ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅನುಕಂಪ

ಮೆಲ್ಲಮೆಲ್ಲನೆ ಚಿಗುರಿ  ತಲೆಯೆತ್ತಿ ನಿಂತಿದ್ದ

ಹಸುರೆಲೆಯ ಗಿಡಕೊಂದು ಕಲ್ಲು ಬಿತ್ತು

ಆಘಾತದಿಂದ ಕುಂದಿದ ಸಸ್ಯ ನೋವಿಂದ

ತನ್ನೊಂದು ಶಾಖೆಯನು ಬಲಿಯಿತ್ತಿತು     1

ಕೊಂಬೆಯಿಲ್ಲದ ಗಿಡವ ನೋಡಿ ಕನಿಕರದಿಂದ

ಕಣ್ಣಿಂದ ಜಲ ಸುರಿಸುವವರೇ ಎಲ್ಲ

ಅನುಕಂಪ ಜಲಕಿಂತ ತಂಪಾದ ನೀರನ್ನು

ಹನಿಹನಿಸೆ ಉಪಕಾರ ಕಡಿಮೆಯಲ್ಲ         2

ಬಿಸಿಬಿಸಿಯ ಕಣ್ಣೀರು ನೋಡಿ ನಲುಗುತ ಕೊರಗಿ

ಬೆಂದು ಹೋಯಿತು ಸಸಿಯ ಕೋಮಲಾಂಗ

ಎದುರಿನಲಿ ಕನಿಕರಿಸೆ ಮರುಗದೇ ಮರದ ಮನ?

ಎಂದು ಕೂಗಿತು ಮನದ ಪಕ್ಷಿಯಾಗ!       3

ಸಮಾಜ ಸೇವೆಯಲ್ಲಿ ಮನುಜರ ಅರಿಯಲು ಮೋಸಹೋಗುವುದು ಅನಿವಾರ್ಯವೆ

ವಕೀಲ ವೃತ್ತಿಯಲ್ಲಿ ಸಮಾಜದ ಬಹುಮುಖ ವ್ಯಕ್ತಿತ್ವಗಳನ್ನು ಕಾಣುವ ಸದಾವಕಾಶ ದೊರೆತಿದ್ದರಿಂದ ನನಗೆ ಅರಿವಿಲ್ಲದೆ ಸಮಾಜದ ಅನೇಕ ಸಮಸ್ಯೆಗಳ ಬಗ್ಗೆ ಸ್ವಂದಿಸುತ್ತ ಕಾನೂನು ಬದ್ದವಾಗಿ ಪ್ರತಿಕ್ರಿಯಿಸುತ್ತ ಸಾಗಿದ ನನಗೆ ಈ ಸಮಾಜ ಸೇವೆಯಲ್ಲಿ ಎದುರಾದ ಕೆಲವಾರು  ವಿಕೃತಿಗಳ ಬಗ್ಗೆ ಹೇಳಲು ಮನಸ್ಸು ಈ ಲೇಖನಿಯೊಂದಿಗೆ ಇಂದು ಮುಂದಾಗಿದೆ.

ಕಾಮಧೇನು

ಕಾಮಧೇನು

 


ಬ್ರಹ್ಮನ ಮುಖದಿಂದ ಜನಿಸಿ 
ಸುರಲೋಕವನ್ನು ಸೇರಿ
ನಂದಿಯನು ಶಿವಗಿತ್ತೆ
ಇಷ್ಟಾರ್ಥ ಸುರಪತಿಗೆ
ಒಲಿದವರ ಸಂತೈಸಿ
ಕಾಮನೆಯ ಪೂರೈಸಿ
ಸ್ವರ್ಗ ಸಿರಿ ಘನತೆ ನೀನು
    ಕಾಮಧೇನು ಕಾಮಧೇನು ||೧||

 

ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆಯೇ?!

ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆಯೇ?!


          ಅಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತ ಗೊಳಿಸುವ ಸಾರ್ವಜನಿಕ ಪ್ರಯತ್ನ ಹೊಸವರ್ಷದಲ್ಲಾದರೂ ಆರಂಭವಾಗಲೆಂದು ಗಣ್ಯಾತಿಗಣ್ಯರು ವಿವಿಧ ಮಾಧ್ಯಮಗಳಲ್ಲಿ ಹಾಡಿ ಹರೆಸಿದರು ಕೆಲವರ ಮಿಡಿತದಲ್ಲೇನೋ ಪ್ರಾಂಜಲತೆ ಇದ್ದಿರಬಹುದು ಆದರೆ ಇಂಥಾ ಮಿಡಿತಗಳು ಮನದ ಕದ ತಟ್ಟಿದಾಗ ಪುಟಿದೆದ್ದು ಅಪ್ಪಿಕೊಳ್ಳುವ ಸಹೃದಯತೆ ಓದುಗರಲ್ಲಿ, ವೀಕ್ಷರಲ್ಲಿ ಇನ್ನೂ ಉಳಿದಿದೆಯೇ?! ಇದ್ದೀತೆಂಬ ಹೇರಾಸೆ ಇಟ್ಟುಕೊಂಡರೂ ಅದರ ಪರಿಣಮಕಾರಿತ್ವ ಅನುಮಾನಾಸ್ಪದವೇ!

WISH YOU HAPPY NEW YEAR(ಹಾಸ್ಯ)


 


ಜನವರಿ ಒಂದನೇ ತಾರೀಖು, ಬೇಗ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ರೆಡಿಯಾದೆ


ನಮ್ಮನೆ ಕೆಲಸದವಳು ಮಾಯಮ್ಮ,


"ಅಣ್ಣಾ ಆಯಿತ್ರಾ, ರಾತ್ರಿ ಸೇರಿದ್ದು" ಅಂದಳು.


ಛೆ ಇದೇನು ಹೀಗೆ ಗೇಟಲ್ಲಿ ನಿಂತು ಕೇಳ್ತಾಳೆ ಅಂದುಕೊಂಡೆ.


ಆದ್ರೂ ಸಂಸಾರ ಗುಟ್ಟು ವ್ಯಾಧಿ ರಟ್ಟು ಆಂತಾರೆ.


ನಮ್ಮ ಸಂಸಾರ ಆನಂದ ಸಾಗರ ಅಂತಾ ಇವಳಿಗೆ ಏನಾದ್ರೂ ಕನಸಾ?! ಆಂದುಕೊಂಡೆ.


ಅಷ್ಟರಲ್ಲಿ, ನನ್ನ ಸಾಗರದಂತಾ (ವಿಶಾಲವಾದ ದೇಹ, ಮನಸ್ಸಲ್ಲ) ಮಡದಿ ಬಂದು


"ಮಾಯಮ್ಮ ಮೊದಲು ಮನೆ ಎಲ್ಲಾ ಒರೆಸು, ರಾತ್ರಿ ತುಂಬಾ ಗಲೀಜಾಗಿದೆ" ಅಂದಳು.


ಆಗ ಅರ್ಥವಾಯಿತು. ಇದು ಆನಂದ ಸಾಗರದ ವಿಷಯವಲ್ಲ, ರಾತ್ರಿ ಸ್ನೇಹಿತರೆಲ್ಲಾ ಸೇರಿ, "ಸುಖ ಸಾಗರ" ದಿಂದ ಪಾರ್ಸೆಲ್ ತಂದು ತಿಂದದ್ದು ಅಂತಾ


ಸರಿ ಅಷ್ಟರಲ್ಲಿ ಫೋನ್ ಮೇಲೆ ಫೋನು, ಕಾಲ್ ಮೇಲೆ ಕಾಲು.


"ಯಾಪಿ ನು ಎಯರ್" ಅಂತು ಒಬ್ಬಳು


"ಸಾ ಹೊಸ ವರ್ಸ ಸುಬ್ಬಾಸ್ಯ್" ಅಂತ ಒಬ್ಬ

ಹೊಸ ವರ್ಷದ ಶುಭಾಷಯಗಳು

ಸಂಪದದ ಮಿತ್ರರೆಲ್ಲರಿಗೂ ಹೊಸ ವರುಷ ಹೊಸತನ್ನು ತರಲಿ, ಹೊಸ ಕಾರ್ಯಗಳಿಗೆ ನಾಂದಿಯಾಗಲೆಂದು ಆಶಿಸುತ್ತೇನೆ.

