ಬೆಲ್ಲದ ತಾಕತ್ತು, ಸವಿದವನಿಗೇ ಗೊತ್ತು ! (ಭಾಗ ೨)

ಬೆಲ್ಲದ ತಾಕತ್ತು, ಸವಿದವನಿಗೇ ಗೊತ್ತು ! (ಭಾಗ ೨)

ವಿವಿಧ ಕಾಯಿಲೆಗಳ ಸಂಹಾರಕ್ಕೆ ಬೇಕೇ ಬೇಕು ಬೆಲ್ಲ: ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಿದೆ 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ ಇದರಿಂದ ಕರುಳಿನ ಕೆಲಸಕ್ಕೆ ಪ್ರಯೋಜನವಾಗುತ್ತದೆ ಮತ್ತು ಶ್ವಾಸಕೋಶದ ಸಮಸ್ಯೆಗೆ ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ನಿವಾರಣೆಯಾಗಲಿದೆ. ಎಳ್ಳು - ಬೆಲ್ಲ ಬೆರೆಸಿ ಸೇವಿಸಿದರೆ ಶ್ವಾಸಕೋಶ ಸಮಸ್ಯೆಗೆ ಉತ್ತಮ ಪರಿಹಾರವಾಗುತ್ತದೆ ಹಾಗೆ ಸಂಧಿ ನೋವಿದ್ದರೆ ಬೆಲ್ಲ ಉತ್ತಮ ನೋವು ನಿವಾರಕ ಔಷಧಿ ಶುಂಠಿ ಜೊತೆ ಬೆಲ್ಲ ಸೇವಿಸಿ ತಿನ್ನಬಹುದು ತಿನ್ನುವುದರಿಂದ ಸಂಧಿ ನೋವು ಖಂಡಿತಾ ವಾಸಿಯಾಗುತ್ತದೆ. ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ ಜೊತೆಗೆ ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ ಹಾಗೂ ತೂಕ ಇಳಿಸಲು ಬೆಲ್ಲ ಅತ್ಯುತ್ತಮ ಅಂಶ, ಪೊಟಾಶಿಯಂ ಹೆಚ್ಚಾಗಿರುವ ಕಾರಣ ಎಲೆಕ್ಟ್ರೊಲೈಟ್ ಗಳನ್ನು ಸಮತೋಲನ ಮಾಡಿ ಚಯಾಪಚಯ ಚೆನ್ನಾಗಿರಲು ಬೆಲ್ಲ ನೆರವಾಗುತ್ತದೆ. ಹೀಗಾಗಿ ತೂಕ ಇಳಿಸುವಲ್ಲಿ ಉತ್ತಮ ಜೊತೆಗೆ ಕಾರ್ಬೋಹೈಡ್ರೇಟ್ ದೇಹಕ್ಕೆ ಕೊಟ್ಟರೆ, ಬೆಲ್ಲ ದೇಹಕ್ಕೆ ಧೀರ್ಘ ಕಾಲದ ಶಕ್ತಿ ಕೊಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಸುವುದಿಲ್ಲ. ಸುಸ್ತು ಮತ್ತು ನಿಶ್ಶಕ್ತಿ ಇರುವವರಿಗೂ ಉತ್ತಮ - ಸಹಕಾರಿ ಎನ್ನುವುದು ನಾವ್ಯಾರು ಅಲ್ಲಗಳೆಯುವಂತಿಲ್ಲ ಹಾಗೂ ಶೀತ ಮತ್ತು ಕಫ, ಜ್ವರ ಇದ್ದಾಗ ಬೆಲ್ಲ ತಿನ್ನಬೇಕು. ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಿ ಕುಡಿಯುವ ಮೂಲಕ ಈ ರೋಗಗಳಿಗೆ

ಕಡಿವಾಣ ಹಾಕಬಹುದಾಗಿದೆ ಮತ್ತು ಕೆಮ್ಮು ಕಾಣಿಸಿದರೆ ಮತ್ತು ಕೋಲೆಸ್ಟ್ರಾಲ್ ಅತಿಯಾದಾಗ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು ಇದರಿಂದ ಕೆಮ್ಮು, ಕೋಲೆಸ್ಟ್ರಾಲ್ ತಡೆಗಟ್ಟಲು ಸಹಕಾರವಾಗುತ್ತದೆ, ಖಂಡಿತವಾಗುವುದರಲ್ಲಿ ಅನುಮಾನವೇ ಬೇಡ ಹಾಗೂ  ಉಸಿರಾಟ ತೊಂದರೆ ಇದ್ದರೆ ಬೆಲ್ಲದ ಚೂರನ್ನು ಬಾಯಿಗೆ ಹಾಕಿಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ ಮತ್ತೆ ಅಸ್ತಮಾ ಕಾಯಿಲೆ ಇರುವವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದರಿಂದ ಈ ರೋಗ ಹತೋಟಿಯಲ್ಲಿ ಇಡಬಹುದು. ಇದಲ್ಲದೆ ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತದೆ. ಜಠರದ ಚಲನೆಗೆ ನೆರವಾಗಿ ಮಲಬದ್ಧತೆಯಿಂದ ರಕ್ಷಿಸುತ್ತದೆ ಹಾಗೂ ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೊರ ಹಾಕಲು ನೆರವಾಗುತ್ತದೆ. ದೇಹದಿಂದ ಪರಿಣಾಮಕಾರಿಯಾಗಿ ವಿಷನಿವಾರಿಸಬೇಕೆಂದಲ್ಲಿ ಖಂಡಿತಾ ಬೆಲ್ಲ ತಿನ್ನಿ. ತಿನ್ನುವ ಮೂಲಕ ವಿವಿಧ ಕಾಯಿಲೆಗಳಿಗೆ ಖಂಡಿತಾ ಬೆಲ್ಲವು ಪರಿಹಾರ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆಶಯ ಮಾತು : ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ನಾವುಗಳು ಇದಾದರೂ ನಮ್ಮ ಆರೋಗ್ಯ ರಕ್ಷಣೆಯ ಕಡೆಗೆ ಹೆಚ್ಚು ಒಲವು - ಸಮಯ ನೀಡುವುದು ಅವಶ್ಯವಾಗಿದೆ. ಯಾಕೆಂದರೆ ನಾವೆಲ್ಲರೂ ದಿನನಿತ್ಯ ಬಳಕೆ ಮಾಡಿಕೊಳ್ಳುತ್ತಿರುವ ರಾಸಾಯನಿಕ ಪದಾರ್ಥಗಳು,ತಿಂಡಿ ತಿನಿಸುಗಳನ್ನು ನಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಹಾಳುಮಾಡುತ್ತಿವೆ ಹಾಗೆ ವಯಸ್ಸು ಕ್ಷೀಣಿಸುತ್ತಿದೆ ಎನ್ನುವುದು ನಮ್ಮಗೆಲ್ಲರಿಗೂ ಗೊತ್ತಿರುವ ಸಂಗತಿ ಅಲ್ಲವೇ ? 

