ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಟಿಕೆಟ್ ಪ್ಲೀಸ್

ಪುಸ್ತಕದ ಲೇಖಕ/ಕವಿಯ ಹೆಸರು
ವಿಕ್ರಂ ಚದುರಂಗ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೪

‘ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸುವ ಅನುವಾದದ ಪ್ರಯತ್ನವಿಲ್ಲಿದೆ. ಇಲ್ಲಿನ ಟಿಕೆಟ್ ಪ್ಲೀಸ್ ಲಾರೆನ್ಸನ ಪ್ರಸಿದ್ಧ ಕತೆಯಾಗಿದ್ದು, ಹಲವಾರು ಭಾಷೆಗಳಿಗೂ ಕೂಡ ಅನುವಾದಗೊಂಡಿದೆ.

ಸರಳತೆ ಮತ್ತು ಸಹಜತೆ

ಸಾಮಾಜಿಕ ಕಳಕಳಿಯ ಹಿರಿಯ ಹಿತೈಷಿಯೊಬ್ಬರು ಕರೆ ಮಾಡಿದ್ದರು. "ವಾರಕ್ಕೆ 70 ಗಂಟೆ ಕೆಲಸವನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.

Image

ಸ್ಟೇಟಸ್ ಕತೆಗಳು (ಭಾಗ ೧೧೭೪) - ಆದರ್ಶ

ಆದರ್ಶಗಳು ದಾರಿಯಲ್ಲಿ ಕಾಯುತ್ತಿವೆ. ಒಂಚೂರು ನಿರ್ಲಿಪ್ತವಾಗಿ, ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ಯಾರ ಜೊತೆಗಾದರೂ ಹೊರಟು ಹೋಗಲು ಕಾಯುತ್ತಿವೆ. ಅವುಗಳಿಗೆ ಒಂದಿನಿತೂ ಶಕ್ತಿಯಿಲ್ಲ. ಬರಿಯ ಅಸ್ಥಿ ಪಂಜರವಾಗಿ ರಕ್ತ ಮಾಂಸಗಳಿಗೆ ಕಾಯುತ್ತಿವೆ. ನಮ್ಮ ಕೆಲಸ ಕೈಹಿಡಿದು ಆದರ್ಶಗಳನ್ನ ಜೊತೆಗೆ ಕರೆದೊಯ್ಯುವುದು. ನಾವಿಲ್ಲವಾದರೆ ಆದರ್ಶಗಳು ವ್ಯರ್ಥವಾಗಿ ಉಳಿದು ಬಿಡುತ್ತವೆ. ಅವುಗಳು ಶತಮಾನದಿಂದ ಕಾಯುತ್ತಿವೆ.

Image

ಹೀಗೊಂದು ಮಾದರಿ ತ್ಯಾಜ್ಯ ನಿರ್ವಹಣೆ

‘ತಟ್ಟೆ ಇಲ್ಲಿ ಕೊಡಿ", ಸ್ವರ ಕೇಳಿ ಏನೋ ಯೋಚನೆಯ ಗುಂಗಲ್ಲಿ ಇದ್ದವಳು ಗಕ್ಕನೆ ತಲೆ ಮೇಲೆತ್ತಿದೆ. ಓರ್ವ ಮಧ್ಯ ವಯಸ್ಸಿನ ಪುರುಷ ನನ್ನ ಕೈಯಲ್ಲಿದ್ದ ಊಟ ಮಾಡಿ ಖಾಲಿಯಾದ ಅಡಕೆ ಹಾಳೆಯ ತಟ್ಟೆಯನ್ನು ತೆಗೆದುಕೊಂಡು ದೊಡ್ಡದಾದ ಕಪ್ಪು ಪ್ಲಾಸ್ಟಿಕ್ ಕವರ್ ಒಳಗೆ ಹಾಕಿದರು. ಆ ಪ್ಲಾಸ್ಟಿಕ್ ಕವರನ್ನು ಏಳೋ - ಎಂಟೋ ತರಗತಿಯಂತೆ ಕಾಣ್ತಿದ್ದ ಇಬ್ಬರು ವಿದ್ಯಾರ್ಥಿಗಳು ಹಿಡಿದುಕೊಂಡಿದ್ದರು.

Image

ಪುಸ್ತಕನಿಧಿ - 27. ಕಲಿಕುಠಾರ - ಗಳಗನಾಥರ ಕಾದಂಬರಿ

ಮುನ್ನುಡಿಯಲ್ಲಿ ಹೇಳುವಂತೆ ಇದು ಅವಧೂತ ಮಾರ್ಗದ ಒಂದು ಚರಿತ್ರ ಗ್ರಂಥ. 

ಭಗವದ್ ಭಕ್ತರು 'ನಾನು ಇದನ್ನು ಬರೆದಿಲ್ಲ, ಭಗವಂತ ಬರೆಸಿದ ' ಎಂದು ಹೇಳುವಂತೆ ಗಳಗನಾಥರು ಇದನ್ನು ಪರಮಹಂಸರು ಬರೆಸಿದ್ದಾರೆ ಅಂತ ಹೇಳುತ್ತಾರೆ. ಇದು ಎರಡನೇ ಭಾಗವಂತೆ ಆದರೆ ಮೊದಲು ಮುದ್ರಿಸಿದ್ದಂತೆ. 

