ಪಪ್ಪಾಯಿ ಮೊಸರು ಗೊಜ್ಜು

ಪಪ್ಪಾಯಿ ಮೊಸರು ಗೊಜ್ಜು

ಬೇಕಿರುವ ಸಾಮಗ್ರಿ

ಹೆಚ್ಚಿದ ಪಪ್ಪಾಯಿ ೧ ಕಪ್, ಮೊಸರು ೧ ಕಪ್, ಹಸಿಮೆಣಸು ೧, ಸಾಸಿವೆ ೧ ಚಮಚ, ಒಣಮೆಣಸು ೧, ಎಣ್ಣೆ ೧ ಚಮಚ, ತೆಂಗಿನ ತುರಿ ೧/೨ ಕಪ್, ಕರಿಬೇವು ೨ ಎಸಳು, ಬೆಲ್ಲ ಕಡಲೆ ಗಾತ್ರ, ಉಪ್ಪು ರುಚಿಗೆ.

ತಯಾರಿಸುವ ವಿಧಾನ

ಪಪ್ಪಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಹಾಕಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಕರಿಬೇವು ಎಸಳಿನ ಜೊತೆ ಸಾಸಿವೆ ಒಗ್ಗರಣೆ ಕೊಡಿ. ಅನ್ನದ ಜೊತೆ ಕಲಸಿ ತಿನ್ನಿ.

-ಸಹನಾ ಕಾಂತಬೈಲು, ಮಡಿಕೇರಿ