ಸೂರ್ಯಾಸ್ತಮಾನದ ಬೆಡಗು
ಉರಿಯುಗುಳಿ ಬಸವಳಿದ ಅರುಣನು
ಉರುಟು ಕೆ೦ಪಿನ ಚೆ೦ಡಿನ೦ದದಿ
ತಿರೆಯನಾಲ೦ಗಿಸಿಹನದೊ ಪಶ್ಚಿಮದಿಗ೦ತದಲಿ
ತಿರುತಿರುಗಿ ಹಾರುತಿರೆ ಜಲಧಿಯ
ತೆರೆಗಳಪ್ಪಳಿಸುತಲಿ ದಡವನು
ಉರವಣಿಯಲದೊ ಸ್ವಾಗತಿಸುತಿವೆ ಸನಿಹಕೈದಿದನ
ಹಲವ ಹೆಗಲಲಿ ಹೊತ್ತು ರೈತರು
ನಿಲಯಕೈತರುತಿಹರು ಚಿಣ್ಣರು
ಕಲಕಲಸ್ವನದೊಡನೆ ಆಟವನಾಡಿ ಅಲಸಿಹರು
ಚಿಲಿಪಿಲಿಯಗುಟ್ಟುತಿಹ ಹಕ್ಕಿಗ
ಳಲೆಯುತಲಿ ಸೇರುತಿರೆ ನೆಲೆ ತ೦
ಬೆಲರು ಬೀಸುತ ಬೀಳುಗೊಡುತಿದೆ ಅಸ್ತಮಿಸುತಿಹನ
ಇ೦ಬನಿತ್ತಿಹ ನೆಲೆಯ ಬೀಳ್ಕೊಡು
ತ೦ಬುದಗಳೇರುತಲಿ ಸೊಬಗಿನೊ
ಳ೦ಬುಜದ ಬ೦ಧುವಿನ ಸನಿಹದಿ ಬೀಸೆ ಚಾಮರವ
ಅ೦ಬಿಗರು ದಡಕೈದೆ ನಾವೆಯೊ
ಳ೦ಬುಧಿಯು ರ೦ಗೇರಿ ಉಕ್ಕಿರೆ
ಅ೦ಬುರುಹದಳ ಸೊರಗಿ ಸುಕ್ಕಿದೆ ವಿರಹದಗ್ನಿಯಲಿ
ರಣದಲಳಿಯುವ ಸಮಯ ರಕುತದ
ಕಣಗಳೆಲ್ಲವು ಹರಿವ ತೆರದಲಿ
ಎಣಿಕೆಗೆಟಕದ ತೆರದಿ ಬಾ೦ದಳ ಕೆ೦ಪ ಸೂಸಿಹುದು
ಅಣಿಯ ಕಟ್ಟುತಲದೊ ತಮಾಸುರ
ಎಣಿಸುತಿಹ ರ೦ಜಿಸುವ ಕ್ಷಣಗಳ
ದಣಿದು ಬಳಲಿಹ ಇನನು ನೇಪಥ್ಯಕ್ಕೆ ಜಾರುತಿರೆ
ಕಿರಣ ಶರಗಳ ಅಮಿತ ಸ೦ಚಯ
ಶರಧಿತಳದಿ೦ದೆತ್ತಿ ಧರಿಸಲು
ತೆರಳುತಿಹನೋ ದಿನಪ ಮರಳಲು ಎ೦ದು ಕಲ್ಪಿಸುತ
ಧರಧುರದ ಕಾ೦ತಿಯನು ಉಗೆ ಸ೦
ಚರಿಸುತಿಹ ರವಿಯನ್ನು ಈಕ್ಷಿಸಿ
ಕರಮುಗಿವೆನೀ ಲೋಕದೊಡೆಯನು ರಚಿಸಿದದ್ಭುತಕೆ
Comments
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by kamath_kumble
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by Gonchalu
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by gopaljsr
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by gopinatha
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by sada samartha
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by raghumuliya
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by sada samartha
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by raghumuliya
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by Jayanth Ramachar
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by Tejaswi_ac
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by k.mahesh
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by k.mahesh
ಉ: ಸೂರ್ಯಾಸ್ತಮಾನದ ಬೆಡಗು
ಉ: ಸೂರ್ಯಾಸ್ತಮಾನದ ಬೆಡಗು
In reply to ಉ: ಸೂರ್ಯಾಸ್ತಮಾನದ ಬೆಡಗು by srimiyar
ಉ: ಸೂರ್ಯಾಸ್ತಮಾನದ ಬೆಡಗು