ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೧೭೦) - ವಿಚ್ಚೇದನ

ಅವನು ಹೇಗೆ ಸೆಳೆದುಕೊಂಡನೋ ಗೊತ್ತಿಲ್ಲ. ಆತ ನನ್ನನ್ನ ಅವನ ವಶ ಮಾಡಿಕೊಂಡದ್ದು ನನಗೆ ತಿಳಿಯಲೇ ಇಲ್ಲ. ಒಂದಷ್ಟು ಸಮಯ ಕೈಯಲ್ಲಿ ಪುಸ್ತಕಗಳು ಓಡಾಡ್ತಾ ಇದ್ದು ಅಕ್ಷರಗಳು ನನ್ನೊಂದಿಗೆ ಮಾತನಾಡುತ್ತಿದ್ದವು. ಹೊಸ ವಿಚಾರಗಳ ಅರಿವು ನನ್ನ ಯೋಚನೆಗಳ ಪರಿಧಿಯನ್ನು ಮೀರಿ ಅದ್ಭುತವಾಗಿ ಬದುಕುತ್ತಿತ್ತು.

Image

ಹಲಸಿನ ತೊಳೆ ತುಂಬುಗಾಯಿಪಲ್ಯ

Image

ಮೇಲೆ ತಿಳಿಸಿದ ಎಲ್ಲಾ ಸಾಮಾನುಗಳನ್ನು ಸೇರಿಸಿ ನೀರುಹಾಕಿ ರುಬ್ಬಿಕೊಳ್ಳಿ. ದಪ್ಪ ಹಲಸಿನ ತೊಳೆಯನ್ನು ತೊಟ್ಟಿನ ಬುಡದಲ್ಲಿ ನಾಜೂಕಾಗಿ ದುಂಡಗೆ ಕತ್ತರಿಸಿ ರುಬ್ಬಿದ ಮಸಾಲೆಯನ್ನು ತುಂಬಿಸಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿಬೇವು, ಅರಿಶಿನ ಎಲ್ಲಹಾಕಿ ಒಗ್ಗರಣೆ ಮಾಡಿಕೊಳ್ಳಿ.

ಬೇಕಿರುವ ಸಾಮಗ್ರಿ

೫-೬ ದಪ್ಪ ಹಲಸಿನ ತೊಳೆ ಹುರಿದು ಪುಡಿಮಾಡಿ, ಕಡಲೆಬೀಜ ೧ ಚಮಚ, ಹೇರಿದ ಹುಟ್ಟೆಳ್ಳು, ಕೊಬ್ಬರಿ ತುರಿ ¼ ಬಟ್ಟಲು, ೨ ಚಮಚ ಹುರಿದ ಕೊತ್ತಂಬರಿ ಬೀಜ, ೧ ಚಮಚ ಹುಡಿದ ಜೀರಿಗೆ, ಳಿ ಚಮಚ ಕೆಂಪು ಮೆಣಸಿನಪುಡಿ, ೨ ಚಮಚ ಹುರಿದ ಬೆಳ್ಳುಳ್ಳಿ-ಈರುಳ್ಳಿ ಪೇಸ್ಟ್, ಚಿಟಿಕೆ ಅರಿಶಿಣ, ೨ ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಗಜ್ಜಗ ಗಾತ್ರದ ಹುಣಸೆಹಣ್ಣು, ೨ ಚಮದ ಬೆಲ್ಲ, ಕೊತ್ತಂಬರಿ ಸೊಪ್ಪು.

ನೀರು ಕಾಗೆಗಳೆಂಬ ವಿಶೇಷ ಹಕ್ಕಿಗಳು

ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಹಿಂದೆ ಭತ್ತದ ಗದ್ದೆಗಳು ಇರುತ್ತಿದ್ದವು. ಮುಖ್ಯ ರಸ್ತೆಯಿಂದ ನಮ್ಮ ಮನೆಗೆ ತಲುಪುವ ಸುಮಾರು ಒಂದು ಕಿಲೋಮೀಟರ್‌ ದೂರದ ವರೆಗೂ ಹಚ್ಚ ಹಸುರಿನ ವಾತಾವರಣ.

