ಮುತ್ತಿನೊಲವು
ಕವನ
ಬಾನ ಬಣ್ಣವು ನೆಲವ ಮುತ್ತಲು
ಹೊನ್ನ ಕಾಂತಿಯು ತುಂಬಿತು
ಜ್ಞಾನ ದೇಗುಲ ಗಂಟೆ ಹೊಡೆಯಲು
ಧ್ಯಾನ ಮನದಲಿ ಮೂಡಿತು
ಮುನಿಸು ಕಾಣದ ಜನರ ಮನವದು
ತನುವ ಖುಷಿಯಲಿ ನಲಿಯಿತು
ಹೊನಲ ಬೆಳಕಿಗೆ ರೈತ ಹೊರಟನು
ಕನಸ ಹೆಣೆಯುತ ಬಯಲೊಳು
ಹೊಸತು ಬಣ್ಣದ ಸೂರ್ಯ ರಶ್ಮಿಯು
ಕೆಸರು ಮೆತ್ತದೆ ಮಿಂಚಿತು
ಹಸಿರು ಕಾನನ ಗಾಳಿ ಬೀಸಲು
ಕಸಿಯ ಕಟ್ಟುತ ನಿಂತಿತು
ಕವಿಯ ಚೆಲುವಿನ ಮೋಹ ತಾಣವು
ಸವಿಯ ಕೊಟ್ಟಿದೆ ಸುತ್ತಲು
ಬುವಿಯ ರೂಪದಿ ಹೊಸತು ಕಾಣಲು
ಬೇವು ಬೆಲ್ಲವು ಸೇರಿತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
