ಹೊಗೇನಕಲ್ ಯೋಜನೆ ಜಾರಿ ಮತ್ತು ತಿರುವಳ್ಳವರ್ ಪ್ರತಿಮೆ ಅನಾವರಣ

ಹೊಗೇನಕಲ್ ಯೋಜನೆ ಜಾರಿ ಮತ್ತು ತಿರುವಳ್ಳವರ್ ಪ್ರತಿಮೆ ಅನಾವರಣ

ಬರಹ

ಹೊಗೇನಕಲ್ ವಿಷಯವಾಗಿ ಮತ್ತೊಮ್ಮೆ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಕಪಟತೆಯ ದುಮ್ಮಾನದ ಹೊಗೆ ಉಗುಳಿದ್ದಾರೆ. ಈ ಹೇಳಿಕೆಯ ಜತೆಜತೆಗೆ ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಯ ಅನಾವಾರಣವನ್ನು ಕೈಗೆತ್ತಿಕೊಳ್ಳಬೇಕು ಎ೦ದು ತಮಿಳುನಾಡಿನವರೇ ಆದ ಈ ದೇಶದ ನೂತನ ಗೃಹಮಂತ್ರಿ ಚಿದಂಬರಂ ಅವರಿಗೆ ನೀಡಿರುವ ಒತ್ತಾಯದ ಕರೆ, ಕರ್ನಾಟಕ-ತಮಿಳುನಾಡಿನ ಜನತೆಯ ನೆಮ್ಮದಿಯ ಸಹಬಾಳ್ವೆಗೆ ಕಿಚ್ಚು ಹಚ್ಚುವ ಪ್ರಯತ್ನದಲ್ಲಿರುವಂತೆ ಗೋಚರಿಸುತ್ತಿದೆ.

ತಾನು ಆಳುತ್ತಿರುವ ರಾಜ್ಯ ಮತ್ತು ನೆರೆಹೊರೆಯ ರಾಜ್ಯಗಳೊಡನೆ ಶಾಂತಿಯುತವವಾಗಿ ವರ್ತಿಸಬೇಕೆಂಬ ನಿಯಮಗಳಿಗೆ ಎ೦ದೆಂದಿಗೂ ವ್ಯತಿರಿಕ್ತವಾಗೇ ನಡೆದುಕೊಳ್ಳುತ್ತಿರುವ ತಮಿಳುನಾಡಿನ ರಾಜಕೀಯ ಮುಖಂಡರುಗಳ ನೀತಿಗೆ, ಕನ್ನಡ-ಕನ್ನಡಿಗ-ಕರ್ನಾಟಕ ಪರವಾದ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಾಣಗೌಡರ ನೇತೃತ್ವದಲ್ಲಿ ಸೂಕ್ತವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದರ ಮೂಲಕ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆ ಮೀಟಿದೆ.

ಕರ್ನಾಟಕ ಮತ್ತು ತಮಿಳುನಾಡಿನ ಬಾಂಧ್ಯವ್ಯವನ್ನು ಪಕ್ಕಕ್ಕಿರಿಸಿ ವಿರಸಕ್ಕೆ ಆಹ್ವಾನ ನೀಡಿರುವ ಕರುಣಾನಿಧಿ ಅವರು, ಈ ಹಿಂದೆ ಒಪ್ಪಂದವಾಗಿರುವಂತೆ, ಹೊಗೇನಕಲ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ನೇಮಿಸಲು ನಿರ್ಧರಿಸುರುವ ಜಂಟಿ ಸದಸ್ಯರ ನೇಮಕ-ಸಲಹಗೆ ತಮ್ಮ ಒಮ್ಮತ ಸೂಚಿಸಬೇಕಿದೆ ಮತ್ತು ಬೆಂಗಳುರಿನಲ್ಲಿ ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸುವ ಮೊದಲು ಕನ್ನಡಿಗರ ಸಂಕೇತ ಸರ್ವಜ್ಞ ಪ್ರತಿಮೆಯನ್ನ ಚೆನ್ನೈನ ಪ್ರಮುಖ ಸ್ಥಳದಲ್ಲಿ ಅನಾವರಣಗೊಳಿಸಬೇಕಿದೆಯೆಂದು ಕರವೇ ಈ ಮೂಲಕ ಎಚ್ಚರಿಕೆ ನೀಡುತ್ತಿದೆ.

ಭಾರತ ಸಂವಿಧಾನಕ್ಕೆ ಅಪಚಾರವೆಸಗುವಂತ ಹೇಳಿಕೆಗಳನ್ನು ನೀಡುತ್ತಿದ್ದರೂ ಕೇಂದ್ರ ಮತ್ತು ನಮ್ಮ ರಾಜ್ಯ ಸರ್ಕಾರದ ಪ್ರತಿನಿಧಿಗಳ ಮೌನವನ್ನು ಖಂಡಿಸಿ ರಾಜ್ಯ ಜನತೆಗೆ ನ್ಯಾಯವೊದಗಿಸಬೇಕೆಂದು ಕರವೇ ಆಗ್ರಹಪುರ್ವಕವಾಗಿ ಒತ್ತಾಯವನ್ನು ಮಂಡಿಸುತ್ತಿದೆ. ಈ ಕುರಿತಾದ ಕರವೇಯ ಹೋರಾಟ ಮತ್ತು ಮುಂದಿನ ರೂಪರೇಷೆಗಳನ್ನು ನಿಮ್ಮ ಅವಗಾಹನೆಗೆ ತಂದಿದ್ದೇವೆ. ನಾಡು-ನುಡಿ ಪರವಾದ ಕರವೇಯ ಹೋರಾಟದಲ್ಲಿ ನಮ್ಮೊದನೆ ಕೈ ಜೋಡಿಸಬೇಕಾಗಿ ನಿಮ್ಮಲ್ಲಿ ನಮ್ಮ ಕಳಕಳಿಯ ಮನವಿ.

ಹೋರಾಟದ ವರದಿಯನ್ನು ಇಲ್ಲಿ ನೋಡಿ.

http://www.karnatakarakshanavedike.org/modes/view/88/hogenakal-tiruvallavar-pratime.html

http://karave.blogspot.com/2008/12/karunanidi-helike-raste-tade.html

http://karave.blogspot.com/2008/12/karunanidi-helike.html

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet