"ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣುಗಳೇ ಸಿಗುತ್ತಿಲ್ಲವಂತೇ"

"ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣುಗಳೇ ಸಿಗುತ್ತಿಲ್ಲವಂತೇ"

Comments

ಬರಹ

ಒಂದು ವರ್ಷದಿಂದ ಅವರಿವರು ಹೇಳುತ್ತಿದ್ದ ಈ ಮಾತು "ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣುಗಳೇ ಸಿಗುತ್ತಿಲ್ಲ" ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೆ ಸರಿಯಾಗಿ

೧. ಇತ್ತೀಚೆಗೆ ಅಂದರೆ ಹದಿನೈದು ದಿನಗಳ ಕೆಳಗೆ ನನ್ನ ಸಹುದ್ಯೋಗಿಯ ತಾಯಿ ನನಗೆ ದೂರವಾಣಿಯ ಮೂಲಕ "ನನ್ನ ಮಗನಿಗೆ ಒಂದು ಹೆಣ್ಣು ನೋಡೆ, ಪರಿಚಯಸ್ತರಿಗೋ, ನಿನ್ನ ನೆಂಟರಿಷ್ಟಗೋ, ಅಕ್ಕ ಪಕ್ಕದವರಿಗೋ, ಯಾರಿಗಾದರೂ ತಿಳಿಸು" ಎಂದರು. ಅವನಿಗೆ ಹೆಣ್ಣುಗಳ ಜಾತಕ ಬರುತ್ತಿದೆಯಾದರು ಯಾವುದೋ ಕಾರಣಕ್ಕೆ ಅದು reject ಆಗ್ತ ಇದೆ. ಎಲ್ಲವೂ ಸರಿಹೋಯಿತು ಅನ್ನುವಷ್ಟರಲ್ಲಿ ಹುಡುಗಿಯೇ ಒಪ್ಪುವುದಿಲ್ಲ ಅಂತ ಹೇಳಿದರು. ಅದಕ್ಕೆ ನಾನು ಹುಡುಗಿ ಏಕೆ ಒಪ್ಪಲಿಲ್ಲ ಅಂತ ಕೇಳಿದೆ. ಆಗ ಆಂಟಿ, ನನ್ನ ಮಗ B.E., ಮುಗಿಸಿ ಕೆಲಸಕ್ಕೆ ಹೋಗಿಕೊಂಡೆ M.Tech ಮಾಡುತ್ತಿದ್ದಾನೆ. ಹುಡುಗಿಯೂ B.E., ಮುಗಿಸಿ ಕೆಲ್ಸದಲ್ಲಿದ್ದಾಳೆ. ಆದರೆ ಅವನಿಗೆ ಬರುವ ಸಂಬಳ ಆ ಹುಡುಗಿಗಿಂತ ಕಡಿಮೆ ಎಂದು reject ಆಯಿತು ಎಂದರು.

೨. ಮನೆಗೆ ಇನ್ಯಾರೋ ಬಂದಿದ್ದರು. ಅವರು ಹುಡುಗಿಬೇಕು ಎಂದು ಜಾತಕ ತಂದಿದ್ದರು. ಎಲ್ಲ ವಧುವರಾನ್ವೇಷಣ ಕೇಂದ್ರಗಳಲ್ಲಿ ನೋಂದಾಯಿಸಲಾಗಿದೆ. ಆದರೂ ಎಲ್ಲೂ ಸಿಗುತ್ತಿಲ್ಲ ಎಂದರು. ಹುಡುಗ double graduate ಮಾಡ್ಕೊಂಡು ಒಳ್ಳೆ ಕೆಲಸದಲ್ಲಿದ್ದಾನೆ ಎಂದು ಹೇಳುತ್ತಿದ್ದರು.

೩. ಒಂದು ವಧುವರಾನ್ವೇಷಣ ಕೇಂದ್ರದವರು ಗಂಡು ಹೆಣ್ಣಿನ ಸಮಾವೇಶಮಾಡಿದರಂತೆ (ಒಂದು ವರ್ಷದ ಕೆಳಗೆ ನಡೆದದ್ದು). ಅಲ್ಲಿಯೂ ಕೂಡ ಗಂಡಿನ ಸಂಖ್ಯೆಯೇ ಜಾಸ್ತಿಯಿದ್ದು, ಹೆಣ್ಣುಗಳು ಬಹಳ ಕಡಿಮೆಯಲ್ಲಿದ್ದರಂತೆ.

ಹೀಗೆ ಹೇಳಲು ಹೋದರೆ ಅನೇಕ ವಿಷಯಗಳು ಸಿಗುತ್ತಿವೆ. ಏನಿದರರ್ಥ?? ನಮ್ಮ ಹೆಣ್ಣುಮಕ್ಕಳು ಮದುವೆಯೇ ಬೇಡವೆನ್ನುತ್ತಿದ್ದಾರೆಯೇ ಅಥವಾ ಸಂಖ್ಯೆಯಲ್ಲಿ ಬಹಳ ಕಡಿಮೆ ಇದ್ದಾರೆಯೇ?????

ಸಂಪದಿಗರಲ್ಲಿ ಹಂಚಿಕೊಳ್ಳಬೇಕೆನಿಸಿತು ಅದಕ್ಕಾಗಿ ಈ ಬರಹ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet