‘ಅಡಿದಾಸ್' ಸಂಸ್ಥೆ ಹುಟ್ಟಿದ್ದು ಹೇಗೆ ಗೊತ್ತೇ?
1 day ago - Ashwin Rao K Pನೀವು ಕ್ರೀಡೆಗಳಲ್ಲಿ ಆಸಕ್ತರಾಗಿದ್ದರೆ ನಿಮಗೆ ಅಡಿದಾಸ್ (ಅಡಿಡಾಸ್), ನೈಕಿ, ರೀಬೋಕ್ ಮೊದಲಾದ ಸಂಸ್ಥೆಗಳು ಗೊತ್ತೇ ಇರುತ್ತವೆ. ಆ ಸಂಸ್ಥೆಗಳ ಲೋಗೋ ನೋಡಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ಆ ಸಂಸ್ಥೆಯ ಹೆಸರು ಅಚ್ಚೊತ್ತಿದಂತೆ ಮೂಡಿಬರುವುದರಲ್ಲಿ ಸಂಶಯವಿಲ್ಲ. ಶೂ ಕಂಪೆನಿಯೊಂದು ವಿಶ್ವ ದರ್ಜೆಯ ಕ್ರೀಡಾ ಸಾಮಾಗ್ರಿಗಳನ್ನು ತಯಾರಿಸುವ ಕಂಪೆನಿಯೂ ಆಗಿ, ಹಲವಾರು ಕ್ರೀಡೆಗಳನ್ನು ಪ್ರಾಯೋಜಿಸುವತ್ತಲೂ ಹೆಜ್ಜೆ ಹಾಕುತ್ತಿರುವ ಅದ್ವೀತೀಯ ಕಂಪೆನಿಯಾಗಿ ಅಡಿದಾಸ್ ಬೆಳೆದದ್ದು ಹೇಗೆ ಗೊತ್ತೇ?
ರಸ್ತೆ ಬದಿಯಲ್ಲಿ ಕೂತು ಗ್ರಾಹಕರ ಹರಿದ ಚಪ್ಪಲಿ ಹೊಲಿಯುತ್ತಿದ್ದ ಅಡಾಲ್ಫ್ ಡಾಸ್ಲರ್ (Adolf Dassler) ಎಂಬ ಜರ್ಮನ್ ವ್ಯಕ್ತಿಗೆ ತಾನೂ ಸೊಗಸಾದ ಚಪ್ಪಲಿ, ಶೂ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎನ್ನುವ ಯೋಚನೆ ಬಂತು. ಆದರೆ ಆತ ತನ್ನ ಈ ಯೋಚನೆ ಮುಂದೊಂದು ದಿನ ತನ್ನದೇ ಆದ ಬ್ರಾಂಡ್ ಹೊಂದಿ ಹೊಸದಾದ ಸಾಮ್ರಾಜ್ಯವನ್ನು ಸೃಷ್ಟಿಸುತ್ತೇನೆ ಎಂದು ಕಲ್ಪನೆ ಸಹಾ ಮಾಡಿರಲಿಕ್ಕಿಲ್ಲ. ಆದರೆ ನಂತರ ಭವಿಷ್ಯದ ದಿನಗಳಲ್ಲಿ ಆದದ್ದು ಪವಾಡವೇ...
ಅಡಾಲ್ಫ್ ಡಾಸ್ಲರ್ ಹುಟ್ಟಿದ್ದು ೧೯೦೦ರಲ್ಲಿ ಜರ್ಮನಿಯ ಅತ್ಯಂತ ಕಡು ಬಡತನವಿದ್ದ ಕುಟುಂಬವೊಂದರಲ್ಲಿ. ಆದರೆ ಅವರ ಕನಸುಗಳಿಗೆ ಬಡತನವೂ ಇರಲಿಲ್ಲ, ಅದಕ್ಕೆ ಯಾವ ಎಲ್ಲೆಯೂ ಇರಲಿಲ್ಲ. ಇವರ ತಂದೆಯ ಕಸುಬು ಚಪ್ಪಲಿ ಹೊಲಿಯುವುದೇ ಆಗಿದ್ದುದರಿಂದ ಅಡಾಲ್ಫ್ ಅವರೂ ಚಪ್ಪಲಿ ಹೊಲಿಯುವುದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಅಡಾಲ್ಫ್ ಅವರ ತಾಯಿ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ತಂದೆಯ ಜೊತೆ ಚಪ್ಪಲಿ, ಶೂ ರಿಪೇರಿ ಮಾಡಲು ಪ್ರಾರಂಭಿಸಿದ ಅಡಾಲ್ಫ್ ಬಹುಬೇಗನೇ ಆ ಕ್ಷೇತ್ರದಲ್ಲಿ ಪರಿಣತಿಯನ್ನು… ಮುಂದೆ ಓದಿ...