ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾವಿನ ಕತ್ತಿನ ‘ಹಾವಕ್ಕಿ’ ಕಥೆ !

ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭ ಮಾಡಿದ ಮೇಲೆ ನನ್ನ ಹಾಗೆಯೇ ಪಕ್ಷಿವೀಕ್ಷಣೆ ಮತ್ತು ಪಕ್ಷಿಗಳ ಫೋಟೋ ತೆಗೆಯುವ ಹಲವಾರು ವ್ಯಕ್ತಿಗಳ ಪರಿಚಯ ಆಗಲು ಪ್ರಾರಂಭ ಆಯಿತು. ಹೀಗೆ ಪರಿಚಯ ಆದವರಲ್ಲಿ ಕಾರ್ಕಳದ ಗೆಳೆಯ ಶಿವಶಂಕರ್‌ ಕೂಡ ಒಬ್ಬರು. ಕಾರ್ಕಳದಲ್ಲೊಂದು ಸುಂದರ ಕೆರೆ ಇದೆ. ಅದರ ಹೆಸರು ಆನೆಕೆರೆ. ಕಾರ್ಕಳದ ಮೂಲಕ ಹೋಗುವಾಗಲೆಲ್ಲ ಆ ಕೆರೆಯನ್ನು ನೋಡುತ್ತ ಹೋಗುವುದು ನನ್ನ ಇಷ್ಟದ ಕೆಲಸ.

Image

ದಕ್ಷಿಣ ಭಾರತದ ಶಿಲ್ಪಕಲಾ ಮಕುಟಮಣಿ

ಲೊಕ್ಕಿಗುಂಡಿಯೆಂದು ಕರೆಯುತ್ತಿದ್ದ ಈ ಗ್ರಾಮ ಹಿಂದೊಮ್ಮೆ ಬಲಯುತ ವಾದ ಕೋಟೆಯಿಂದಾವೃತವಾದ ಮಹಾಗ್ರಾಮ. ಪುರಾತನ ಅಗ್ರಹಾರ ಕೂಡ. ಇಲ್ಲಿ ದೇವಾಲಯಗಳು, ಬಸದಿಗಳೂ ಸಾಂಸ್ಕೃತಿಕ ಕೇಂದ್ರಗಳಾಗಿ ರಾರಾಜಿಸುತ್ತಿದ್ದುವು. ಈ ಸ್ಥಳ ಶಿಲ್ಪಕಲಾಕೃತಿಗಳ ಆಗರವಾಗಿತ್ತು.

Image

ಕನ್ನಡ ಅದು - ಕನ್ನಡ್ ಅಲ್ಲ

ಚಿತ್ರ

ನಾವು ಕನ್ನಡಿಗರು ಅಲ್ಲದ ಬೇರೆ ಭಾಷೆಯ ಭಾಷಿಕರು ನಮ್ಮ ಭಾಷೆಯನ್ನು ಕನ್ನಡ್ ಎಂದು ಕರೆಯುವುದು ನಾವು ನೋಡಿ ಅದನ್ನು ಸರಿ ಮಾಡಲು ಯತ್ನಿಸುತ್ತೇವೆ ಹಾಗೂ ಸರಿ ಮಾಡಿದವರ ಪರವಾಗಿ ನಿಂತು ಅವರಿಗೆ ಶಭಾಷ್ ಗಿರಿ ಕೊಟ್ಟಿರುತ್ತೇವೆ ಆದರೆ ಅವರು ಕನ್ನಡ್ ಎನ್ನಲು ಕಾರಣ ಯಾರು? ಅವರೇನು ಮೂರ್ಖರ? ಅಥವಾ ನಮ್ಮನು ಕೆಣಕಲು ಈ ರೀತಿಯ ಉದ್ಧಟತನ ತೋರುತಿದ್ದಾರೆಯೇ? ಇದ್ದರು ಇರಬಹುದು.

