ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏನೆಂದು ವರ್ಣಿಸಲಿ ನಾ ನಿನ್ನ ಅಂದವನು


ಕಂಡೆ ನಾ ನಿನ್ನ ಮುಸ್ಸಂಜೆಯಲಿ..


ಜಿನುಗುಡುತ್ತಿದ್ದ  ಸೋನೆ ಮಳೆಯಲಿ.. 


ಏನೆಂದು ವರ್ಣಿಸಲಿ ನಾ ನಿನ್ನ ಅಂದವನು??


ಹೇಳಲು ಸಾಲದೇ ಹುಡುಕುತ್ತಿರುವೆನು ಪದಗಳನ್ನು...


ನಿನ್ನ ಮೇಲೆ ಕುಳಿತಿರುವ ಮುತ್ತಿನಂಥ ನೀರ ಹನಿಗಳನು...


ಕಂಡು ನಾನಾದೆ ಮೂಕ ವಿಸ್ಮಿತನು...


ಕವಿಗಳಿಗೆ ಬರೆಯಲು ಆದೆ ನೀನು ಸ್ಪೂರ್ತಿ...


ಹೂವುಗಳಿಗೆ ರಾಣಿ ಎಂಬುದೇ ನಿನ್ನಯ ಕೀರ್ತಿ


ಸುಂದರವಾಗಿದ್ದರೂ....ಆಗಲಿಲ್ಲ ನೀನೇಕೆ ಹುಡುಗಿ??


"ಓ ಗುಲಾಬಿಯೇ" ನಿನ್ನ ಕಂಡು ಹುಡುಗಿಯರೂ 


ಮುದುಡುವರು ಅಸೂಯೆಯಲ್ಲಿ ಕೊರಗಿ ಕೊರಗಿ....

ದುಬಾರಿಯಲ್ಲಿ ದೈವಪೂಜೆ!

 


ರಾಜ್ಯ ಮುಜಾರಾಯಿ ಇಲಾಖೆಯ ನಂ. ಒನ್,  ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿನ ಸೇವಾದರ ವರ್ಷದಲ್ಲಿ ದುಪ್ಪಟ್ಟು, ದಶಕದಲ್ಲಿ ಎಂಟು ಪಟ್ಟು ಏರಿರುವ ಬಗ್ಗೆ “ವಿಜಯ ಕರ್ನಾಟಕ”, ಮುಖಪುಟ ವರದಿ ಪ್ರಕಟಿಸಿದೆ. ಈ ಕಳಕಳಿ, ಸಾಂಪ್ರದಾಯಕ ಆಸ್ತಿಕರಿಗೆ ಸಹಜ, ಸಮಂಜಸ ಎಂದೂ ಅನ್ನಿಸಬಹುದು. ಆದರೆ ಪದಾರ್ಥಗಳ ಧಾರಣೆವಾಸಿ ಸಂಕಷ್ಟ ಸಹ ಅಷ್ಟೇ ಸಹಜ-ಸಮಂಜಸವಾಗಿ ಊರ್ಧ್ವಮುಖಿಯಾಗಿದ್ದು ಅಡಳಿತ ಮಂಡಲಿ ಅದನ್ನು ಸರಿದೂಗಿಸಬೇಕಲ್ಲಾ?! ಬಾಹ್ಯ ಕ್ರೀಯನ್ನೇ ಅಧ್ಯಾತ್ಮವಾಗಿ ಬೊಬ್ಬಿರಿವ ಎಲ್ಲ ಧರ್ಮತಾಣಗಳ ತಾಕಲಾಟವೂ ಇದೇ.

ನೀ ಏಕೆ ಹೀಗೆ?

ನೀ ಏಕೆ ಹೀಗೆ?
ಬಾ ಎಂದಾಗ
ಕೈ ಮುಗಿದರೂ ಬಾರದ
ಬೇಡ ಎಂದಾಗ
ಕೈ ಹಿಡಿದರೂ ನಿಲ್ಲದ
ಓ ನನ್ನ ಕವಿತೆ
ನೀ ಏಕೆ ಹೀಗೆ?

ಅದುಮಿಟ್ಟ ಭಾವಗಳು
ಹುಚ್ಚು ಹುಚ್ಚಾಗೆದ್ದು
ಬರಬರನೆ ನುಸುಳಿ
ಶಿರದಿಂದ ಕರಕೆ
ಚಿತ್ತಾರ ಮೂಡಿಸುವ
ಓ ನನ್ನ ಕವಿತೆ
ನೀ ಏಕೆ ಹೀಗೆ?