Image

‘ವಡಾ ಪಾವ್’ ಹುಟ್ಟಿದ ಕಥೆ !

ನಾವೆಲ್ಲಾ ಸಣ್ಣವರಿದ್ದಾಗ ಮನೆ ಮನೆಗೆ ‘ಬೊಂಬಾಯಿ ಮಿಠಾಯಿ’ ಮಾರಿಕೊಂಡು ಬರುತ್ತಿದ್ದರು. ಈಗ ಶುಗರ್ ಕ್ಯಾಂಡಿ ಅಥವಾ ಕಾಟನ್ ಕ್ಯಾಂಡಿ ಎಂದು ಕರೆಯಲ್ಪಡುವ ಆ ಬೊಂಬಾಯಿ ಮಿಠಾಯಿ ಸಿಗುವುದು ಬಹಳ ಅಪರೂಪವಾಗಿದ್ದ ಕಾರಣ ನಮಗೆಲ್ಲಾ ಅದು ಬಹಳ ದೊಡ್ಡ ಸಿಹಿ ತಿಂಡಿಯಾಗಿತ್ತು. ಆಗೆಲ್ಲಾ ಅದು ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ. ಮನೆ ಮನೆಗೆ ಮಾರಿಕೊಂಡು ಬರುವವರೇ ಅದನ್ನು ತರಬೇಕು.

Image

ಕಟ್ಟು

ಪುಸ್ತಕದ ಲೇಖಕ/ಕವಿಯ ಹೆಸರು
ಬಸಯ್ಯ ಸ್ವಾಮಿ ಕಮಲದಿನ್ನಿ
ಪ್ರಕಾಶಕರು
ಬಂಡಾರ ಪ್ರಕಾಶನ, ಮಸ್ಕಿ, ರಾಯಚೂರು- ೫೮೪೧೨೪
ಪುಸ್ತಕದ ಬೆಲೆ
ರೂ. ೨೨೦.೦೦, ಮುದ್ರಣ: ೨೦೨೪

`ಕಟ್ಟು’ ಎಂಬ ಪುಸ್ತಕ ಡಾ. ಬಸಯ್ಯಸ್ವಾಮಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ಶಾಸನ, ಸಮಾಜ ಎಂಬ ಮೂರು ಭಾಗವನ್ನು ಒಳಗೊಂಡ ಒಟ್ಟು ೧೫ ಲೇಖನಗಳು ಇದರಲ್ಲಿವೆ.(ವಲಸೆ ಸಾಹಿತ್ಯ, ವಚನ ಸಾಹಿತ್ಯ, ಶಾಸನ, ಮತ್ತು ಭಾಷೆ) ಸಾಹಿತ್ಯವನ್ನು ವಿವಿದ ಆಯಾಮಗಳಲ್ಲಿ, ಹಲವು ಮಗ್ಗುಲುಗಳಲ್ಲಿ ನೋಡುವ ಕುತೂಹಲದ ಕಣ್ಣನ್ನೂ ಲೇಖಕ ಹೊಂದಿರುವುದನ್ನು ಇಲ್ಲಿ ಕಾಣಬಹುದು.

ಪೂಲಾ ಪಾಂಡಿಯನ್ ನೆನಪಿನಲ್ಲಿ…

ಪೂಲಾ ಪಾಂಡ್ಯನ್, ಮೂಸಾ ಷರೀಫ್, ಲಿಂಗೇಗೌಡ, ಮತ್ತು ಇನ್ನೂ ಹಲವರು… ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ  " ಮಂಗಳೂರಿನಿಂದ ದೆಹಲಿವರೆಗೆ " ಪಾದಯಾತ್ರೆ ಕೈಗೊಂಡಿದ್ದ ತಂಡದ ಮೇಲೆ ಗುಜರಾತಿನ ಸೂರತ್ ಬಳಿ ಟ್ರಕ್ ಹರಿದು ಅದರ ಮುಂಚೂಣಿಯಲ್ಲಿದ್ದ ಕರ್ನಾಟಕದ ಶ್ರೀ ಮೂಸಾ ಷರೀಫ್ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಶ್ರೀ ಲಿಂಗೇಗೌಡ ಅವರು ಅಕಾಲ ಮೃತ

