ನೀ ಏಕೆ ಹೀಗೆ?

ನೀ ಏಕೆ ಹೀಗೆ?

ಕವನ

ನೀ ಏಕೆ ಹೀಗೆ?
ಬಾ ಎಂದಾಗ
ಕೈ ಮುಗಿದರೂ ಬಾರದ
ಬೇಡ ಎಂದಾಗ
ಕೈ ಹಿಡಿದರೂ ನಿಲ್ಲದ
ಓ ನನ್ನ ಕವಿತೆ
ನೀ ಏಕೆ ಹೀಗೆ?

ಅದುಮಿಟ್ಟ ಭಾವಗಳು
ಹುಚ್ಚು ಹುಚ್ಚಾಗೆದ್ದು
ಬರಬರನೆ ನುಸುಳಿ
ಶಿರದಿಂದ ಕರಕೆ
ಚಿತ್ತಾರ ಮೂಡಿಸುವ
ಓ ನನ್ನ ಕವಿತೆ
ನೀ ಏಕೆ ಹೀಗೆ?

ಬೇಸರದಿ ಕುಳಿತಿರಲು
ಬಾರೆ ನೀನು
ಸಂತಸದಿ ಕುಣಿಯುತಿರೆ
ಬಾರೆ ನೀನು
ಸಮಚಿತ್ತದಿಂದಿರಲು
ಹರಿದರಿದು ಬರುವ
ನೀ ಏಕೆ ಹೀಗೆ?       

Comments