ಬೇಸರದಿ ಕುಳಿತಿರಲು
ಬಾರೆ ನೀನು
ಸಂತಸದಿ ಕುಣಿಯುತಿರೆ
ಬಾರೆ ನೀನು
ಸಮಚಿತ್ತದಿಂದಿರಲು
ಹರಿದರಿದು ಬರುವ
ನೀ ಏಕೆ ಹೀಗೆ?       

ಸೂರ್ಯಾಸ್ತಮಾನದ ಬೆಡಗು

ಉರಿಯುಗುಳಿ ಬಸವಳಿದ ಅರುಣನು
ಉರುಟು ಕೆ೦ಪಿನ ಚೆ೦ಡಿನ೦ದದಿ
ತಿರೆಯನಾಲ೦ಗಿಸಿಹನದೊ ಪಶ್ಚಿಮದಿಗ೦ತದಲಿ
ತಿರುತಿರುಗಿ ಹಾರುತಿರೆ ಜಲಧಿಯ
ತೆರೆಗಳಪ್ಪಳಿಸುತಲಿ ದಡವನು
ಉರ‍ವಣಿಯಲದೊ ಸ್ವಾಗತಿಸುತಿವೆ ಸನಿಹಕೈದಿದನ



ಹಲವ ಹೆಗಲಲಿ ಹೊತ್ತು ರೈತರು
ನಿಲಯಕೈತರುತಿಹರು ಚಿಣ್ಣರು
ಕಲಕಲಸ್ವನದೊಡನೆ ಆಟವನಾಡಿ ಅಲಸಿಹರು
ಚಿಲಿಪಿಲಿಯಗುಟ್ಟುತಿಹ ಹಕ್ಕಿಗ
ಳಲೆಯುತಲಿ ಸೇರುತಿರೆ ನೆಲೆ ತ೦
ಬೆಲರು ಬೀಸುತ ಬೀಳುಗೊಡುತಿದೆ ಅಸ್ತಮಿಸುತಿಹನ



ಇ೦ಬನಿತ್ತಿಹ ನೆಲೆಯ ಬೀಳ್ಕೊಡು
ತ೦ಬುದಗಳೇರುತಲಿ ಸೊಬಗಿನೊ
ಳ೦ಬುಜದ ಬ೦ಧುವಿನ ಸನಿಹದಿ ಬೀಸೆ ಚಾಮರವ
ಅ೦ಬಿಗರು ದಡಕೈದೆ ನಾವೆಯೊ
ಳ೦ಬುಧಿಯು ರ೦ಗೇರಿ ಉಕ್ಕಿರೆ
ಅ೦ಬುರುಹದಳ ಸೊರಗಿ ಸುಕ್ಕಿದೆ ವಿರಹದಗ್ನಿಯಲಿ 


 


ರಣದಲಳಿಯುವ ಸಮಯ ರಕುತದ
ಕಣಗಳೆಲ್ಲವು ಹರಿವ ತೆರದಲಿ
ಎಣಿಕೆಗೆಟಕದ ತೆರದಿ ಬಾ೦ದಳ ಕೆ೦ಪ ಸೂಸಿಹುದು
ಅಣಿಯ ಕಟ್ಟುತಲದೊ ತಮಾಸುರ
ಎಣಿಸುತಿಹ ರ೦ಜಿಸುವ ಕ್ಷಣಗಳ
ದಣಿದು ಬಳಲಿಹ ಇನನು ನೇಪಥ್ಯಕ್ಕೆ ಜಾರುತಿರೆ 

ಇರಲೆಬೇಕಾ ಇಲ್ಲಿಯೇ....?

ಮುನ್ನುಡಿ: ಇಳಿವಯಸ್ಸಿನಲ್ಲಿ ಕೆಲವೇ ದಿನಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದು ಕೊಂಡಿರುವವನು, ಮೌನವೇ ನನ್ನ ಆಸರೆ ಅಂತ ಕೂತಿರುವಾಗ...ಹಾಗೆ ಹಳೆಯ ಒಂದು ಪುಸ್ತಕವನ್ನು ತಿರುವಿ ಹಾಕುತ್ತಿರುವಾಗ ಅದರಲ್ಲಿ ಒಣಗಿದ ಹೂವೊಂದು ಸಿಕ್ಕಿತು...ಅದನ್ನು ಆಕೆ ಎಷ್ಟೋ ವರ್ಷಗಳ ಹಿಂದೆ ಅವನಿಗೆ ಕೊಟ್ಟಿದ್ದಳು....ಆ ಹೂವಿನ ಸುಗಂಧದಲ್ಲಿ ಅವನು ಆಕೆಯ ನೆನಪುಗಳನ್ನು ಹುಡುಕುತ್ತ ಇರುವಾಗ.....


