧಿಜೀವಿಗಳ ಕಾಳಜಿ ಪೂರ್ಣ ಅರ್ಥ ನನಗಿನ್ನೂ ಅರಿವಾಗಿಲ್ಲ. ಉದಾಹರಣೆಗೆ ಕನ್ನಡಕ್ಕೆ ಕ್ಲಾಸಿಕಲ್ ಭಾಷೆಯ ಸ್ಥಾನಮಾನ ಕೊಡುವ ಬಗೆಗೆ ಒತ್ತಾಯಿಸುವುದು ಸರಿಯೇ. ಆದರೆ ಕನ್ನಡವನ್ನೊಳಗೊಂಡೂ ಎಲ್ಲಾ ಭಾಷೆಗಳಿಗೂ ರಾಷ್ಟ್ರೀಯ ಭಾಷೆ ಸ್ಥಾನಮಾನ ಕೊಡುವ ಬಗೆಗೆ ಒತ್ತಾಯಗಳು ಏಕೆ ಬರುತ್ತಿಲ್ಲ?
ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ತನ್ನ ಅಜೆಂಡಾದಲ್ಲಿ `ಎಲ್ಲಾ ಶೆಡ್ಯೂಲ್ ಎಂಟರಲ್ಲಿರುವ ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಕೊಡುವ ಬಗೆಗೆ ಅಧ್ಯಯನ ಮಾಡಲು ಸಮತಿಯೊಂದನ್ನು ರಚಿಸುವ ಅಶ್ವಾಸನೆ ಕೊಟ್ಟಿದೆ` (ತಮಿಳಿಗೆ ಕ್ಲಾಸಿಕಲ್ ಭಾಷೆಯ ಸ್ಥಾನಮಾನ ನೀಡುವ ಬಗೆಗಿನ ಯುಪಿಎನ ಅಶ್ವಾಸನೆ ಪ್ರಾಂತೀಯ ಭಾಷೆಗಳ ಬಗೆಗಿನ ಅಶ್ವಾಸನೆಯ ನಂತರ ಬರುತ್ತದೆ. ಅದರೆ ಅದನ್ನು ಮೊದಲು ಮಾಡಲಾಯಿತು. ಅಲ್ಲದೆ ಪ್ರಾಂತೀಯ ಭಾಷೆಗಳ ಬಗೆಗಿನ ಈ ಅಶ್ವಾಸನೆ ಹಿಂದಿನ ಎನ್‌ಡಿಎ ಅಜೆಂಡಾದಲ್ಲಿ ಸಹ ಇತ್ತು.) ಇದರ ಪರಿಣಾಮಗಳೇನು ಹಾಗೂ ಇದು ಕನ್ನಡ ಹಾಗೂ ಇತರ ಪ್ರಾಂತೀಯ ಭಾಷೆಗಳ ಬಳಕೆಯ ವ್ಯಾಪ್ತಿಯನ್ನು ಹಿಗ್ಗಿಸುತ್ತದೆಯೇ ಎಂಬುದರ ಬಗೆಗೆ ಇಂದು ಚರ್ಚೆಗಳು ನಡೆಯುತ್ತಿಲ್ಲ. ಈ ಬಗೆಗೆ ಒತ್ತಾಯ ತರುವುದು ಅಗತ್ಯವಿಲ್ಲವೇ?
ಇದು ನಮ್ಮ ಆದ್ಯತೆಗಳ ಸ್ವರೂಪವನ್ನು ಸೂಚಿಸುತ್ತದೆಯೇ?
ಭಾಷೆಗಳ ಸಾವಿನ ಬಗೆಗೆ ಇಂದು ಚರ್ಚೆಯಾಗುತ್ತಿದೆ. ವಾಣಿಜ್ಯ, ಉದ್ಯಮ ಹಾಗೂ ಜ್ಞಾನ ಮಾಧ್ಯಮವಾಗಿ ಬಳಸದೆ ಕನ್ನಡವನ್ನೂ ಒಳಗೊಂಡು ಯಾವ ಪ್ರಾಂತೀಯ ಭಾಷೆಗಳೂ ಉಳಿಯಲಾರವು. ಅವುಗಳ ಸಾವಿನ ಮಹೂರ್ತ ಭಿನ್ನವಾಗ ಬಹುದಷ್ಟೆ. ಇದು ತಕ್ಷಣ ಆಗುತ್ತದೆ ಎಂದೇನೂ ಅಲ್ಲ, ಬಳಕೆಯನ್ನು ಕಳೆದು ಕೊಂಡ ಭಾಷೆಗಳಿಗೆ ಭವಿಷ್ಯವಿಲ್ಲ, ಅವು ಸಾವಿನೆಡೆ ದೂಡಲ್ಪಡುತ್ತವೆ.
ಹಾಗಾದರೆ ನಾವು ಎತ್ತ ಸಾಗುತ್ತಿದ್ದೇವೆ?