ಬುರುಡೆ ಇಲ್ಲದ ವೀಣೆ
ಮನೆತನ ಒಳ್ಳೇದಿದ್ರೆ ಸಾಲ್ದು
ನಡತೆ ಚೆನ್ನಾಗಿದ್ರೆ ಸಾಲ್ದು
ಮನ್ನಣೆ ಸಿಗ್ಬೇಕಿದ್ರೆ ನಿನಗೆ
ಒಳ್ಳೇವ್ರೊಡನಾಟ ಬೇಕಲ್ಲ ;
ಒಳ್ಳೇ ಬಿದ್ರಲ್ ಮಾಡಿದ್ರೂನೂ
ಚೆನ್ನಾಗ್ ತಂತಿ ಕಟ್ಟಿದ್ರೂನೂ
ಸೋರೆಯ ಬುರುಡೆ ಇಲ್ಲದೆ ವೀಣೆ
ಇಂಪಾಗ್ ಸರಿಗಮ ನುಡಿಯೋಲ್ಲ!
ಸಂಸ್ಕೃತ ಮೂಲ:
ವಂಶಭವೋ ಗುಣವಾನಪಿ
ಸಂಗವಿಶೇಷೇಣ ಪೂಜ್ಯತೇ ಪುರುಷಃ |
ನ ಹಿ ತುಂಬೀಫಲವಿಕಲೋ
ವೀಣಾದಂಡಃ ಪ್ರಯಾತಿ ಮಹಿಮಾನಮ್ ||
-ಹಂಸಾನಂದಿ
ಚಿತ್ರ ಕೃಪೆ: http://www.indianetzone.com/27/rudra_veena_been__indian_musical_instrument.htm
ಕೊಸರು : ಹಿಂದೆ ವೀಣೆಯ ದಂಡಿಯನ್ನು ( ಉದ್ದನೆಯ, ನುಡಿಸುವ ಮೆಟ್ಟಿಲುಗಳಿರುವ ಭಾಗ) ವನ್ನು ಬಿದಿರಿನಿಂದ ಮಾಡುವ ರೂಢಿಯಿತ್ತು. ಈಗ ಕರ್ನಾಟಕ ಸಂಗೀತವನ್ನು ನುಡಿಸುವ ಸರಸ್ವತೀ ವೀಣೆಯ ದಂಡಿಯನ್ನು ಸಾಧಾರಣವಾಗಿ ಹಲಸಿನ ಮರದಲ್ಲಿ ಮಾಡಿದ್ದರೂ, ಹಿಂದೂಸ್ತಾನಿ ಸಂಗೀತವನ್ನು ನುಡಿಸುವ ರುದ್ರವೀಣೆಯಲ್ಲಿ ಬಿದುರಿನಿಂದ ಮಾಡಿದ ದಂಡಿಯೇ ಇನ್ನೂ ರೂಢಿಯಲ್ಲಿದೆ.
ಕೊನೆಯ ಕೊಸರು: ಇದೇ ರೀತಿ, ಅನುರಣನವನ್ನು (resonance) ಉಂಟುಮಾಡುವ ಬುರುಡೆಗೆ ಹಿಂದಿನಿಂದ ಸೋರೆಯ ಬುರುಡೆಯನ್ನು ಬಳಸುವ ಪದ್ಧತಿ ಬಂದಿದೆ. ಸರಸ್ವತೀ ವೀಣೆಯಲ್ಲಿ ಹಲಸಿನ ಮರದ ಬುರುಡೆಯಿರುವುದೂ ಕಾಣಬರುತ್ತದೆ.
ಕೊಟ್ಟ ಕೊನೆಯ ಕೊಸರು: ಸಂಸ್ಕೃತ ಮೂಲದಲ್ಲಿದ್ದ ಶ್ಲೇಷವನ್ನು ಕನ್ನಡದ ನನ್ನ ಅನುವಾದದಲ್ಲಿ ತರಲಾರದೇ ಹೋದೆ. ಸಂಸ್ಕೃತದಲ್ಲಿ ವಂಶ ಎಂದರೆ ಬಿದುರು ಎಂದು, ಮತ್ತು ಗುಣ ಎಂದರೆ ತಂತಿ ಎಂದೂ ಅರ್ಥವಿರುವುದರಿಂದ, ವಂಶಭವ (ಬಿದುರಿನಿಂದ ಮಾಡಿದ) ಮತ್ತು ಗುಣವಾನ್ (ತಂತಿಗಳನ್ನು ಹೊಂದಿದ) ಎನ್ನುವ ಎರಡೂ ಅರ್ಥವನ್ನು ಮೂಲದ ಮೊದಲ ಸಾಲು ಹೊಮ್ಮಿಸುತ್ತದೆ.
Comments
ಉ: ಬುರುಡೆ ಇಲ್ಲದ ವೀಣೆ
In reply to ಉ: ಬುರುಡೆ ಇಲ್ಲದ ವೀಣೆ by kamalap09
ಉ: ಬುರುಡೆ ಇಲ್ಲದ ವೀಣೆ
ಉ: ಬುರುಡೆ ಇಲ್ಲದ ವೀಣೆ
In reply to ಉ: ಬುರುಡೆ ಇಲ್ಲದ ವೀಣೆ by ananthesha nempu
ಉ: ಬುರುಡೆ ಇಲ್ಲದ ವೀಣೆ
ಉ: ಬುರುಡೆ ಇಲ್ಲದ ವೀಣೆ
In reply to ಉ: ಬುರುಡೆ ಇಲ್ಲದ ವೀಣೆ by partha1059
ಉ: ಬುರುಡೆ ಇಲ್ಲದ ವೀಣೆ