ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಹಿತಮಿತವದು ಶ್ರೇಷ್ಠ

ಹಿತಮಿತವರಿತ

ವಿಜ್ಞಾನವೇ-

ಈ ಜಗದ

ಮಾನವ

ಕುಲಕದು

ಶ್ರೇಷ್ಠ...

 

ಅತಿಯಾದ

ವಿಜ್ಞಾನ-

ತರುವುದು

ಗೋರಿಯ

ವಿನಾಶದ

ಅನಿಷ್ಟ!

***

ವ್ಯತ್ಯಾಸ...

ಈ ಸಂಸಾರ

ಸಾಗರದ ಅಲೆಗಳ

ಹೊಡೆತದಿಂದ

ಗಡ್ಡ ಬಿಟ್ಟು

ಕೊರಗುವರೇ

ಗಂಡಸರು...?

 

ಅದೇ ಅಲೆಗಳ

ಹೊಡೆತಗಳ

ನೀರಿಂದ

ಮುಖ ತೊಳೆದು

ಮಿಂಚಿ ನಗುವರೇ

ಈ ಹೆಂಗಸರು!

***

ಗದ್ದಲದೊಳಗೊಂದು ಸದ್ದಿಲ್ಲದ ಸ್ವಾರ್ಥ...

ಸಭಾಪತಿ,ಸಭಾಧ್ಯಕ್ಷ

ಸಿಎಂ, ಸಚಿವರು

ಶಾಸಕರ ವೇತನ

ಮತ್ತು ಭತ್ಯೆ-

ಚರ್ಚೆ ಇಲ್ಲದೆ

ಮಗುಮ್ಮಾಗಿ ಅಂಗೀಕಾರ...

 

ಇದು ಆರಸಿದವರ

ಚತುರೋಪಾಯ-

ಗದ್ದಲದೊಳಗೊಂದು

ಸದ್ದಿಲ್ಲದ, ಸದ್ದು-

ಸ್ವಾರ್ಥದ

ಸ್ವಯಂ ಉಪಕಾರ!

***

ಖಾಪ್ರಿ ದೇವರ ಮದ್ಯದ ಜಾತ್ರೆ...

ಖಾಪ್ರಿ ದೇವರ

ಮದ್ಯದ ಜಾತ್ರೆ-

ಮದ್ಯದ ಬಾಟಲು

ಕ್ಯಾಂಡಲ್

ಸಿಗರೇಟ್

ಅರ್ಪಣೆ....

 

ಯಥಾ ಪ್ರಜಾ

ತಥಾ ದೇವ್ರು-

ಅಮಲಿನಲ್ಲಿಯಾದರೂ

ದೇವರು ಪ್ರತ್ಯಕ್ಷನಾಗಿ

ವರ ಕೊಟ್ಟಾನೇನೋ

ಎಂಬ ಭಕ್ತರ ಭ್ರಮೆ!

***

ಸ್ವಾಮಿಕಾರ್ಯ-ಸ್ವಕಾರ್ಯ 

ಸರ್ಕಾರದ 

ಲೋಕೋಪಕಾರಿ ಕಾರ್ಯಗಳ

ಹಣ ಬಿಡುಗಡೆಗೆ

ವಿಧಾನ ಸಭೆಯಲಿ

ಅದೆಷ್ಟು ಚರ್ಚೆ

ವೀರಾವೇಶದ ಅಡೆ-ತಡೆ...

 

ಶಾಸಕರ ವೇತನ ಭತ್ಯೆ-

ಚರ್ಚೆ,ಸದ್ದುಗದ್ದಲವಿಲ್ಲದೆ

ಮಂಡನೆಯಾಗಿ

ಸರ್ವಸದಸ್ಯರ

ಮೌನದೊಪ್ಪಿಗೆಯಾದ

ಮಸೂದೆ ಇದೊಂದೇ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್