WISH YOU HAPPY NEW YEAR(ಹಾಸ್ಯ)
ಜನವರಿ ಒಂದನೇ ತಾರೀಖು, ಬೇಗ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ರೆಡಿಯಾದೆ ನಮ್ಮನೆ ಕೆಲಸದವಳು ಮಾಯಮ್ಮ, "ಅಣ್ಣಾ ಆಯಿತ್ರಾ, ರಾತ್ರಿ ಸೇರಿದ್ದು" ಅಂದಳು. ಛೆ ಇದೇನು ಹೀಗೆ ಗೇಟಲ್ಲಿ ನಿಂತು ಕೇಳ್ತಾಳೆ ಅಂದುಕೊಂಡೆ. ಆದ್ರೂ ಸಂಸಾರ ಗುಟ್ಟು ವ್ಯಾಧಿ ರಟ್ಟು ಆಂತಾರೆ. ನಮ್ಮ ಸಂಸಾರ ಆನಂದ ಸಾಗರ ಅಂತಾ ಇವಳಿಗೆ ಏನಾದ್ರೂ ಕನಸಾ?! ಆಂದುಕೊಂಡೆ. ಅಷ್ಟರಲ್ಲಿ, ನನ್ನ ಸಾಗರದಂತಾ (ವಿಶಾಲವಾದ ದೇಹ, ಮನಸ್ಸಲ್ಲ) ಮಡದಿ ಬಂದು "ಮಾಯಮ್ಮ ಮೊದಲು ಮನೆ ಎಲ್ಲಾ ಒರೆಸು, ರಾತ್ರಿ ತುಂಬಾ ಗಲೀಜಾಗಿದೆ" ಅಂದಳು. ಆಗ ಅರ್ಥವಾಯಿತು. ಇದು ಆನಂದ ಸಾಗರದ ವಿಷಯವಲ್ಲ, ರಾತ್ರಿ ಸ್ನೇಹಿತರೆಲ್ಲಾ ಸೇರಿ, "ಸುಖ ಸಾಗರ" ದಿಂದ ಪಾರ್ಸೆಲ್ ತಂದು ತಿಂದದ್ದು ಅಂತಾ ಸರಿ ಅಷ್ಟರಲ್ಲಿ ಫೋನ್ ಮೇಲೆ ಫೋನು, ಕಾಲ್ ಮೇಲೆ ಕಾಲು. "ಯಾಪಿ ನು ಎಯರ್" ಅಂತು ಒಬ್ಬಳು "ಸಾ ಹೊಸ ವರ್ಸ ಸುಬ್ಬಾಸ್ಯ್" ಅಂತ ಒಬ್ಬ ಹೀಗೆ ಶುಭಾಶಯಗಳ ವಿನಿಮಯ ಆಗಿ ಅಫೀಸಿಗೆ ಬಂದೆ. ನನ್ನ ಅಫೀಸಿನ ಅಸ್ಠಾನಕ್ಕೆ ಹೋಗಿ ಕೊತೆ. ಅಷ್ಟರಲ್ಲಿ ನಮ್ಮ ಸ್ವೀಪರ್ ಪುಟ್ಟಮ್ಮ ಬಂದ್ಲು. "ಸಾ ಗೂ ಮರ್ ನಿಂಗ್, ಹ್ಯಪ್ ಮ್ಯ್ ಯಾರ್ ನಿಮಗೆ"ಅಂದಳು ನನಗೆ ಹ್ಯಾಪ್ ಮೂರೆ ನಿಮ್ಡು ಅಂತ ಕೇಳಿಸೋದೆ? ಛೆ ಎಲ್ಲರ್ ಎದಿರಿಗೊ ಹ್ಯಾಪ್ ಮೂರೆ ಆಂತಾಳಲ್ಲ. ಏನೋ ವಯ್ಯಾಸ್ಸಾಗಿದೆ ಆಂತ ಸಲಿಗೆ ಕೊಟ್ರೆ , ಮ್ಯಾನೇಜರ್ ನಾನು, ನನ್ನ ಮೂರೆ ಹ್ಯಾಗಿದ್ರೆ ಇವಳಿಗೇನು ಆಂತ ದುರುಗುಟ್ಟಿದೆ. "ಯಾಕ್ ಸಾ, ಹೊಸ ವರ್ಷ ಅಲ್ವರಾ ಅದಕ್ಕೆ ನಿಮಗೆ ಕ್ಯೆ ಕೊಡೋಣ" ಆಮ್ತ ಅಂದಳು. ಆವಾಗ ಗೊತ್ತಾಯ್ತು "ಹ್ಯಾಪಿ ನ್ಯೂ ಇಯರ್" ಹೇಳಿದ್ದು ಆಂತ. ಸರಿ ಪುಟ್ಟು ನಿನಗೂ ಒಳ್ಳೆದಾಗಲಿ ಆಂತ ಹೇಳಿ ಕಳುಹಿಸಿದೆ. ಮಧ್ವೇಶ್
Comments
ಉ: WISH YOU HAPPY NEW YEAR(ಹಾಸ್ಯ)
In reply to ಉ: WISH YOU HAPPY NEW YEAR(ಹಾಸ್ಯ) by bhalle
ಉ: WISH YOU HAPPY NEW YEAR(ಹಾಸ್ಯ)
ಉ: WISH YOU HAPPY NEW YEAR(ಹಾಸ್ಯ)
In reply to ಉ: WISH YOU HAPPY NEW YEAR(ಹಾಸ್ಯ) by shreekant.mishrikoti
ಉ: WISH YOU HAPPY NEW YEAR(ಹಾಸ್ಯ)
ಉ: WISH YOU HAPPY NEW YEAR(ಹಾಸ್ಯ)
In reply to ಉ: WISH YOU HAPPY NEW YEAR(ಹಾಸ್ಯ) by Prabhu Murthy
ಉ: WISH YOU HAPPY NEW YEAR(ಹಾಸ್ಯ)
ಉ: WISH YOU HAPPY NEW YEAR(ಹಾಸ್ಯ)
In reply to ಉ: WISH YOU HAPPY NEW YEAR(ಹಾಸ್ಯ) by gopaljsr
ಉ: WISH YOU HAPPY NEW YEAR(ಹಾಸ್ಯ)
ಉ: WISH YOU HAPPY NEW YEAR(ಹಾಸ್ಯ)
In reply to ಉ: WISH YOU HAPPY NEW YEAR(ಹಾಸ್ಯ) by partha1059
ಉ: WISH YOU HAPPY NEW YEAR(ಹಾಸ್ಯ)
ಉ: WISH YOU HAPPY NEW YEAR(ಹಾಸ್ಯ)
In reply to ಉ: WISH YOU HAPPY NEW YEAR(ಹಾಸ್ಯ) by siddhkirti
ಉ: WISH YOU HAPPY NEW YEAR(ಹಾಸ್ಯ)