  


ಮೌನವೇ  ಬಾ ಕೂರು ಇಲ್ಲಿ


ಮಾತಿಗೆನಿದೆ ಅವಸರ....


ಅಯ್ಯೋ...ತಡೆಯೋ...ಕಣ್ಣ ಬಿಂದು


ಜಾರಬೇಡ ಸರಸರ.....


ಮೌನವೇ ನೀ ಕೇಳು ಇನ್ನು


ನೀನೆ ನನ್ನ ಆಸರೆ....


ನನ್ನ ಆಕೆ ಬಿಟ್ಟು ಹೊರಟು


ಕಾಡುತಿಹಳು ಅಪ್ಸರೆ....


 


ಬಾಡಿಹೋದ ಸುಮವ ಹಿಡಿದು


ಘಮವ ಹೀರುವ ಕಾತರ......


ಪುಟದಿ ಹೂತ ಘಮವು ಇಂದು


ತೋರಿತು ನೆನಪಿನ ಸಾಗರ......


 


ನಿನ್ನ ಪುಣ್ಯ ನಿನ್ನನಿಂದು


ಕರೆದು ಹೋಗಿದೆ ಅಲ್ಲಿಗೆ....

ಕರ್ಚು (ಹೊಸಗನ್ನಡದಲ್ಲಿ ಕಚ್ಚು)

ಕರ್ಚು=ತೊಳೆ.

 

ಉದಾಹರಣೆ: ತನ್ನಮ್ಮನ ಪಾದಂಗಳಂ ಕರ್ಚಿದಂ= ತನ್ನ ತಂದೆಯ ಪಾದಗಳನ್ನು ತೊಳೆದನು.

ಕಲಗರ್ಚು/ಕಲಗಚ್ಚು= ಅಕ್ಕಿಯನ್ನು ನೀರಿನಲ್ಲಿ ಕಲಕಿ(ಕಲಸಿ) ಕರ್ಚು= ತೊಳೆ. ಅಥವಾ ಅಕ್ಕಿಯನ್ನು ತೊಳೆದ ನೀರು.

 

ಜ್ಞಾತಿ ಶಬ್ದ ಕೊಡವ ಭಾಷೆಯಲ್ಲಿ ಕತ್ತ್=ತೊಳೆ.

ಕನಸಿನ ಹುಡುಗಿ

ಎಂದೋ ಕಂಡ ನಿನ್ನ ಚೆಲುವು ನನ್ನ ಮನವೆಲ್ಲ ತುಂಬಿದೆನಿನ್ನ
ಮಧುರವಾದ ಪ್ರೀತಿಗಾಗಿ ನನ್ನ ಮನ ತುಡಿಯುತಿದೆ
ಕುಂತರೂ ನೀನೆ ನಿಂತರೂ ನೀನೆ ಎದುರಲ್ಲಿ ಕಾಣುತ್ತಿರುವೆ
ಎಲ್ಲೆಲ್ಲಿ ನೋಡಿದರೂ ನಿನ್ನ ಪ್ರತಿಬಿಂಬವ ಕಾಣುತ್ತಿರುವೆ..
 
ಕ್ಷಣ ಮಾತ್ರದಲ್ಲಿ ಕಂಡು ಮರೆಯಾಗಿಬಿಟ್ಟೆ ನೀನು..
ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯಾಗಿರುವೆ ನೀನು..
ಎಲ್ಲಿರುವೆ ಚೆಲುವೆ ನೀ ನಿನ್ನ ಹುಡುಕುತಿಹೆನು ನಾನು
ನಿನ್ನ ಕಂಡಾಗಲಿಂದ ನನ್ನ ಬಳಿಯಲ್ಲಿಲ್ಲ ನನ್ನ ಮನವು
 
ನನ್ನ ಹೃದಯದರಮನೆಯ ಅನಭಿಷಿಕ್ತ ಪಟ್ಟದರಸಿ ನೀನು..
ಹೃದಯದ ಹೂ ಪಲ್ಲಕ್ಕಿಯಲ್ಲಿ ಮೆರವಣಿಗೆ ಕರೆದೊಯ್ಯುವೆ ನಿನ್ನನು..
ನಿನ್ನ ಬರುವಿಕೆಯ ಎದಿರು ನೋಡುತ್ತಿರುವೆ ಚೆಲುವೆ...