Image

ಸ್ಟೇಟಸ್ ಕತೆಗಳು (ಭಾಗ ೧೧೬೯) - ಉತ್ತರ ಕೊಡಿ

ನಿನ್ನ ಆಲೋಚನೆಯನ್ನು ಬದಲಿಸು ಎಲ್ಲವೂ ಒಳ್ಳೆಯದಾಗುತ್ತೆ. ನಿಮ್ಮ ಮನೆಯ ದನಕ್ಕೆ ತಿನ್ನೋದಕ್ಕೆ ತಂದುಕೊಡುವ ಹುಲ್ಲು ನಿಮ್ಮೂರಿನದ್ದೆ, ಹಾಲು ಕರೆಯುವವನು ನೀನು, ಹಾಲು ನಿಮ್ಮದೇ, ಆದರೆ ಹಾಲಿನಿಂದ ಬೆಣ್ಣೆಯಾಗುವುದಕ್ಕೆ ಮೊಸರು ಕಡೆಯುವ ಪ್ರಕ್ರಿಯೆಯಲ್ಲಿ ನೀನು ಕುಡುಗೋಲನ್ನ ಯಾವುದೋ ಪರಿಚಯವಿಲ್ಲದ ಊರಿನಿಂದ ತಂದಿದ್ದೀಯಾ?

Image

ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ

ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ.

Image

ಭಾರತದ ಗುಕೇಶ್ ದೊಮ್ಮರಾಜು ಜಾಗತಿಕ ಚದುರಂಗ ಚಾಂಪಿಯನ್

ಭಾರತೀಯರಿಗೆ ಮತ್ತೊಂದು ಸಂಭ್ರಮ: ಭಾರತದ ಗುಕೇಶ್ ದೊಮ್ಮರಾಜು ನಿನ್ನೆ (12-12-2024) ಜಾಗತಿಕ ಚದುರಂಗ ಚಾಂಪಿಯನ್ ಪಟ್ಟವೇರಿದರು. ಅವರು 18ನೇ ವಯಸ್ಸಿನಲ್ಲೇ ಇದನ್ನು ಸಾಧಿಸುವ ಮೂಲಕ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಜಾಗತಿಕ ಚದುರಂಗ ಚಾಂಪಿಯನ್ ಎಂಬ ಸಾಧನೆ ಮಾಡಿದ್ದಂತೂ ರೋಚಕ!

ಈ ಹಿಂದಿನ ಜಾಗತಿಕ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ನಿನ್ನೆ ಜರಗಿದ 14ನೇ ಹಾಗೂ ಕೊನೆಯ ಪಂದ್ಯದಲ್ಲಿ ಸೋಲಿಸಿ 18ನೇ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅಂತಿಮವಾಗಿ, ಸಿಂಗಾಪುರದಲ್ಲಿ ಜರಗಿದ 14 ಪಂದ್ಯಗಳ ಜಾಗತಿಕ ಚಾಂಪಿಯನ್ಷಿಪ್-ನಲ್ಲಿ ಡಿಂಗ್ ಲಿರೆನ್ ಅವರ 6.5 ಅಂಕಗಳ ವಿರುದ್ಧ 7.5 ಅಂಕ ಗಳಿಸಿ, ಅಮೋಘ ಗೆಲುವು ಸಾಧಿಸಿದರು. ಅವರು ಗಳಿಸಿದ ಬಹುಮಾನದ ಮೊತ್ತ ರೂ.11.03 ಕೋಟಿ.

Image