ಸ್ಟೇಟಸ್ ಕತೆಗಳು (ಭಾಗ ೧೨೮೦) - ಬೆಕ್ಕಿನ ಪಾಠ

ಎರಡು ದಿನದಲ್ಲಿ ಅಷ್ಟು ದೊಡ್ಡ ಬದಲಾವಣೆಯನೂ ಆಗುವುದಿಲ್ಲ. ಹೀಗಂದುಕೊಂಡೆ ಬದುಕಿದ್ದವನು ನಾನು. ಇತ್ತೀಚಿಗೆ ಮನೆಯ ಬೆಕ್ಕನ್ನು ಎರಡು ದಿನದ ಮಟ್ಟಿಗೆ ಪಕ್ಕದ ಮನೆಯವರಿಗೆ ಒಪ್ಪಿಸಿ ತೆರಳಬೇಕಿತ್ತು. ಅದನ್ನು ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದರು. ಅವರು ಆ ಎರಡು ದಿನ ಬೆಕ್ಕನ್ನ ತುಂಬಾ ಪ್ರೀತಿಯಿಂದ ನೋಡಿಕೊಂಡ್ರು. ಅದರ ಜೊತೆಗೆ ಬಾಂಧವ್ಯ ಗಟ್ಟಿಯಾಯಿತು .ಎರಡು ದಿನ ಬಿಟ್ಟು ಮತ್ತೆ ಮನೆಗೆ ಕರೆದುಕೊಂಡು ಬಂದ ಕೂಡಲೇ ಆ ಮನೆಯಲ್ಲಿ ಒಂದು ಮೌನ ಆವರಿಸಿತು. ಯಾರನ್ನೋ ಕಳೆದುಕೊಂಡ ಭಾವ ಕಾಡ್ತಾ ಇತ್ತು. ಎರಡು ದಿನಗಳ ಕಾಲ ಕೀಟಲೆ ಮಾಡುತ್ತಿದ್ದವ ಜೊತೆಗಿಲ್ಲ ಅನ್ನುವ ನೋವು ಮತ್ತೆ ಮನಸೊಳಗೆ ಕುಟುಕುತ್ತಿತ್ತು. ಒಟ್ಟಿನಲ್ಲಿ ಆ ಎರಡು ಬೆಕ್ಕುಗಳು ಎರಡು ದಿನದಲ್ಲಿ ದೊಡ್ಡ ಬದಲಾವಣೆಯನ್ನು ಆ ಮನೆಯೊಳಗೆ ತಂದಿದ್ದವು ಮನಸ್ಸಿನ ಒಳಗೆ ಮೂಡಿಸಿದ್ದವು. ನನಗೆ ಅವತ್ತು ಅರ್ಥವಾಯಿತು ಎರಡು ದಿನ ಇದ್ದ ಆ ಮಾತು ಬರದ ಬೆಕ್ಕೇ , ಅಷ್ಟು ದೊಡ್ಡ ಬದಲಾವಣೆಯನ್ನು ಆ ಮನೆಯಲ್ಲಿ ತಂದಿದೆ ಅಂತಾದರೆ ಹಲವು ದಿನ ಈ ಭೂಮಿಯಲ್ಲಿ ನಮ್ಮ ಜೊತೆಗಿರುವವರ ಸಂಗಡ ನಾವು ಇನ್ನೆಷ್ಟು ಬದಲಾವಣೆಯನ್ನು ತರುವುದಕ್ಕೆ ಸಾಧ್ಯ ಇದೆ ಅಲ್ವಾ? ಬೆಕ್ಕಿನಿಂದರ್ಥವಾಯಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