ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತ…

ಜಗತ್ತಿನ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯ ಮುಸ್ಲಿಮರದು. ಸ್ವಲ್ಪ ಯುರೋಪ್ ಮತ್ತು ಹೆಚ್ಚಾಗಿ ಏಷ್ಯಾದ  ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಮೂಲ ನಿವಾಸಿಗಳು, ಸೌದಿ ಅರೇಬಿಯಾದ ಮೆಕ್ಕಾವನ್ನು ಧಾರ್ಮಿಕ ಕೇಂದ್ರವಾಗಿ ಇಡೀ ಜಗತ್ತಿನಾದ್ಯಂತ ಪ್ರಸರಿಸಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೧೨೭೭) - ಮಿಂಚಿದ ಕಾಲ

ಮನೆ ಅಂಗಳದಲ್ಲಿ ಒಂದಷ್ಟು ಗಿಡಗಳನ್ನು ಸಾಲಾಗಿ ನೆಟ್ಟಿದ್ದರು. ಎಲ್ಲದಕ್ಕೂ ಪ್ರತಿದಿನ ನೀರು ಗೊಬ್ಬರವನ್ನು ನೀಡುತ್ತಾನೆ ಇದ್ದರು. ಆದರೆ ಆ ಗಿಡಗಳಲ್ಲಿ ಒಂದು ಗಿಡ ಮಾತ್ರ ಹೂ ನೀಡುವುದಕ್ಕೆ ಪ್ರಾರಂಭ ಮಾಡಿತು. ಆ ಮನೆಯ ಹುಡುಗ ಆ ಗಿಡಕ್ಕೆ ಎಲ್ಲಕ್ಕಿಂತ ಹೆಚ್ಚು ನೀರು ಗೊಬ್ಬರವನ್ನು ಹಾಕಿ ಉಳಿದ ಗಿಡಗಳನ್ನು ಕಡೆಗಣಿಸ್ತಾ ಬಂದ.

Image

ತಿರಸ್ಕಾರ

ಈ ದಿನ ತಿರಸ್ಕಾರದ ಬಗ್ಗೆ ತಿಳಿದುಕೊಳ್ಳೋಣ... ದ್ವೇಷ, ತಿರಸ್ಕಾರ ಎನ್ನುವುದು ನಮ್ಮ ಮನೋಭೂಮಿಯಲ್ಲಿ ಬೆಳೆಯುವ ಮುಳ್ಳು ಮತ್ತು ಕಲ್ಲುಗಳು ಇದ್ದಂತೆ. ಭೂಮಿಯಲ್ಲಿ ಮುಳ್ಳು, ಕಲ್ಲುಗಳು ಇದ್ದರೆ, ಸುಂದರ ತೋಟ ಮಾಡಲು ಆಗುವುದಿಲ್ಲ. ಹಾಗೆಯೇ ಮನಸ್ಸಿನಲ್ಲಿ ದ್ವೇಷ, ತಿರಸ್ಕಾರ ತುಂಬಿದ್ದರೆ, ಮನಸ್ಸು ಮಧುರ ಮಾಡಲು ಆಗುವುದಿಲ್ಲ. ಆದ್ದರಿಂದ ಈ ಮುಳ್ಳು, ಕಲ್ಲುಗಳನ್ನು ಮನೋಭೂಮಿಯಿಂದ ತೆಗೆಯಬೇಕು.

Image

ಗಡಿ

ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ಥ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು... ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ...

ಯುಗಾದಿ ಹಬ್ಬ ಬಂದೈತಿ

ಮಾಮರದಲ್ಲಿ ಹಾಡುತಿದೆ 

ಕೋಗಿಲೆಯೊಂದು ಕೂಗುತಿದೆ 

ಪ್ರಕೃತಿ ಸೌಂದರ್ಯ ಹೊಳೆಯುತಿದೆ 

ಮನುಕುಲಕ್ಕೆ ಖುಷಿ ತಂದೈತಿ

 

ಅರಳಿಸು ಎನ್ನ ಮನವು

ತಣಿಸು ನನ್ನ ತನುವು 

ಪ್ರಕೃತಿ ಸೌಂದರ್ಯವು 

ಹನುಮಂತ ದೇವರ ಜಾತ್ರೆಯು

 

ಕೋಗಿಲೆ ಧ್ವನಿಯಲ್ಲಿ ಸಂಗೀತವು 

ಜನಮನದಲ್ಲಿ ಸಂತೋಷವು 

ಮಕ್ಕಳ ಮುಖದಲ್ಲಿ ಮಂದಹಾಸವು 

ಇದು ದೇವರ ಕೊಟ್ಟ ಫಲವು

 

ಉತ್ಸವದ ಜಾತ್ರೆ ನಡದೈತೊ 

ಹನುಮಪ್ಪನ ತೇರು ಎಳೆದೈತೊ 

ಭಕ್ತರ ಹೃದಯಕ್ಕೆ ಹರ್ಷ ತಂದೈತೊ 

ಯುಗಾದಿ ಹಬ್ಬದ ಜಾತ್ರೆ ನಡದೈತೊ

 

ದೇವಾನು ದೇವತೆಗಳ ವರವು 

ಪ್ರಕೃತಿ ಮಾತೆ ವರದಾನವು 

ದೇವರು ಇಲ್ಲಿ ಪ್ರದಾನವು 

ಪರಿಸರ ಸಂರಕ್ಷಣೆ ಕಾರ್ಯ ಅನನ್ಯ

ಕರುನಾಡು ಕಂಡ ಶ್ರೇಷ್ಠ ಸಾಮಾಜಿಕ ಸೇವಕರು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವೈಚಾರಿಕ ಚಿಂತಕ ಬರಹಗಾರರು. ಮಾಧ್ಯಮ ಲೋಕದಲ್ಲಿ ವಿಶಿಷ್ಟ ರೀತಿಯಲ್ಲಿ ಛಾಪು ಮೂಡಿಸಿ, ಸತ್ಯ ನಿಷ್ಠ ವರದಿಗಳಿಗೆ ಹೆಸರು ಮಾಡಿದವರು. ನಿಷ್ಕಲ್ಮಶ - ನಿಷ್ಕಳಂಕ - ಪ್ರಾಮಾಣಿಕ ಸೇವೆಗೆ ಪ್ರಸಿದ್ಧಿ ಪಡೆದವರು.

Image

ಸ್ಟೇಟಸ್ ಕತೆಗಳು (ಭಾಗ ೧೨೭೬) - ಶಿಕ್ಷೆ

ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ. ಹೀಗ್ಯಾಕಾಗುತ್ತೆ. ಅನ್ನೋದು ನವೀನನ ಪ್ರಶ್ನೆ. ಮನೆಯೊಳಗಿದ್ದ ಬೆಕ್ಕು ತಪ್ಪಿಸಿಕೊಂಡು ಬಿಟ್ಟಿದೆ. ಯಾರೋ ನಂಬಿಕೆಯಿಂದ ಕೊಟ್ಟದ್ದು, ಚೆನ್ನಾಗಿತ್ತು. ಜೊತೆಯಲ್ಲಿಯೇ ಇತ್ತು. ಆದರೆ ಬೆಳಗ್ಗೆ ಕಾಣಿಸುತ್ತಿಲ್ಲ. ಈಗ ಮನೆಯವರಿಗೆ ಬೇಸರ, ಕೊಟ್ವವರಿಗೂ ಬೇಸರ. ಯಾರಿಗೂ ಕೆಲಸದಲ್ಲಿ ಉತ್ಸಾಹವಿಲ್ಲ.

Image