ಸ್ಟೇಟಸ್ ಕತೆಗಳು (ಭಾಗ ೧೨೭೭) - ಮಿಂಚಿದ ಕಾಲ

ಸ್ಟೇಟಸ್ ಕತೆಗಳು (ಭಾಗ ೧೨೭೭) - ಮಿಂಚಿದ ಕಾಲ

ಮನೆ ಅಂಗಳದಲ್ಲಿ ಒಂದಷ್ಟು ಗಿಡಗಳನ್ನು ಸಾಲಾಗಿ ನೆಟ್ಟಿದ್ದರು. ಎಲ್ಲದಕ್ಕೂ ಪ್ರತಿದಿನ ನೀರು ಗೊಬ್ಬರವನ್ನು ನೀಡುತ್ತಾನೆ ಇದ್ದರು. ಆದರೆ ಆ ಗಿಡಗಳಲ್ಲಿ ಒಂದು ಗಿಡ ಮಾತ್ರ ಹೂ ನೀಡುವುದಕ್ಕೆ ಪ್ರಾರಂಭ ಮಾಡಿತು. ಆ ಮನೆಯ ಹುಡುಗ ಆ ಗಿಡಕ್ಕೆ ಎಲ್ಲಕ್ಕಿಂತ ಹೆಚ್ಚು ನೀರು ಗೊಬ್ಬರವನ್ನು ಹಾಕಿ ಉಳಿದ ಗಿಡಗಳನ್ನು ಕಡೆಗಣಿಸ್ತಾ ಬಂದ. ದಿನಗಳು ದಾಟುತ್ತಾ ಹೋಯಿತು ಆ ಗಿಡ ತನ್ನಿಂದ ಆದಷ್ಟು ಒಂದೇ ಬಣ್ಣದ ಹೂವನ್ನ ನೀಡಿ ನೀಡಿ ಕೊನೆಗೆ ಸುಮ್ಮನಾಗಿ ಬಿಡ್ತು. ಸುತ್ತ ಮುತ್ತ ಇದ್ದ ಗಿಡಗಳಿಗೆ ಬಣ್ಣ ಬಣ್ಣದ ಹೂವು ನೀಡುವ ಶಕ್ತಿ ಇದ್ದರೂ ನೀರು ಗೊಬ್ಬರ ಸರಿಯಾಗಿ ಸಿಗದೇ ಹಾಗೆ ಮುದುಡಿ ಹೋಯ್ತು. ಹುಡುಗ ಮತ್ತೆಷ್ಟೇ ನೀರು ಗೊಬ್ಬರ ಹಾಕಿದರೂ ಆ ಗಿಡಗಳು ಮತ್ತೆ ಹೂ ಬಿಡುವ ಸಾಮರ್ಥ್ಯವನ್ನು ಗಳಿಸಿಕೊಳ್ಳಲಿಲ್ಲ. ಹುಡುಗನಿಗೆ ಅರ್ಥ ಸ್ವಲ್ಪ ತಡವಾಗಿ ಆಯ್ತು. ಎಲ್ಲ ಗಿಡಗಳಿಗೂ ಸಮನಾಗಿ ನೀರು ಗೊಬ್ಬರಗಳನ್ನ ಹಾಕುತ್ತಿದ್ದರೆ ಬಣ್ಣ ಬಣ್ಣದ ಹೂವುಗಳನ್ನ ಪಡೆಯಬಹುದಿತ್ತು ಅಂತ. ಕಾಲ‌ಮಿಂಚಿ ಹೋಗಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