ಪಾಲ್ ಲಿಂಚ್ ಅವರ 'ಪ್ರೊಫೆಟ್ ಸಾಂಗ್' ಮತ್ತು ಚುನಾವಣೆಯ ನಂತರದ ದಿನಗಳು...!
1 day 7 hours ago - ಬರಹಗಾರರ ಬಳಗನಾನು ರಾಜಕೀಯ ವಿಮರ್ಶಕನಲ್ಲ; ಅಲ್ಲದೇ, ಹಿಂದೆಂದೂ ರಾಜಕೀಯದ ಆಗು-ಹೋಗುಗಳ ಕುರಿತು, ಅಥವಾ ರಾಜಕೀಯ ಪಕ್ಷಗಳ ಸಮರ್ಥನೆಯಲ್ಲೂ-ವಿರೋಧದಲ್ಲೂ, ಅಥವಾ ರಾಜನೀತಿಜ್ಞ/ರಾಜಕಾರಣಿಯನ್ನು ಪರಿಚಯಿಸುವ ಲೇಖನವನ್ನು ಎಂದಿಗೂ ಬರೆಯಲಿಲ್ಲ. ಬರೆಯುವುದೂ ಇಲ್ಲ ಅಂತ ನನ್ನ ಧೃಢ ನಿರ್ಧಾರವೂ ಇದೆ. ಆದರೆ, ಕಳೆದ ನವೆಂಬರ್ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬಕ್ಕೆ ನನ್ನ ಮಿತ್ರನೊಬ್ಬನು ನನಗೆ 'ಪಾಲ್ ಲಿಂಚ್' ಅವರ 'ಅಂತಾರಾಷ್ಟ್ರೀಯ ಮ್ಯಾನ್ ಬುಕರ್ ಪ್ರಶಸ್ತಿ' ವಿಜೇತ ಪುಸ್ತಕ 'Prophet Song' ಉಡುಗೊರೆಯಾಗಿ ನೀಡಿದರು. ಪುಸ್ತಕ ಪ್ರಾರಂಭಿಸುತ್ತಿದ್ದಂತೆ ಪ್ರತಿ ವಾಕ್ಯವೂ ನನಗೆ ದಿಙ್ಮೂಢಿಸಲು ಪ್ರಾರಂಭಿಸಿ, ಮಂತ್ರಮುಗ್ಧಗೊಳಿಸಲು ಯತ್ನಿಸಿತು. ಪುಸ್ತಕ ಓದಿ ಮುಗಿಸುತ್ತಿದ್ದಂತೆ ನನಗೊಂದು ಕಹಿ ವಿಚಾರ ಕಾಡಲು ಆರಂಭಿಸಿತು. ಅದುವೇ, ಕಾದಂಬರಿಯಲ್ಲಿ ಚರ್ಚಿಸಲ್ಪಟ್ಟ ಸರಣಿ ದುರ್ಘಟನೆಗಳು ಅತ್ಯಂತ ಅಸಾಧ್ಯವಾದ ದೇಶದಲ್ಲಿ ಸಂಭವಿಸಬಹುದಾದರೆ, ಅದು ಎಲ್ಲೆಡೆ ಸಂಭವಿಸಬಹುದೆಂಬ ಆತಂಕ.
'ಪ್ರಾಫೆಟ್ ಸಾಂಗ್' ನೀಳ್ಗತೆಯನ್ನು ಆಳ-ಅಗಲಕ್ಕೆ ವಿಮರ್ಶಿಸುವ ಅಗತ್ಯವಿಲ್ಲ; ಅದರ, ಸಂಕ್ಷಿಪ್ತ ಸಾರಾಂಶದಿಂದಲೇ ನಮ್ಮ ಭವಿತವ್ಯವನ್ನು ಅವಲೋಕಿಸಲು ಸಾಧ್ಯ ಎಂಬುವುದು ನನ್ನ ವ್ಯಕ್ತಿಗತ ಅಭಿಪ್ರಾಯವಾಗಿದೆ. ಐರ್ಲೆಂಡ್ ದೇಶದ ಹತ್ತಿರದ ಭವಿಷ್ಯದಲ್ಲಿ, ಬಲಪಂಥೀಯ ರಾಷ್ಟ್ರೀಯ ಮೈತ್ರಿ ಪಕ್ಷವು [National Alliance Party] ಬಲವಾಗಿ ಹಿಡಿತ ಸಾಧಿಸಿ, ಐರಿಶ್ ಸಂವಿಧಾನವನ್ನು ಅಮಾನತುಗೊಳಿಸಿದೆ. ಮೈತ್ರಿ ಕೂಟವು ಹೊಸ ರಹಸ್ಯ ಪೊಲೀಸ್ ಪಡೆಯಾದ 'ಸಿನಿಸ್ಟರ್ ಗಾರ್ಡ ನ್ಯಾಷನಲ್ ಸರ್ವಿಸ್ ಬ್ಯುರೋ'ವನ್ನು ತಮ್ಮ ನಿಗೂಢ ಕಾರ್ಯಗಳನ್ನು ನಿರ್ವಹಿಸಲು ಸ್ಥಾಪಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದರೊಂದಿಗೆ ನಾಗರಿಕ ಸ್ವಾತಂತ್ರ್ಯಗಳು ಹರಣ… ಮುಂದೆ ಓದಿ...