2011 - ಹೊಸ ವರ್ಷದ ಶುಭಾಷಯಗಳು

ಭುಪ್ತ ಎಂಬ ಭೂಪತಿ --ಫಿನ್ಲೆಂಡ್ ಪ್ರವಾಸ ಕಥನ--ಭಾಗ ೧೪

     ಫಿನ್ಲಂಡಿನಲ್ಲಿ ಮೊರು ತಿಂಗಳು ಇರುವುದು ಒಂದೇ, ಲಾಸ್ ವೆಗಾಸಿನಲ್ಲಿ ಮೊರು ವರ್ಷವಿರುವುದು ಒಂದೇ. ನಿಮ್ಮ ಮನರಂಜನೆಯನ್ನು ನೀವೇ, ನಮ್ಮದನ್ನು ನಾವೇ ಹುಡುಕಿಕೊಳ್ಳಬೇಕು--ಹೆಲ್ಸಿಂಕಿಯಲ್ಲಿ. ಬೆಳಿಗ್ಗೆ ಸೂರ್ಯೋದಯವಾದ ಕೂಡಲೇ, ಆರು ಗಂಟೆಗೆಲ್ಲ ಮಲಗಿಬಿಡುತ್ತಿದ್ದೆ. ಏಳುವುದು ಮಧ್ಯಾಹ್ನ ಹನ್ನೆರೆಡು ಗಂಟೆಗೆ. ಅಡುಗೆ, ಸ್ನಾನ, ಊಟ, ಸೈಕಲ್, ಛತ್ರಿ, ಕ್ಯಾಮರ ಹಿಡಿದು ಗ್ಯಾಲರಿ-ಮ್ಯೂಸಿಯಂಗಳ ಸುತ್ತಾಟ. ಸಂಜೆ ಕಲಾಶಾಲೆಗಳೆಲ್ಲ ಮುಚ್ಚಿದ ನಂತರ 'ತಾಯ್ದೆಹಳ್ಳಿ' ಹೆಸರಿನ ಸಂಗ್ರಹಾಲಯಕ್ಕೆ ಅಂಟಿದಂತಿದ್ದ ಪಬ್ಬಿನಲ್ಲಿ ಎಲ್ಲ ಕಲಾವಿದರ ಒಕ್ಕೂಟ--ರಾತ್ರಿ ಹನ್ನೆರೆಡು, ಒಂದು ಗಂಟೆಯವರೆಗೂ. ಈಗ ಹೇಳಿ 'ತಾಯ್ದೆಹಳ್ಳಿ' ಅನ್ನುವುದು ಕನ್ನಡ ಪದವಾ ಅಥವಾ ಫಿನ್ನಿಶ್ ಪದವೇ ಎಂದು.

ಸಂತೋಷ್ ಆಚಾರ್ಯರಿಗೆ ಜನುಮದಿನದ ಹಾರ್ಧಿಕ ಶುಭಾಶಯಗಳು


ಪ್ರಿಯ ಸಂಪದಿಗ ಸಂತೋಷ್ ಆಚಾರ್ಯರಿಗೆ ಜನುಮದಿನದ ಹಾರ್ಧಿಕ ಶುಭಾಶಯಗಳು,ನಿಮ್ಮ ಎಲ್ಲಾ ಕನಸು ಈಡೇರಲಿ.

