ಗೋಬಿ ಮಂಚೂರಿ
ಕತ್ತರಿಸಿದ ಹೂ ಕೋಸು (ಕಾಲಿಫ್ಲವರ್) - ೨ ಕಪ್, ಮೈದಾ ಹಿಟ್ಟು - ಅರ್ಧ ಕಪ್, ಕಾರ್ನ್ ಫ್ಲೋರ್ - ಅರ್ಧ ಕಪ್, ಕತ್ತರಿಸಿದ ಈರುಳ್ಳಿ- ಅರ್ಧ ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ - ೪-೫ ತುಂಡುಗಳು, ಬೆಳ್ಳುಳ್ಳಿ ಎಸಳುಗಳು -೪, ಟೊಮೆಟೋ ಸಾಸ್ - ಕಾಲು ಕಪ್, ಶುಂಠಿ ತುರಿ - ೧ ಚಮಚ, ಚಿಲ್ಲಿ ಸಾಸ್ - ಕಾಲು ಕಪ್, ಮೆಣಸಿನ ಹುಡಿ - ೩ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಕಾಲು ಕಪ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ - ಸಾಸಿವೆ ೧ ಚಮಚ, ಇಂಗು ಕಾಲು ಚಮಚ.
ಮೈದಾ ಹಿಟ್ಟು, ಉಪ್ಪು, ಮೆಣಸಿನ ಹುಡಿ ಹಾಗೂ ಕಾರ್ನ್ ಫ್ಲೋರ್ ಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಹೂ ಕೋಸುಗಳನ್ನು ಕಲಸಿದ ಹಿಟ್ಟಿನಲ್ಲದ್ದಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ - ಇಂಗಿನ ಒಗ್ಗರಣೆ ಕೊಡಿ. ಈರುಳ್ಳಿ, ಹಸಿಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣವನ್ನು ತಟ್ಟೆಗೆ ಹಾಕಿ ಕರಿದ ಹೂಕೋಸುಗಳು, ಶುಂಠಿ, ಚಿಲ್ಲಿ ಸಾಸ್, ಟೊಮೆಟೋ ಸಾಸ್ ಗಳನ್ನು ಹಾಕಿ ಮೆಲ್ಲಗೆ ಕಲಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಗರಿಗರಿಯಾದ ಗೋಬಿ ಮಂಚೂರಿ ತಯಾರು.