ಪೂನಾ ಒಪ್ಪಂದ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ. ಗೋಪಿನಾಥ್
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ. ೬೦.೦೦, ಮುದ್ರಣ: ೨೦೨೪

‘ದಲಿತರಿಗೆ ಗಾಂಧೀಜಿ ಮಾಡಿದ ಚಾರಿತ್ರಿಕ ವಂಚನೆ’ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡು ಬಂದಿರುವ ‘ಪೂನಾ ಒಪ್ಪಂದ’ ಎನ್ನುವ ಕೃತಿಯು ೧೯೩೨ರ ಸೆಪ್ಟೆಂಬರ್ ೨೪ರಂದು ನಡೆದ ಒಪ್ಪಂದದ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರರ ಜೀವನದ ಎರಡು ಪ್ರಮುಖ ಘಟನೆಗಳಾಗಿ ಪೂನಾ ಒಪ್ಪಂದ ಮತ್ತು ಸಂವಿಧಾನ ರಚನೆಯ ಸಂದರ್ಭಗಳನ್ನು ಕಾಣಬಹುದು.

ಒಂದಷ್ಟು ಶುದ್ದತೆಯೆಡೆಗೆ...

ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ, ಸೋಲಿನ ಭಯದಿಂದ ಚಿಂತಿಸುವುದನ್ನು  ಬಿಡಿ, ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ. ಸಾವು - ಸೋಲು - ವಿಫಲತೆಯ ಭಯ  ನಮ್ಮನ್ನು ಜೀವನ ಪರ್ಯಂತ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು ಇವುಗಳ ಕಾರಣಕ್ಕಾಗಿಯೇ ಆಗಿರುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೭೬) - ದರ್ಶನ

ಯಾಕೆ‌ ಹೀಗೆ ಅವಳಿಗೆ ತಿಳಿದಿಲ್ಲ. ಅಪ್ಪನ ಜೊತೆಗೆ ದೇವರನ್ನ ಹತ್ತಿರದಿಂದ ನೋಡುವುದ್ದಕ್ಕೆ ಬಂದವಳು. ಹಲವು ಗಂಟೆಗಳ ಸರತಿ ಸಾಲಿನಲ್ಲಿ ನಿಂತು ನೆಮ್ಮದಿಯ ದರ್ಶನಕ್ಜೆ ಊಟ, ನೀರು ನಿದ್ದೆ ಬಿಟ್ಟು ಕಾದವಳು. ಭಗವಂತನ ಹತ್ತಿರ ಬಂದ ಹಾಗೆ ಅವಳಲ್ಲಿ ಪುಳಕ. ರೋಮಾಂಚನದ ಕ್ಷಣಕ್ಕೆ ಕಾಯುತ್ತಿದ್ದಾಳೆ.

Image

ಪಪ್ಪಾಯಿ ಮೊಸರು ಗೊಜ್ಜು

Image

ಪಪ್ಪಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಹಾಕಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಕರಿಬೇವು ಎಸಳಿನ ಜೊತೆ ಸಾಸಿವೆ ಒಗ್ಗರಣೆ ಕೊಡಿ. ಅನ್ನದ ಜೊತೆ ಕಲಸಿ ತಿನ್ನಿ.

ಬೇಕಿರುವ ಸಾಮಗ್ರಿ

ಹೆಚ್ಚಿದ ಪಪ್ಪಾಯಿ ೧ ಕಪ್, ಮೊಸರು ೧ ಕಪ್, ಹಸಿಮೆಣಸು ೧, ಸಾಸಿವೆ ೧ ಚಮಚ, ಒಣಮೆಣಸು ೧, ಎಣ್ಣೆ ೧ ಚಮಚ, ತೆಂಗಿನ ತುರಿ ೧/೨ ಕಪ್, ಕರಿಬೇವು ೨ ಎಸಳು, ಬೆಲ್ಲ ಕಡಲೆ ಗಾತ್ರ, ಉಪ್ಪು ರುಚಿಗೆ.