ಸ್ಟೇಟಸ್ ಕತೆಗಳು (ಭಾಗ ೧೨೭೯) - ದಯೆ

ದೂರದೂರಿಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಶನಿ ಹೆಗಲೇರಿದ್ದ ಅದರ ಪರಿಹಾರಾರ್ಥವಾಗಿ ಪೂಜೆಯೊಂದನ್ನು ದೂರದೂರಿನ ದೇವಸ್ಥಾನದಲ್ಲಿ ಸಲ್ಲಿಸಬೇಕಾಗಿತ್ತು. ಪ್ರತಿ ಸಲವೂ ದಿನಾಂಕವನ್ನು ನಿಗದಿ ಮಾಡಿದಾಗ ಒಂದಲ್ಲ ಒಂದು ವಿಘ್ನಗಳು ಎದುರಾಗಿ ಅಲ್ಲಿಗೆ ತಲುಪುವುದಕ್ಕೆ ಸಾಧ್ಯವಾಗ್ತಾಯಿರಲಿಲ್ಲ. ಕೊನೆಗೂ ಒಂದು ದಿನ ನಿಗದಿಯಾಯಿತು. ಬರಬೇಕೆಂದುಕೊಂಡಿದ್ದವರಿಗೆ ಅವರ ಬದಲಿಗೆ ಇನ್ನೊಂದು ಇಬ್ಬರು ಸೇರಿಕೊಂಡು ಬೆಂಗಳೂರಿಗೆ ಹೊರಟರು. ಹೊರಟದ್ದು ಮಧ್ಯರಾತ್ರಿ ಪೂಜೆ ಮುಗಿಸಿಕೊಂಡು ಊಟ ಮುಗಿಸಿ ಎಲ್ಲರಿಗೂ ವಾಹನ ಚಲಾವಣೆಗೊತ್ತಿದ್ದ ಕಾರಣ ಒಬ್ಬರಿಗೊಬ್ಬರು ಸ್ಟೇರಿಂಗ್ ಬದಲಿಸುತ್ತಾ ಅರ್ಧ ದಾರಿ ತಲುಪಿಯಾಗಿತ್ತು. ನೇರವಾದ ರಸ್ತೆಯಲ್ಲಿ ವೇಗವನ್ನ ಪಡೆದುಕೊಂಡು ಸಾಗುತ್ತಿದ್ದ ಇವರ ವಾಹನಕ್ಕೆ ಅದೆಲ್ಲಿಂದಲೋ ದುತ್ತನೆ ಎದುರಾದ ವಾಹನ ಒಂದನ್ನ ತಪ್ಪಿಸುವುದಕ್ಕೆ ತಿರುಗಿಸಿದ ಸ್ಟೇರಿಂಗ್, ಒತ್ತಿದ ಬ್ರೇಕ್ ನ ಕಾರಣಕ್ಕೆ ಕಾರು ಪಲ್ಟಿ ಹೊಡೆದು ನೆಲಕ್ಕೆ ಅಪ್ಪಳಿಸಿಕೊಂಡುಬಿಟ್ಟಿತು. ಆ ಕ್ಷಣದಲ್ಲಿ ಒಂದಿಬ್ಬರಿಗೆ ದೇಹದೊಳಗೆ ಇನ್ನೊಬ್ಬರಿಗೆ ದೇಹದ ಹೊರಗೆ ಗಾಯವಾಯಿತು.ಎಲ್ಲರಿಗೂ ಬೇಸರ ಭಗವಂತನ ಪ್ರಸಾದ ಮನೆ ತಲುಪಲಿಲ್ಲವಲ್ಲಾ ಅಂತ. ಅವರ ಕೈಹಿಡಿದವರು "ಯಾವುದೋ ಒಂದು ದೊಡ್ಡ ಗಂಡಾಂತರವನ್ನು ತಪ್ಪಿಸಿ ಭಗವಂತ ನಿಮ್ಮ ಕೈ ಹಿಡಿದಿದ್ದಾನೆ. ಆ ಕಾರಣಕ್ಕೆ ಇಷ್ಟು ದಿನಗಳ ನಂತರ ಕಾರ್ಯಕ್ರಮ ನಿಗದಿಯಾಗಿದ್ದು ಯಾವುದೇ ಜೀವ ಹಾನಿ ಆಗದೇ ನೀವೆಲ್ಲರೂ ಮರಳಿ ಬಂದಿರೋದು ಭಗವಂತ ಕೊಟ್ಟ ಕೃಪೆ ಅಂತಂದು ಹಾರೈಸಿ ತೆರಳಿ ಬಿಟ್ಟರು. ಯಾಕೆ ಹೀಗೆ ಆಯ್ತು ಅಂತ ಚಿಂತೆಯಲ್ಲಿದ್ದ ಅಷ್ಟು ಜನರಿಗೆ ಹೊಸತೊಂದು ವಿಚಾರ ಮನಸ್ಸಿನೊಳಗೆ ಮನೆ ಮಾಡಿ ನೆಮ್ಮದಿ ಗಟ್ಟಿಯಾಗಿ ನಂಬಿಕೆ ಹೆಚ್ಚಾಯ್ತು. ಭಗವಂತ ಜೊತೆಗಿದ್ದಾನೆ. ಆ ದಿನ ಅವರ ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪ ಸಂಭ್ರಮದಿಂದ ಮಿನುಗುತ್ತಿತ್ತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