ಆದಕಾರಣ ಇಂತಹ ಭಯಂಕರ ಜೀವ ಹಾನಿ ಅಂಶಗಳ ಪದಾರ್ಥಗಳನ್ನು ಕೊಡಲೇ ನಿಲ್ಲಿಸುವ ಮೂಲಕ ನಮ್ಮ ಪೂರ್ವಜರು ಹಾಕಿ ಕೊಟ್ಟ ಸಂಪ್ರದಾಯದ ಸಾವಯವದ ಪದ್ಧತಿಯನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕೋಣ.ಬೆಲ್ಲವನ್ನು ದಿನನಿತ್ಯ ತಿನ್ನಲು ಪ್ರಮಾಣಿಕವಾಗಿ ಪ್ರಯತ್ನ ಮಾಡೋಣ, ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವನ್ನು ಕಾಪಾಡಿಕೊಂಡು, ನೆಮ್ಮದಿಯಾಗಿ ಬಾಳೋಣ.

ಕೊನೆಯ ಮಾತು : ಇಂದು ಸಧ್ಯ ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಮಂದಿ ಸಕ್ಕರೆಯತ್ತ ವಾಲುತ್ತಿರುವುದೇ ಇದಕ್ಕೆ ಕಾರಣ. ಆದರೆ, ಬೆಲ್ಲದಿಂದಾಗುವ ಉಪಯೋಗಗಳ ಬಗ್ಗೆ ಬಲ್ಲವರಿಗೆ ಮಾತ್ರವೇ ತಿಳಿದಿರುತ್ತದೆ. ಉಳಿದವರೂ ಇದರ ಸದುಪಯೋಗ ಪಡೆಲೇಬೇಕು ಜೊತೆಗೆ ಬೆಲ್ಲ ದಿನಾಲೂ ತಿನ್ನಲು ಹಾಗೂ ಊಟದಲ್ಲಿ ಸೇರಿಸಿ ಊಟ ಮಾಡಲು ಯತ್ನಿಸುವುದು ನಮ್ಮ ಆರೋಗ್ಯ ಹಿತದೃಷ್ಟಿಯಿಂದ ಒಳ್ಳೆಯದು. ಬೆಲ್ಲ ಕೇವಲ ಸಿಹಿ ಪದಾರ್ಥವಾಗಿರದೆ, ಔಷಧಿಯುಕ್ತ ಸಿಹಿಯಾಗಿದೆ. ನೋಡಲಿಕೆ ಕಂದು ಅಥವಾ ಕಪ್ಪಗಿರುವ ಕಾರಣ ಯುವಪೀಳಿಗೆಯವರು ಬೆಲ್ಲ ತಿನ್ನಲು ಹಿಂದೇಟು ಹಾಕುತ್ತಿರಬಹುದು. ಆದರೆ, ಬೆಳ್ಳಗೆ ಕಾಣುವ ಸಕ್ಕರೆಗಿಂತಲೂ ಬೆಲ್ಲ ಅತ್ಯುತ್ತಮ ಎಂಬುದನ್ನು ಮರೆಯಬಾರದು. ಪ್ರತಿಯೊಬ್ಬರ ಮನೆಗಳಲ್ಲೂ ಲಭ್ಯವಾಗುವ ಬೆಲ್ಲವನ್ನು ಮನೆಮದ್ದಿನ ರೂಪದಲ್ಲಿ ಉಪಯೋಗಿಸುವ ಮೂಲಕ, ಹಲವು ಬಗೆಯ ಸಮಸ್ಯೆಗಳನ್ನು ದೂರವಿಡಬಹುದು.

(ಮುಗಿಯಿತು)

-ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ.

ಚಿತ್ರ ಕೃಪೆ: ಇಂಟರ್ನೆಟ್ ತಾಣ