ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಗರಿಕ ಸರಕಾರದ ವೈಖರಿಯಲ್ಲ

ಕಾರ್ಯಾಂಗಕ್ಕೆ ನ್ಯಾಯಾಂಗದಂತೆ ವರ್ತಿಸುವ ಅಧಿಕಾರ ಭಾರತದಲ್ಲಿ ಎಂದಿಗೂ ಇಲ್ಲ. ತಪ್ಪಿತಸ್ಥರು, ಗಲಭೆಗೆ ಕಾರಣರಾದವರು ಎಂಬ ಆರೋಪಕ್ಕೆ ಸಿಲುಕಿದವರನ್ನು ಶಿಕ್ಷಿಸಲು, ಅವರ ಮನೆಗಳನ್ನು ಬುಲ್ಡೋಜರ್ ಗಳಿಂದ ಧ್ವಂಸಗೊಳಿಸಲು ಆಡಳಿತಶಾಹಿ ದಬ್ಬಾಳಿಕೆಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಚಾಟಿ ಬೀಸಿರುವುದು ಸ್ವಾಗತಾರ್ಹ.

Image

ಯುದ್ದ ಮತ್ತು ಜೀವನ

ಬದುಕೊಂದು ಯುದ್ದ ಭೂಮಿ, ಗೆಲ್ಲಬಹುದು - ಸೋಲಬಹುದು - ಅನಿರೀಕ್ಷಿತವಾಗಿ ಸಾಯಬಹುದು. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ. ಯುದ್ದದಲ್ಲಿ ಕತ್ತಿ, ಬಂದೂಕು, ಬಾಂಬು, ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ ನಮ್ಮನ್ನು ಮುಟ್ಟದೇ ಹೋಗಬಹುದು.

Image

ಸ್ಟೇಟಸ್ ಕತೆಗಳು (ಭಾಗ ೧೨೮೦) - ಬೆಕ್ಕಿನ ಪಾಠ

ಎರಡು ದಿನದಲ್ಲಿ ಅಷ್ಟು ದೊಡ್ಡ ಬದಲಾವಣೆಯನೂ ಆಗುವುದಿಲ್ಲ. ಹೀಗಂದುಕೊಂಡೆ ಬದುಕಿದ್ದವನು ನಾನು. ಇತ್ತೀಚಿಗೆ ಮನೆಯ ಬೆಕ್ಕನ್ನು ಎರಡು ದಿನದ ಮಟ್ಟಿಗೆ ಪಕ್ಕದ ಮನೆಯವರಿಗೆ ಒಪ್ಪಿಸಿ ತೆರಳಬೇಕಿತ್ತು. ಅದನ್ನು ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದರು. ಅವರು ಆ ಎರಡು ದಿನ ಬೆಕ್ಕನ್ನ ತುಂಬಾ ಪ್ರೀತಿಯಿಂದ ನೋಡಿಕೊಂಡ್ರು.

Image

ನಿಷ್ಪಾಪಿ ಸಸ್ಯಗಳು (ಭಾಗ ೯೪) - ಬಿಂಬುಳಿ ಗಿಡ

ಕೆಲವು ಗಿಡ ಮರ ಬಳ್ಳಿಗಳನ್ನು ಕಂಡಾಗ ನಮಗೇನೋ ವಿಶೇಷ ಮಮತೆ ಮೂಡುವುದುಂಟು. ಅವುಗಳ ಎಲೆಗಳ ಜೋಡಣೆ, ಹೂಗಳ ಸೌಂದರ್ಯ, ಬೆಳೆಯುವ ಕ್ರಮ.. ಹೀಗೆ ಏನಾದರೊಂದು ಹಿನ್ನೆಲೆ ಇದ್ದೇ ಇರುವುದು. ಕೆಲವು ಸಸ್ಯಗಳಿಗೆ ತಮ್ಮ ಹೂ, ಕಾಯಿ, ಹಣ್ಣುಗಳ ಬಗ್ಗೆ ಅತೀವ ಪ್ರೀತಿ. ಮೈತುಂಬಾ ತಮ್ಮ ಮರಿಗಳನ್ನು ಹೊತ್ತುಕೊಳ್ಳುತ್ತವೆ.

Image

ಬಿಡುಗಡೆಯ ಹಾಡುಗಳು (ಭಾಗ ೨೮) - ಬಿ. ನೀಲಕಂಠಯ್ಯ

ಬಿ. ನೀಲಕಂಠಯ್ಯನವರ ‘ಕಾಂಗ್ರೆಸ್ ಲಾವಣಿ’ ಯ ಕೊನೆಯ ಭಾಗವನ್ನು ಈ ವಾರ ಪ್ರಕಟ ಮಾಡಿದ್ದೇವೆ. 

