ಸ್ಟೇಟಸ್ ಕತೆಗಳು (ಭಾಗ ೮೦೫)- ಆನೆ

ಸ್ಟೇಟಸ್ ಕತೆಗಳು (ಭಾಗ ೮೦೫)- ಆನೆ

ನನಗೆ ಗೊತ್ತಿರಲಿಲ್ಲ. ಈ ದಿನ ನನ್ನ ಉಸಿರು ನಿಲ್ಲುತ್ತದೆ ಅಂತ. ಪ್ರತಿವರ್ಷವೂ ದಸರಾ ಎನ್ನುವ ಅದ್ಭುತ ಹಬ್ಬದಲ್ಲಿ ಎಲ್ಲರ ಮುಂದೆ ಗಾಂಭೀರ್ಯದಿಂದ ನಡೆದವ, ಎಲ್ಲರ ಕೈ ಚಪ್ಪಾಳೆ, ಸಂಭ್ರಮಗಳ ನಡುವೆ ಹೆಮ್ಮೆಯಿಂದ ಮೆರೆದವನು ನಾನು. ಆದರೆ ಈ ದಿನ, ಈ ದಿನ ಅಂತಲ್ಲ ಸಮಯ ಸಿಕ್ಕಾಗಲೆಲ್ಲಾ ಕಾಡಲ್ಲಿ ಸಿಗುವ ನನ್ನದೇ ಜಾತಿಯ ಗೆಳೆಯರನ್ನ ಪಳಗಿಸುವ ಕೆಲಸವನ್ನು ನನಗೆ ವಹಿಸುತ್ತಾರೆ. ಎಲ್ಲವನ್ನು ತುಂಬಾ ಜತನದಿಂದ ಪಳಗಿಸಿ ಕೆಲಸಕ್ಕೆ ಹಚ್ಚುತ್ತೇನೆ ಅವರ ಬದುಕಿಗೊಂದು ದಾರಿ ತೋರಿಸುತ್ತೇನೆ. ಆದರೆ ಈ ದಿನದ ಪಳಗಿಸುವಿಕೆ ಅಷ್ಟು ಸುಲಭವಾಗಿರಲಿಲ್ಲ. ಎದುರುಗಡೆ ಬಂದವನು ಬಲಾಢ್ಯನಾಗಿದ್ದ ಕ್ರೂರಿಯಾಗಿದ್ದ. ನನಗೆ ಅವನ ಮೇಲೆ ಇದ್ದ ಪ್ರೀತಿ, ಅವನಿಗೆ ನನ್ನ ಮೇಲೆ ಇರಲಿಲ್ಲ. ಆತ ಕೇಳದೆ ನನ್ನ ಮೇಲೆ ಆಕ್ರಮಣ ಮಾಡಿ ನನ್ನ ಉಸಿರನ್ನೇ ದೇವರ ಪಾದಕ್ಕೆ ಕಳುಹಿಸಿ ಬಿಟ್ಟ ದೂರದಲ್ಲಿ ನಿಂತು ನೋಡುತ್ತಿದ್ದ ನನ್ನ ಜೊತೆಗೆ ಬಂದ ಮನುಷ್ಯರೆಂಬುವವರು ಹಾಗೆಯೇ ನಿಂತುಬಿಟ್ಟಿದ್ದಾರೆ. ನಾನಿದನ್ನೆಲ್ಲಾ ಯಾವುದನ್ನು ಬಯಸಿದವನು ಅಲ್ಲ ಬದುಕು ಎಲ್ಲೊ ಒಂದು ಕಡೆ ಸಾಗುತ್ತಿತ್ತು ಆದರೆ ಯಾವ ಕಾರಣವೋ ಏನೋ ನನ್ನದೊಂದು ಸಾವಾಯಿತು ದಿನಪತ್ರಿಕೆ ಎಲ್ಲಾ ಕಡೆಗೂ ಒಂದು ದಿನದ ಸುದ್ದಿ ಆಯಿತು. ಹೆಣ ಬೂದಿಯ ಒಟ್ಟಿನಲ್ಲಿ ದುಡ್ಡು ನನ್ನ ಜೀವಿತದ ಅವಧಿ ಇಂದಿಗೆ ಕೊನೆಯಾಯಿತು. ಅದ್ಯಾರ ಕಡೆಗೆ ಕೈಮಾಡಿ ತೋರಿಸುವುದು ಅನ್ನೋದೇ ಗೊತ್ತಾಗುತ್ತಿಲ್ಲ ಉಸಿರು ನಿಲ್ಲಿಸಿದ್ದೇನೆ ನೋವಿನಿಂದ ಯಾತನೆಯಿಂದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