ಸ್ಟೇಟಸ್ ಕತೆಗಳು (ಭಾಗ ೧೨೭೬) - ಶಿಕ್ಷೆ

ಸ್ಟೇಟಸ್ ಕತೆಗಳು (ಭಾಗ ೧೨೭೬) - ಶಿಕ್ಷೆ

ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ. ಹೀಗ್ಯಾಕಾಗುತ್ತೆ. ಅನ್ನೋದು ನವೀನನ ಪ್ರಶ್ನೆ. ಮನೆಯೊಳಗಿದ್ದ ಬೆಕ್ಕು ತಪ್ಪಿಸಿಕೊಂಡು ಬಿಟ್ಟಿದೆ. ಯಾರೋ ನಂಬಿಕೆಯಿಂದ ಕೊಟ್ಟದ್ದು, ಚೆನ್ನಾಗಿತ್ತು. ಜೊತೆಯಲ್ಲಿಯೇ ಇತ್ತು. ಆದರೆ ಬೆಳಗ್ಗೆ ಕಾಣಿಸುತ್ತಿಲ್ಲ. ಈಗ ಮನೆಯವರಿಗೆ ಬೇಸರ, ಕೊಟ್ವವರಿಗೂ ಬೇಸರ. ಯಾರಿಗೂ ಕೆಲಸದಲ್ಲಿ ಉತ್ಸಾಹವಿಲ್ಲ. ಕಳೆದುಕೊಂಡದ್ದನ್ನ ಇಡೀ ದಿನ‌ಹುಡುಕಿದ್ದೇ ಬಂತು. ಊಟ ಸೇರ್ತಿಲ್ಲ, ನಿದ್ದೆ ಇಳಿತಾ ಇಲ್ಲ. ಒಟ್ಟಿನಲ್ಲಿ ಎರಡೂ‌ ಮನೆಗಳು ಮೌನವಾಗಿವೆ, ಬೆಕ್ಕುನ‌ ತಪ್ಪಿಗೆ ಎರಡೂ ಮನೆಯ‌ ಮನಸ್ಸುಗಳು ನೋವಿನಿಂದ ಕುಗ್ಗಿ  ಹೋಗಿದೆ. ಅದಕ್ಕೆ ನವೀನನ ಪ್ರಶ್ನೆ, ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಯಾಕೆ? ನೀವೇನಂತೀರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