ಹಲಸಿನ ತೊಳೆ ತುಂಬುಗಾಯಿಪಲ್ಯ
೫-೬ ದಪ್ಪ ಹಲಸಿನ ತೊಳೆ ಹುರಿದು ಪುಡಿಮಾಡಿ, ಕಡಲೆಬೀಜ ೧ ಚಮಚ, ಹೇರಿದ ಹುಟ್ಟೆಳ್ಳು, ಕೊಬ್ಬರಿ ತುರಿ ¼ ಬಟ್ಟಲು, ೨ ಚಮಚ ಹುರಿದ ಕೊತ್ತಂಬರಿ ಬೀಜ, ೧ ಚಮಚ ಹುಡಿದ ಜೀರಿಗೆ, ಳಿ ಚಮಚ ಕೆಂಪು ಮೆಣಸಿನಪುಡಿ, ೨ ಚಮಚ ಹುರಿದ ಬೆಳ್ಳುಳ್ಳಿ-ಈರುಳ್ಳಿ ಪೇಸ್ಟ್, ಚಿಟಿಕೆ ಅರಿಶಿಣ, ೨ ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಗಜ್ಜಗ ಗಾತ್ರದ ಹುಣಸೆಹಣ್ಣು, ೨ ಚಮದ ಬೆಲ್ಲ, ಕೊತ್ತಂಬರಿ ಸೊಪ್ಪು.
ಮೇಲೆ ತಿಳಿಸಿದ ಎಲ್ಲಾ ಸಾಮಾನುಗಳನ್ನು ಸೇರಿಸಿ ನೀರುಹಾಕಿ ರುಬ್ಬಿಕೊಳ್ಳಿ. ದಪ್ಪ ಹಲಸಿನ ತೊಳೆಯನ್ನು ತೊಟ್ಟಿನ ಬುಡದಲ್ಲಿ ನಾಜೂಕಾಗಿ ದುಂಡಗೆ ಕತ್ತರಿಸಿ ರುಬ್ಬಿದ ಮಸಾಲೆಯನ್ನು ತುಂಬಿಸಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿಬೇವು, ಅರಿಶಿನ ಎಲ್ಲಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದರಲ್ಲಿ ತುಂಬಿದ ಹಲಸಿನ ತೊಳೆಯನ್ನು ಇಟ್ಟು – ಮಸಾಲೆ ಮಿಕ್ಕಿದ್ದರೆ ಹಾಕಿ ಬೇಯುವಷ್ಟು ನೀರು ಹಾಕಿ ೧೦ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ಕುಕ್ಕರ್‌ನಲ್ಲಿ ಬೇಯಿಸುವುದಾದರೆ ಒಂದೇ ವಿಷಲ್ ಸಾಕು. ಬಿಸಿ ಆರಿದ ನಂತರ ಕೂಡಿಸಿ ಒಂದೆರಡು ಕುದಿಬರಿಸಿ ಮೇಲೆ ಸಣ್ಣದಾಗಿ ಕೊತ್ತಂಬರಿ ಸೊಪ್ಪು ಹೆಚ್ಚಿಹಾಕಿದರೆ ತುಂಬುಗಾಯಿ ಪಲ್ಯಸಿದ್ಧ. ಚಪಾತಿ, ರೊಟ್ಟಿಗೆ ಜೊತೆಗೆ ಒಳ್ಳೆ ಸಾಥಿ ಬೇಕೆನಿಸಿದರೆ ಎಳೆ ಬೀಜವನ್ನು ಇಡಿಯಾಗಿ ಅಥವಾ ಅರ್ಧ ಕತ್ತರಿಸಿ ಹಾಕಿದರೆ ಅದರ ರುಚಿ ನೂರ್ಮಡಿ.
-ಎಸ್. ರೋಹಿಣಿ ಶರ್ಮ ಸಾಗರ.