ಬುಧವಾರದ ಫಿಫಾವಿಶ್ವಕಪ್ಪಿನಲ್ಲಿ, ಅರ್ಜೇಂಟೈನದ ಆಟ, ಕಲಾತ್ಮಕ ಹಾಗೂ ರಕ್ಷಾತ್ಮಕ ವಾಗಿತ್ತು !

ಬುಧವಾರದ ಫಿಫಾವಿಶ್ವಕಪ್ಪಿನಲ್ಲಿ, ಅರ್ಜೇಂಟೈನದ ಆಟ, ಕಲಾತ್ಮಕ ಹಾಗೂ ರಕ್ಷಾತ್ಮಕ ವಾಗಿತ್ತು !

ಬರಹ

ಫಿಫಾ ವಿಶ್ವಕಪ್: ಇಂದು, ಗುರುವಾರ, ೨೨, ಜೂನ್, ೨೦೦೬ ರಂದು ನಡೆಯಲಿರುವ ಆಟಗಳು:

ಸಾ.೭-೩೦ ಚೆಕ್ ರಿಪಬ್ಲಿಕ್ ವಿರುಧ್ದ ಇಟಲಿ 'ಇ' ಗ್ರುಪ್
ಸಾ.೭-೩೦ ಘಾನ ವಿರುಧ್ದ ಯು.ಎಸ್.ಎ 'ಇ'ಗ್ರುಪ್
ಮ.ರಾ.೧೨-೩೦ ಜಪಾನ್ ವಿರುಧ್ದ ಬ್ರೆಸಿಲ್ 'ಎಫ್'ಗ್ರುಪ್
ಮ.ರಾ.೧೨-೩೦ ಆಷ್ಟ್ರೇಲಿಯ ವಿರುಧ್ದ ಕ್ರೊವೇಷಿಯ 'ಎಫ್'ಗ್ರುಪ್

ಬುಧವಾರ, ೨೧, ಜೂನ್, ೨೦೦೬ ರಂದು ವಿಶ್ವ ಕಪ್ ಸಾಕರ್ ನಲ್ಲಿ ಆಡಿದ ಆಟಗಳ ವಿವರ:

೧. ಡಿ' ಗ್ರುಪ್: ವೆಲ್ಟಿನ್ಸ್ ಅರೆನ, ಗೆಲ್ ಸೆನ್ ಕಿರ್ಚಿನ್ ನಲ್ಲಿ. ಪೋರ್ಚುಗಲ್ ವಿರುಧ್ದ ಮೆಕ್ಸಿಕೊ ಆಟದಲ್ಲಿ ಪೋರ್ಚುಗಲ್ (೨-೧)ಗೋಲಿನಿಂದ ಗೆದ್ದು 'ಡಿ' ಟೀಮಿನಲ್ಲಿ ಮೊದಲ ಸ್ಥಾನದಲ್ಲಿದೆ. ಅವರ ಆಟಗಾರ ಮನಿಚ್ ೫ ನೆ ನಿಮಿಷದಲ್ಲಿ ಗೋಲ್ ಬಾರಿಸಿದರು.೨೪ ನೆ ನಿಮಿಷದಲ್ಲಿ ಸಿಮಾವೊ ಪೆನಾಲ್ಟಿ ಕಿಕ್ ಹೊಡೆದು ಪೋರ್ಚುಗಲ್ಲಿನ ಸ್ಥಿತಿಯನ್ನು ಉತ್ತಮ ಪಡಿಸಿದರು.ಮೆಕ್ಸಿಕೊ ಕಡೆ ೨೯ ನೆ ನಿಮಿಶದಲ್ಲಿ ಫ್ರಾನ್ಸಿಸ್ಕೊ ಫೊನ್ ಸೆಕ್ ಗೊಲ್ ಹೊಡೆದರು.ಪೋರ್ಚುಗಲ್ ಈಗ ೨ ನೆ ರಂಡ್ ಪ್ರವೇಷಿಸಿದ್ದು ನೆದರ್ ಲ್ಯಾಂಡ್ಸ್ ಅಥವ ಅರ್ಜೆಂಟೈನ್ ಜೊತೆಗೆ ಭಾನುವಾರದಂದು ಕಾದಲಿದೆ.ಶನಿವಾರದ ಆಟದಲ್ಲಿ ಮೆಕ್ಸಿಕೊ ಗ್ರುಪ್ 'ಸಿ 'ನಲ್ಲಿ ೨ನೆ ಸ್ಥಾನ ಪಡೆದ ತಂಡದೊಡನೆ ಸೆಣೆಸಲಿದೆ.

