ಗುರುವಿಗೆ ನನ್ನದೊಂದು ನಮನ

ಗುರುವಿಗೆ ನನ್ನದೊಂದು ನಮನ

ಕವನ

ಕಪ್ಪು ಹಲಗೆಯ ಮೇಲೆ

ಮುತ್ತಿನಂತ ಅಕ್ಷರ ಬರೆಯಿಸಿ

ಮನದ ಕತ್ತಲೆಯನ್ನು ಅಕ್ಷರದಿಂದಲೇ ಅಳಿಸಿ

ಬದುಕ ಬೆಳಗಿಸಿದ ಗುರುವಿಗೆ ನನ್ನದೊಂದು ನಮನ..!!

 

ಅಜ್ಞಾನ ತುಂಬಿದ ತಲೆಯಲ್ಲಿ

ಜ್ಞಾನವೆಂಬ ಜ್ಯೋತಿಯ ಬೆಳಗಿಸಿ

ತಪ್ಪು ಮಾಡಿದಾಗ ತಿದ್ದಿ ತೀಡಿ ಶಿಕ್ಷಿಸಿ

ಸನ್ಮಾರ್ಗದೆಡೆಗೆ ನಡೆಸಿದ ಗುರುವಿಗೆ ನನ್ನದೊಂದು ನಮನ..!!

 

ಕಲ್ಲಿನಂತಿರುವ ವಿದ್ಯಾರ್ಥಿಗಳಿಗೆ

ಸ್ಪರ್ಧಾತ್ಮಕ ಮನೋಭಾವ ಬೆಳಸಿ

ಸರಿಯಾದ ಮಾರ್ಗದರ್ಶನ ನೀಡಿ

ಭವಿಷ್ಯ ರೂಪಿಸಿದ ಗುರುವಿಗೆ ನನ್ನದೊಂದು ನಮನ..!!

 

ವಿಶಾಲವಾದ ಮೈದಾನದಲ್ಲಿ

ಸಾಧನೆ ಎಂಬ ಕಿಚ್ಚು ಹೊತ್ತಿಸಿ

ಎಡವಿ ಬಿಳ್ಳದಂತೆ ಆಟವಾಡಿಸಿ

ದೈಹಿಕ ಶಕ್ತಿ ಹೆಚ್ಚಿಸಿದ ಗುರುವಿಗೆ ನನ್ನದೊಂದು ನಮನ..!!

 

ಶಿಸ್ತುಬಧ್ಧ ಸುಂದರ ಬದುಕಿಗೆ

ಸಂಸ್ಕಾರ ಎಂಬ ನೀತಿಯ ಭೋಧಿಸಿ

ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ

ಹಗಲಿರುಳು ಶ್ರಮಿಸಿದ ಗುರುವಿಗೆ ನನ್ನದೊಂದು ನಮನ..!!

 

ಒಡೆದು ಹೋದ ಕನ್ನಡಿಯಂತಿದ

ಒರಟು ಮನಸ್ಸುಗಳಿಗೆ ಆತ್ಮಸ್ಥೈರ್ಯ ತುಂಬಿ

ಮನೋಬಲವ ಹೆಚ್ಚಿಸಿ ಗುರಿ ತಲುಪಲು ಮುನ್ನುಡಿ

ಬರೆದ ಸಕಲ ಗುರು ವೃಂದಕ್ಕೆ ನನ್ನದೊಂದು ನಮನ..!!

 

-‘ಪುಷ್ಪಕವಿ’ ಉಮೇಶ ಹೂಗಾರ, ಮಹಾಲಿಂಗಪೂರ 

 

ಚಿತ್ರ್