Image

ಚಂದನವನದೊಳ್

ಪುಸ್ತಕದ ಲೇಖಕ/ಕವಿಯ ಹೆಸರು
ಚೇತನ್ ನಾಡಿಗೇರ್
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೩೯೫.೦೦, ಮುದ್ರಣ: ೨೦೨೫

ಒಂಬತ್ತು ದಶಕಗಳ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ. ಬಹುಶಃ ಬೇರೆ ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗದಷ್ಟು ಅತೀ ಹೆಚ್ಚು ಪೌರಾಣಿಕ ಚಿತ್ರಗಳು, ಐತಿಹಾಸಿಕ ಸಿನಿಮಾಗಳು, ಸಾಹಿತ್ಯಾಧಾರಿತ, ಕಲಾತ್ಮಕ, ಮಕ್ಕಳ, ಉಪಭಾಷೆಯ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿದ್ದಾರೆ.

ಒಳ ಮೀಸಲಾತಿ ಒಡೆದ ಮೀಸಲಾತಿ ಆಗುವ ಮುನ್ನ ಎಚ್ಚರವಹಿಸಿ

ಈ ಕ್ಷಣದ ಎಲ್ಲಾ ಶೋಷಿತ ಸಮುದಾಯಗಳ ನಾಯಕರು ದಯವಿಟ್ಟು ಗಂಭೀರವಾಗಿ ಯೋಚಿಸಿ. ಒಳ ಮೀಸಲಾತಿ ಖಂಡಿತವಾಗಲೂ ನ್ಯಾಯಯುತವಾದ ಬೇಡಿಕೆ. ಇಂದಲ್ಲ ನಾಳೆ ಬಹುಶಃ ಇನ್ನೇನು ಕೆಲವೇ ತಿಂಗಳುಗಳಲ್ಲಿ ಅದು ಜಾರಿಯಾಗಬಹುದು. ಅದಕ್ಕಾಗಿ ಹೋರಾಟ ನಿರಂತರವಾಗಿರಲಿ.

Image

ಸ್ಟೇಟಸ್ ಕತೆಗಳು (ಭಾಗ ೧೨೭೯) - ದಯೆ

ದೂರದೂರಿಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಶನಿ ಹೆಗಲೇರಿದ್ದ ಅದರ ಪರಿಹಾರಾರ್ಥವಾಗಿ ಪೂಜೆಯೊಂದನ್ನು ದೂರದೂರಿನ ದೇವಸ್ಥಾನದಲ್ಲಿ ಸಲ್ಲಿಸಬೇಕಾಗಿತ್ತು. ಪ್ರತಿ ಸಲವೂ ದಿನಾಂಕವನ್ನು ನಿಗದಿ ಮಾಡಿದಾಗ ಒಂದಲ್ಲ ಒಂದು ವಿಘ್ನಗಳು ಎದುರಾಗಿ ಅಲ್ಲಿಗೆ ತಲುಪುವುದಕ್ಕೆ ಸಾಧ್ಯವಾಗ್ತಾಯಿರಲಿಲ್ಲ. ಕೊನೆಗೂ ಒಂದು ದಿನ‌ ನಿಗದಿಯಾಯಿತು.

Image

ಮಾವಿನಕಾಯಿ ಗೊಜ್ಜು

Image

ಮಾವಿನಕಾಯಿಯನ್ನು ನೀರಿನಲ್ಲಿ ಬೇಯಿಸಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ನೀರು, ಉಪ್ಪು, ಹಸಿಮೆಣಸು, ಬೆಲ್ಲ ಹಾಕಿ ಸೌಟಿನಲ್ಲಿ ತಿರುವಿ. ಬೆಳ್ಳುಳ್ಳಿ, ಕರಿಬೇವು ಎಸಳಿನ ಒಗ್ಗರಣೆ ಕೊಡಿ. ಅನ್ನಕ್ಕೆ ಕಲಸಿಕೊಂಡು ತಿನ್ನಿ.

ಬೇಕಿರುವ ಸಾಮಗ್ರಿ

ಬಲಿತ ಮಾವಿನಕಾಯಿ ೨, ಬೆಲ್ಲ ಸಣ್ಣ ಉಂಡೆ, ಹಸಿಮೆಣಸು ೨, ಉಪ್ಪು ರುಚಿಗೆ, ಒಗ್ಗರಣೆಗೆ ಒಣಮೆಣಸು ೧, ಬೆಳ್ಳುಳ್ಳಿ ೫ ಎಸಳು, ಸಾಸಿವೆ ೧ ಚಮಚ, ಎಣ್ಣೆ ೨ ಚಮಚ, ಕರಿಬೇವಿನ ಎಸಳು.