ಇರಲೆಬೇಕಾ ಇಲ್ಲಿಯೇ....?
ಮುನ್ನುಡಿ: ಇಳಿವಯಸ್ಸಿನಲ್ಲಿ ಕೆಲವೇ ದಿನಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದು ಕೊಂಡಿರುವವನು, ಮೌನವೇ ನನ್ನ ಆಸರೆ ಅಂತ ಕೂತಿರುವಾಗ...ಹಾಗೆ ಹಳೆಯ ಒಂದು ಪುಸ್ತಕವನ್ನು ತಿರುವಿ ಹಾಕುತ್ತಿರುವಾಗ ಅದರಲ್ಲಿ ಒಣಗಿದ ಹೂವೊಂದು ಸಿಕ್ಕಿತು...ಅದನ್ನು ಆಕೆ ಎಷ್ಟೋ ವರ್ಷಗಳ ಹಿಂದೆ ಅವನಿಗೆ ಕೊಟ್ಟಿದ್ದಳು....ಆ ಹೂವಿನ ಸುಗಂಧದಲ್ಲಿ ಅವನು ಆಕೆಯ ನೆನಪುಗಳನ್ನು ಹುಡುಕುತ್ತ ಇರುವಾಗ.....
ಮೌನವೇ ಬಾ ಕೂರು ಇಲ್ಲಿ
ಮಾತಿಗೆನಿದೆ ಅವಸರ....
ಅಯ್ಯೋ...ತಡೆಯೋ...ಕಣ್ಣ ಬಿಂದು
ಜಾರಬೇಡ ಸರಸರ.....
ಮೌನವೇ ನೀ ಕೇಳು ಇನ್ನು
ನೀನೆ ನನ್ನ ಆಸರೆ....
ನನ್ನ ಆಕೆ ಬಿಟ್ಟು ಹೊರಟು
ಕಾಡುತಿಹಳು ಅಪ್ಸರೆ....
ಬಾಡಿಹೋದ ಸುಮವ ಹಿಡಿದು
ಘಮವ ಹೀರುವ ಕಾತರ......
ಪುಟದಿ ಹೂತ ಘಮವು ಇಂದು
ತೋರಿತು ನೆನಪಿನ ಸಾಗರ......
ನಿನ್ನ ಪುಣ್ಯ ನಿನ್ನನಿಂದು
ಕರೆದು ಹೋಗಿದೆ ಅಲ್ಲಿಗೆ....
ಪಾಪಿ ನಾನು ಇನ್ನು ಮುಂದೆ
ಇರಲೆಬೇಕಾ ಇಲ್ಲಿಯೇ....?
ಸ್ವರ್ಗದಲ್ಲಿ ಕುಂದು ಕೊರತೆ
ಇರುವುದೆಂದು, ನೀ ಹೇಳಲು.....
ನಾನು ಅಲ್ಲಿಗೆ ಬರುವೆ ಅವರ
ಏಕೆ ಎಂದು ಕೇಳಲು.....
ನನ್ನ ನಿನ್ನ ಜೋಡಿ ಮಾಡಿದ
ದೇವರೆಲ್ಲಿಗೆ ಹೋದನು....
ನನ್ನು ಅವನು ಕೂಗಿ ಕರೆದರೆ
ಇಲ್ಲ ಎಂದು ಹೇಳೆನು.....