ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆಯೇ?!

ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆಯೇ?!

ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆಯೇ?!


          ಅಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತ ಗೊಳಿಸುವ ಸಾರ್ವಜನಿಕ ಪ್ರಯತ್ನ ಹೊಸವರ್ಷದಲ್ಲಾದರೂ ಆರಂಭವಾಗಲೆಂದು ಗಣ್ಯಾತಿಗಣ್ಯರು ವಿವಿಧ ಮಾಧ್ಯಮಗಳಲ್ಲಿ ಹಾಡಿ ಹರೆಸಿದರು ಕೆಲವರ ಮಿಡಿತದಲ್ಲೇನೋ ಪ್ರಾಂಜಲತೆ ಇದ್ದಿರಬಹುದು ಆದರೆ ಇಂಥಾ ಮಿಡಿತಗಳು ಮನದ ಕದ ತಟ್ಟಿದಾಗ ಪುಟಿದೆದ್ದು ಅಪ್ಪಿಕೊಳ್ಳುವ ಸಹೃದಯತೆ ಓದುಗರಲ್ಲಿ, ವೀಕ್ಷರಲ್ಲಿ ಇನ್ನೂ ಉಳಿದಿದೆಯೇ?! ಇದ್ದೀತೆಂಬ ಹೇರಾಸೆ ಇಟ್ಟುಕೊಂಡರೂ ಅದರ ಪರಿಣಮಕಾರಿತ್ವ ಅನುಮಾನಾಸ್ಪದವೇ!


          ಆ ಅಸಾಧ್ಯ ಜವಾಬ್ದಾರಿಗೆ ಮಹಾಜನತೆಯನ್ನು ಹೊಣೆಮಾಡುವ “ಬುದ್ದಿವಂತರ ಬೇಜವಾಬ್ದಾರಿ”ಯನ್ನೇನೋ ಹೇರಳವಗಿ ಕಾಣುತ್ತೇವೆ. ಇದು ಸೈದ್ಧಾಂತಿಕವಾಗಿ ಸರಿಯೂ ಹೌದು. ಆದರೆ ವ್ಯವಹಾರಿಕವಾಗಿ ಅಸಾಧ್ಯ. ನಮ್ಮ ಇಂದಿನ ರಾಜಕಾರಣ, ಪ್ರಜಾಪ್ರತಿನಿಧಿ ಕಾಯ್ದೆ ಕಲಮುಗಳನ್ನು ಬರೆದ ಹಿಂದಿನ ತಲೆಮಾರಿನ ವಿದ್ಯಾವಂತರು ಊಹಿಸಿಯೂ ಇರಲಾರದಷ್ಟು, ನೈತಿಕವಾಗಿ ಜಾರಿಬಿದ್ದಿದೆ! ಚಾಪೆ ಕೆಳಗೆ ತೂರುವ ಬೆರಳೆಣಿಕೆಯ ಈ ಕಳ್ಳ-ಖದೀಮ ರಾಜಕಾರಣಿ ಗುಂಪುಗಳು, ಕಾಯ್ದೆಯ ಸಡಿಲ ಸೂತ್ರಗಳ ಪೂರ್ಣ ದುರುಪಯೋಗ ಪಡೆದುಕೊಂಡು ಕಟ್ಟಿಕೊಳ್ಳುವ ಸಂಸತ್ತೂ, ಶಾಸನಸಭೆಗಳೂ, ತಮ್ಮ ಗೌರವಾನ್ವಿತ ಎಂಬ ವಿಶೇಷಣಕ್ಕೇ ಚ್ಯುತಿ ತಂದುಕೊಂಡಿವೆ; ಅವು ತಮ್ಮ ತಮ್ಮದೇ ಸೇಡಿನ ಉದ್ದೇಶಕ್ಕಾಗಿ ಕಟ್ಟಿಕೊಳ್ಳುವ ಸಂವಿಧಾನಾತೀತವಾದ ಅಗೋಚರ ಶಕ್ತಿಗಳೇ ಅಳುವವರನ್ನು ನಿಯಂತ್ರಿಸುತ್ತಿದ್ದು, ಸಮಾಜದಲ್ಲಿ ಗೌರವಸ್ಥರನ್ನು ಬಾಳಲೀಸುವುದೇ ಇಲ್ಲ!


ಈ ಬಗ್ಗೆ ನ್ಯಾಯವೇತ್ತರೂ, ಸಂವಿಧಾಮ ಪಟುಗಳೂ, ಸಹೃದಯರೂ ಒಗ್ಗೂಡಿ ಗಂಭೀರ ಚಿಂತನೆ ನಡೆಸಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜ ಬಹಮತ ಅನಿವಾರ‍್ಯವಾಗುಂತೆ ಪ್ರಜಾಪ್ರತಿನಿಧಿ ಕಾಯ್ದೆಗೆ ವಿವೇಕಶಲೀ ತಿದ್ದುಪಡಿ ತರಲು ಅವರು ಪ್ರಭಾವ ಬೀರಬೇಕಾಗಿದೆ!

Rating
No votes yet

Comments