ನವ-ಭಾರತ
ಬರಹ
ಒಮ್ಮೆ ಇಣುಕಿ ನೋಡಿದೆ ,ಭಾರತದಿ
ಅತ್ತ -ಇತ್ತ , ಸುತ್ತ -ಮುತ್ತ ಮತ್ತು
ಎತ್ತ ಕಣ್ಣ ಹಾಯಿಸಿದರೂ ಗಾವರ ;
ಗದ್ದಲ ,ಬರಿಗದ್ದಲ ,ನಿತ್ಯ ಗದ್ದಲ .
ಕೋಮು ಸೌಹಾರ್ದವ ಭಾಷಣ
-ಗಳಲಿ ಕೊರೆಯುವ ಇವರು
'ಪುರಾತನ ಸಹೋದರರ ' ಮನದಲಿ
ವಿಷದ ಬೀಜ ಬಿತ್ತುವರು .
ಅದಕೆ ನೀರೆರೆದು ಪೋಶಿಸಿ
ಬೆಳೆಸುವರು ಡಾ೦ಭಿಕ ಸಾಮರಸ್ಯದಿ
ಬೀಜ ಗಿಡವಾಗಿ , ಹೆಮ್ಮರವಾಗುವುದು
ತಲೆ ಎತ್ತಿ ನಿಲ್ಲುವುದು ಗಟ್ಟಿಮುಟ್ಟಾದ ದೇಹ ಹೊತ್ತು .
ಒ೦ದಿಬ್ಬರು ಕೊಡಲಿ ಏಟ ನೀಡಿದರು.
ಬಗ್ಗಲಿಲ್ಲ , ಜಗ್ಗಲಿಲ್ಲ , ತುಟಿಪಿಟಿಕ್ಕೆನ್ನಲಿಲ್ಲ,
ಸ್ಥೂಲಕಾಯ ಅದು ; ನೀಡುತಿರುವರು,
ನೀಡುತಲೇ ಇರುವರು :ಏಟ- ಇವರ ಸ೦ತತಿಗಳು