೨. ಡಿ' ಗ್ರುಪ್: ಝೆಂಟ್ರಾಲ್ ಸ್ಟೇಡಿಯಾನ್ ಲಿಪ್ ಝಿಗ್. ಇರಾನ್ ವಿರುದ್ಧ ಆಂಗೋಲದ 'ಡ್ರಾ' ಆಗಿ ಕೊನೆಗೊಂಡ ಆಟ ದಲ್ಲಿ, ಇರಾನ್ ಪರವಾಗಿ ೭೫ ನೇ ನಿಮಿಷದಲ್ಲಿ ಸೊಹ್ರಾಬ್ ಬಕ್ತಿಯಾರ್ ಇಝಾದೇಹ್ ,ಗೊಲ್ ಹೊಡೆದರು. ೬೦ ನೆ ನಿಷದಲ್ಲಿ ಆಂಗೊಲದ ಆಟಗಾರ ಫ್ಲೇವಿಯೊ, ಗೊಲ್ ಬಾರಿಸಿದರು.

೩. ಸಿ' ಗ್ರುಪ್: ಅಲಿಯನ್ಸ್ ಅರೇನಾ , ಮ್ಯುನಿಕ್. ಐವರಿ ಕೊಸ್ಟ್ ವಿರುಧ್ದ ಸರ್ಬಿಯ ಮಾಂಟೆನೆಗ್ರೊ ಗಳ ಸೆಣೆಸಾಟದಲ್ಲಿ, ೩-೨ ಗೊಲ್ ನಿಂದ ಐವರಿಕೊಸ್ಟ ಮುಂದಿದೆ. ಐವರಿಕೊಸ್ಟನ ಅರುನ ದಿಂಡನೆ, ಪೆನಾಲ್ಟಿ ಗೊಲ್ ಹೊಡೆದು ೩೬ ನೆ ನಿಮಿಷದಲ್ಲಿ ಒಂದು ಗೊಲ್ ಮಾಡಿದರು. ಅವರು ಇನ್ನೊಂದು ಗೊಲ್, ೬೬ ನೆ ನಿಮಿಷದಲ್ಲು ಮಾಡಿದರು.೮೫ ನೇ ನಿಮಿಷದಲ್ಲಿ ಮತ್ತೊಂದು ಗೊಲ್ ಬಾರಿಸಿದವರು ಬೊನ್ ಸೆಂಚ್ಯುರೆ ಕಲಾವು. ಸರ್ಬಿಯ ಕಡೆ ೧೦ ನೆ ನಿಮಿಷದಲ್ಲಿ ನಿಕೊಲ್ ಝಿಜಿಚ್ ೨೦ ನೇ ನಿಮಿಷದಲ್ಲಿ, ಸಸ ಇಲಿಚ್, ತಲಾ ಒಂದು ಗೊಲ್ ಮಾಡಿದರು.

೪. 'ಸಿ' ಗ್ರುಪ್: ವಾಲ್ಡ್ ಸ್ಥೇಡಿಯನ್, ಫ್ರಾಂಕ್ ಫರ್ಟ್. ನೆದರ್ ಲ್ಯಾಂಡ್ಸ್ ವಿರುದ್ಧ ಆಡಿದ ,ಅರ್ಜೆಂಟೈನ ದ ಪಂದ್ಯ 'ಡ್ರಾ 'ನಿಂದ ಕೊನೆಗೊಂಡಿತು. ಅರ್ಜೆಂಟೈನಾ ಕಲಾತ್ಮಕವಾಗಿಯೂ ಮತ್ತು ರಕ್ಷಾತ್ಮಕವಾಗಿಯೂ ಆಡಿ, ತಮ್ಮ ತಂಡದ ಪ್ರಥಮಸ್ಥಾನದಲ್ಲಿದ್ದಾರೆ.

ಈಗಾಗಲೆ ಎ, ಬಿ, ಸಿ, ಡಿ ತಂಡಗಳು ತಮ್ಮ ಸೆಣಸಾಟ ಮುಗಿಸಿದ್ದು, ಅಂಕಗಳು ಹೀಗಿವೆ :
ಎ' ತಂಡ:

ಜರ್ಮನಿ-೯
ಇಕ್ವೆಡಾರ್ -೬
ಪೊಲೆಂಡ್- ೩
ಕೊಸ್ಟರಿಕ-೦

ಬಿ' ತಂಡ:

ಇಂಗ್ಲೆಂಡ್ -೭
ಸ್ವೀಡನ್ -೫
ಪರಗ್ವೆ -೩
ಟೀ ಮತ್ತು ಟಿ- ೧

ಸಿ' ತಂಡ:

ಅರ್ಜೆಂಟೈನ - ೭
ನೆದರ್ ಲ್ಯಾಂಡ್ಸ್-೭
ಐವರಿ ಕೊಸ್ಟ್ -೩
ಸರ್ಬಿಯ -೦

ಡಿ' ತಂಡ:

ಪೊರ್ಚುಗಲ್ -೯
ಮೆಕ್ಸಿಕೊ -೪
ಆಂಗೋಲಾ -೨
ಇರಾನ್- ೧