ಪುಸ್ತಕನಿಧಿ - 27. ಕಲಿಕುಠಾರ - ಗಳಗನಾಥರ ಕಾದಂಬರಿ
ಮುನ್ನುಡಿಯಲ್ಲಿ ಹೇಳುವಂತೆ ಇದು ಅವಧೂತ ಮಾರ್ಗದ ಒಂದು ಚರಿತ್ರ ಗ್ರಂಥ.
ಭಗವದ್ ಭಕ್ತರು 'ನಾನು ಇದನ್ನು ಬರೆದಿಲ್ಲ, ಭಗವಂತ ಬರೆಸಿದ ' ಎಂದು ಹೇಳುವಂತೆ ಗಳಗನಾಥರು ಇದನ್ನು ಪರಮಹಂಸರು ಬರೆಸಿದ್ದಾರೆ ಅಂತ ಹೇಳುತ್ತಾರೆ. ಇದು ಎರಡನೇ ಭಾಗವಂತೆ ಆದರೆ ಮೊದಲು ಮುದ್ರಿಸಿದ್ದಂತೆ.
ಅದರ ಪ್ರಾರಂಭದ ಕೆಲವು ಸಾಲುಗಳು ಹೀಗಿವೆ - ಈ ಜಗತ್ತಿನಲ್ಲಿ ದೇವರು ಹಾಗೂ ಅವನ ಸೃಷ್ಟಿ ಎರಡು ಇರುತ್ತವೆ. ದೇವರ ಸ್ವರೂಪ ಕಣ್ಣಿಗೆ ಕಾಣದೆ ಇದ್ದು ಆತನ ಸೃಷ್ಟಿಯು ವ್ಯಕ್ತ ಇರುತ್ತದೆ. ದೇವರು ತನ್ನ ಇಚ್ಛೆಯಂತೆ ಏನನ್ನಾದರೂ ಮಾಡಬಲ್ಲನು, ಮಾಡದೆ ಇರಬಲ್ಲನು, ಅಥವಾ ಮತ್ತೇನೋ ಮಾಡಬಲ್ಲನು. ಏನರ ಮನಸ್ಸನ್ನು ಇವತ್ತು ಎಳೆಯಲು ಮಹಾತ್ಮರು ಪವಾಡಗಳನ್ನು ಮಾಡುತ್ತಾರೆ.
ಜ್ಞಾನ ಮತ್ತು ಸಿದ್ಧಿ ಪ್ರಾಪ್ತವಾಗಲು ಗುರುಭಕ್ತಿ ಬೇಕು ಅಥವಾ ಕರ್ಮಯೋಗ ಬೇಕು. ಗುರು ಭಕ್ತಿ ಇದ್ದರೆ ಕರ್ಮಗಳ ಅಗತ್ಯ ಇಲ್ಲ. ಆಗ ಸದಾಚಾರ ಅಥವಾ ದುರಾಚಾರಗಳ ಹಂಗೇ ಇಲ್ಲ.
ಗುರು ಭಕ್ತಿಯೊಂದರ ಬಲದಿಂದಲೇ ಜ್ಞಾನ, ಸಿದ್ದಿ ಪಡೆದರೆ ಆ ಕರ್ಮಹೀನತೆಯೂ ಸದಾಚಾರದುರಾಚಾರಗಳ ತಾರತಮ್ಯ ರಾಹಿತ್ಯವೂ ಐಹಿಕ ಸುಖಕ್ಕೂ ವಿವೇಕ ಸಂಗ್ರಹಕ್ಕೂ ಲೌಕಿಕ ವ್ಯವಸ್ಥೆಗೂ ಬಾಧಕವಾಗಿ ಆ ಕರ್ಮ ಹೀನತೆಯು (ಅಜ್ಞಾನಿಗಳ - ನಾನು ಸೇರಿಸಿದ ಶಬ್ದ ಇದು) ಐಹಿಕ ಸುಖವನ್ನೂ ಪಾರಲೌಕಿಕ ಸುಖವನ್ನೂ ಮಣ್ಣುಗೂಡಿಸುವದು.
ಧರ್ಮಸಮ್ಮತವಾಗಿ ಅರ್ಥವನ್ನು ಗಳಿಸಿ ಧರ್ಮಸಮ್ಮತವಾದ ಕಾಮವನ್ನು ಭೋಗಿಸಿ ಆ ಧರ್ಮಾರ್ಥಕಾಮಗಳನ್ನು ಒಂದರಿಂದ ಒಂದಕ್ಕೆ ಬಾಧೆ ಬಾರದಂತೆ ವಿವೇಕದಿಂದ ಸಾಧಿಸುವ ಜನರ ವರ್ಗವು ಲೋಕ ಹೆಚ್ಚು ಹಿತಕಾರಿಯಾಗಿದೆ.
ಅವಧೂತಮಾರ್ಗಿಗಳು ವರ್ಣಾಶ್ರಮ ಧರ್ಮಗಳನ್ನು ಅತಿಕ್ರಮಿಸುವರು.
ಮುಂದೆ ಒಬ್ಬ ಸಂತನ ಬಾಲ್ಯ ಹಾಗೂ ಜೀವನದ ವಿವರಗಳು ಇದ್ದು ನಾನು ಸರಿಯಾಗಿ ಓದಲಿಲ್ಲ.
ಈ ಪುಸ್ತಕವನ್ನು https://archive.org/details/dli.osmania.3077
ಕೊಂಡಿಯಲ್ಲಿ ಪುಕ್ಕಟೆ ಓದಬಹುದು ಅಥವಾ ಇಳಿಸಿಕೊಳ್ಳಬಹುದು.