ನಿಮ್ಮ

ಕಾಮತ್ ಕುಂಬ್ಳೆ

ವನ ಮಹೋತ್ಸವ

ವನ ಮಹೋತ್ಸವ
 
ಶಾಲೆಯಲ್ಲಿ ಮಾಡಿದೆವು ವನ ಮಹೋತ್ಸವ
ಸಸಿಯ ನೆಡಲು ನಮಗೆ ಕೊಟ್ಟಿತು ಉತ್ಸಾಹ
 
ಅಂದು ಶಾಲೆಯಲಿ ಇತ್ತು ಪುಟ್ಟ ಸಮಾರಂಭ
ನಂತರ ಮಾಡಿದೆವು ಗಿಡ ನೆಡಲು ಆರಂಭ
 
ಪುಟ್ಟ ಸಲಾಖೆಯ ಹೊತ್ತು ತಂದೆವು ನಾವು
ಕೆತ್ತಿ ಆವರಣದಲಿ ಚಿಕ್ಕ ಪಾತಿಯ ಮಾಡಿದೆವು
 
ಬಗೆ ಬಗೆಯ ಸಸಿ ನೆಟ್ಟು ಅದಕ್ಕೆ ನೀರೆರೆದೆವು
ಆ ಸಸಿಗಳಿಗೆ ಗೊಬ್ಬರ ನೀಡಿ ಪೋಷಿಸಿದೆವು
 
ಪುಟ್ಟ ಸಸಿಗಳ ತೋಟವಾಯ್ತು ಶಾಲೆ ಅಂಗಳ
ಮುಂದಿನ ಪೀಳಿಗೆಗೆ  ಹಾಡುವುದಿದು ಮಂಗಳ
 
ಪ್ರತಿ ವರ್ಷ ಆಚರಿಸುವೆವು ವನ ಮಹೋತ್ಸವ
ಹಸಿರು ಹೆಚ್ಚಿಸಲು ಕೊಡುವೆವು ಪ್ರೋತ್ಸಾಹ   
 
- ತೇಜಸ್ವಿ.ಎ.ಸಿ

ದಿಗಂತ

ಮುನ್ನುಡಿ: ಒಳಮನಸ್ಸಿಗೆ .....ಸೃಷ್ಟಿಕರ್ತನ ಕೂಗು ಕೇಳಿಸಿದಾಗ........ಅದನ್ನು ಅರಸಿ ಹೋಗಬೇಕೋ .....ಇಲ್ಲವೋ.....ಅಂತ ತಿಳಿಯದಿದ್ದಾಗ........


ನನ್ನನು ನಾನು....ಅವನ ಹತ್ತಿರ ಹೋಗುವಷ್ಟು ಶುಭ್ರವಾಗಿ ಇಟ್ಟುಕೊಂಡಿದ್ದೇನ.....?..ಎಂಬುವ ಭಾವನೆ ಮನಸ್ಸಿನಲ್ಲಿ ಮೂಡಿದಾಗ........


ಹರಿದ ಸಾಲುಗಳಿವು......


 


 


ದೂರ ದಿಗಂತದೊಳು ಯಾರೋ ಎನ್ನ ಕೂಗುತಿಹರಾ........ತಿಳಿಯದು


ಒಳಗಡಲ ವೀಣೆಯನ್ನು ಮೀಟಿ ಅಲೆಗಳೆಬ್ಬಿಸುತಿಹರಾ.....ಕೇಳದು


ಕಳಚು ಈ ದೇಹಜಾಲವ, ಈಜು ನನ್ನೆಡೆಗೆ ಎಂಬುತಿಹರು ಯಾರದು......


 


ಈ ಮಲಿನ ಹೆಗ್ಗಡಲಾಚೆ ಈಜಲು ಸಾಧ್ಯವೇ ನನಗೆ.........ತಿಳಿಯದು


ಇದರ ದಾಟಿದ ಮೇಲೆಯೂ ನಾನು ಇರುವೆನೆ ಶುಭ್ರವು.......ಕಾಣದು


ನಿನ್ನೆಡೆ ಈಜಲು ಎನ್ನನು ಈಗ ದೂಡುತಿಹರು....ಯಾರದು......


 


ನಿನ್ನೋಳಗಿಂದ ಬಂದಿಹ ನನಗೆ


ನಿನ್ನನು ಸೇರಲು ಏಕೀ ಕಾತರ.......


ಎಲ್ಲರೂ ನೀನು ನಮ್ಮೋಳಗೆ ಎಂಬರು