ಅದರ ಪ್ರಾರಂಭದ ಕೆಲವು ಸಾಲುಗಳು ಹೀಗಿವೆ - ಈ ಜಗತ್ತಿನಲ್ಲಿ ದೇವರು ಹಾಗೂ ಅವನ ಸೃಷ್ಟಿ ಎರಡು ಇರುತ್ತವೆ. ದೇವರ ಸ್ವರೂಪ ಕಣ್ಣಿಗೆ ಕಾಣದೆ ಇದ್ದು ಆತನ ಸೃಷ್ಟಿಯು ವ್ಯಕ್ತ ಇರುತ್ತದೆ. ದೇವರು ತನ್ನ ಇಚ್ಛೆಯಂತೆ ಏನನ್ನಾದರೂ ಮಾಡಬಲ್ಲನು, ಮಾಡದೆ ಇರಬಲ್ಲನು, ಅಥವಾ ಮತ್ತೇನೋ ಮಾಡಬಲ್ಲನು. ಏನರ ಮನಸ್ಸನ್ನು ಇವತ್ತು ಎಳೆಯಲು ಮಹಾತ್ಮರು ಪವಾಡಗಳನ್ನು ಮಾಡುತ್ತಾರೆ. 

ಬ್ಲಾಗ್ ವರ್ಗಗಳು

ಲಿಂಬೆ ಮತ್ತು ಗಜಲಿಂಬೆ ಬೇಸಾಯ (ಭಾಗ ೧)

ಬೇಸಿಗೆಯ ದಿನಗಳು ಬಂತೆದರೆ ಸಾಕು ಲಿಂಬೆ ಹಣ್ಣಿಗೆ ಭಾರೀ ಬೇಡಿಕೆ. ಲಿಂಬೆ ಹಣ್ಣು ಬಹು ಬಳಕೆಯ ವಸ್ತುವಾದುದರಿಂದ ಇದಕ್ಕೆ ಬೇಡಿಕೆ ಕಡಿಮೆಯಾಗುವುದೇ ಇಲ್ಲ. ಉತ್ತಮ ತಳಿಗಳನ್ನು ಆರಿಸಿ, ಯಾವ ಕಾಲದಲ್ಲಿ ಹಣ್ಣು ದೊರೆಯಬೇಕು ಎಂಬುದನ್ನು ಅಂದಾಜು ಮಾಡಿಕೊಂಡು ಅದಕ್ಕನುಗುಣವಾಗಿ ಲಿಂಬೆ ಬೆಳೆದರೆ ಲಾಭದಾಯಕ.  

Image

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಜನಸಾಮಾನ್ಯರು, ಕಡುಬಡವರಿಗೆ ಆಹಾರ ಸುರಕ್ಷೆಯನ್ನು ಖಾತರಿ ಪಡಿಸುವ ಉದ್ಡೇಶ ಹೊಂದಿರುವ ರಾಜ್ಯದ ಪಡಿತರ ಅಥವಾ ‘ರೇಶನ್’ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಲೋಪದೋಷಗಳು ಇರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಗುರುತಿಸಲಾಗಿದೆ.

Image

ಗೋಬಿ ಮಂಚೂರಿ

Image

ಮೈದಾ ಹಿಟ್ಟು, ಉಪ್ಪು, ಮೆಣಸಿನ ಹುಡಿ ಹಾಗೂ ಕಾರ್ನ್ ಫ್ಲೋರ್ ಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಹೂ ಕೋಸುಗಳನ್ನು ಕಲಸಿದ ಹಿಟ್ಟಿನಲ್ಲದ್ದಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ - ಇಂಗಿನ ಒಗ್ಗರಣೆ ಕೊಡಿ. ಈರುಳ್ಳಿ, ಹಸಿಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಾಡಿಸಿ.

ಬೇಕಿರುವ ಸಾಮಗ್ರಿ

ಕತ್ತರಿಸಿದ ಹೂ ಕೋಸು (ಕಾಲಿಫ್ಲವರ್) - ೨ ಕಪ್, ಮೈದಾ ಹಿಟ್ಟು - ಅರ್ಧ ಕಪ್, ಕಾರ್ನ್ ಫ್ಲೋರ್ - ಅರ್ಧ ಕಪ್, ಕತ್ತರಿಸಿದ ಈರುಳ್ಳಿ- ಅರ್ಧ ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ - ೪-೫ ತುಂಡುಗಳು, ಬೆಳ್ಳುಳ್ಳಿ ಎಸಳುಗಳು -೪, ಟೊಮೆಟೋ ಸಾಸ್ - ಕಾಲು ಕಪ್, ಶುಂಠಿ ತುರಿ - ೧ ಚಮಚ, ಚಿಲ್ಲಿ ಸಾಸ್ - ಕಾಲು ಕಪ್, ಮೆಣಸಿನ ಹುಡಿ - ೩ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಕಾಲು ಕಪ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಒಗ್ಗರಣೆಗೆ - ಸಾಸಿವೆ ೧ ಚಮಚ, ಇಂಗು ಕಾಲು ಚಮಚ.

 

ಏಷ್ಯಾದ ಆಯ್ದ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಳ್ಳಿ ಕಣ್ಣನ್ ಮತ್ತು ಇತರರು
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ.80/-

ಇದು ಯುನೆಸ್ಕೋದ ಏಷ್ಯಾ ಸಾಂಸ್ಕೃತಿಕ ಕೇಂದ್ರ ಪ್ರಾಯೋಜಿಸಿದ ಏಷ್ಯಾದ ಸಹ ಪ್ರಕಟಣಾ ಕಾರ್ಯಕ್ರಮದ ಅನುಸಾರ ಪ್ರಕಟಿಸಿದ ಏಷ್ಯಾದ 14 ದೇಶಗಳ ಸಮಕಾಲೀನ ಕತೆಗಳ ಸಂಕಲನ.