ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂವೇದನ ಡಿಸೆಂಬರ್ ತಿಂಗಳ ಕಾರ್ಯಕ್ರಮ - "ಸ್ಮರಣೆಯೊಂದೇ ಸಾಲದೆ - ದಾಸ ಸಾಹಿತ್ಯ ಹಾಗು ಸಂಗೀತ ಸಂಜೆ"

ಆತ್ಮೀಯರೇ,    

                                                                   
ಭಾನುವಾರ, 12 ಡಿಸೆಂಬರ್ ರಂದು  ಸಂಜೆ 5.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ  ವತಿಯಿಂದ "ಸ್ಮರಣೆಯೊಂದೇ ಸಾಲದೆ - ದಾಸ ಸಾಹಿತ್ಯ ಹಾಗು ಸಂಗೀತ ಸಂಜೆ" ಎನ್ನುವ ಕಾರ್ಯಕ್ರಮವನ್ನು ಇಟ್ಟು ಕೊಂಡಿದ್ದೇವೆ.

 

ಪುರಂದರ ಸ್ಮರಣೆ - ಡಾ. ಎಚ್ ಎನ್ ಮುರಳೀಧರ, ಪ್ರಾಧ್ಯಾಪಕರು, VVN ಪದವಿ ಕಾಲೇಜು, ಬಸವನಗುಡಿ, ಬೆಂಗಳೂರು

ದಾಸರ ಪದಗಳ ಹಾಡುಗಾರಿಕೆ - ವಿದುಷಿ ಎನ್ ಆರ್ ಹರಿಣಿ ಮತ್ತು ವಿದುಷಿ ಎನ್ ಅರ್ ಶಾರದ

 

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು 

ನೆನಪಾಗುತಿವೆ ಆ ದಿನಗಳು, ಒತ್ತಡ ತುಂಬಿದ ಈ ದಿನದೊಳು

ನೆನಪಾಗುತಿವೆ ಆ ದಿನಗಳು, ಒತ್ತಡ ತುಂಬಿದ ಈ ದಿನದೊಳು
ಕಾಲು ಎಟಕದ ಸೈಕಲ್ ಸವಾರಿಯು
ಮಾಮರಕೆ ಕಲ್ಲೆಸೆದ ಸಂಜೆಯು
ನಿದ್ದೆ ಕಣ್ಣಲಿ ನವಿಲುಗರಿ ಹುಡುಕ ಹೊರಟ ಮುಂಜಾನೆಯು
ಗಿಳಿಯ ಬೇಟೆಗೆ ಹೊರಟ ಕಟಾವು ಮುಗಿದ ಗದ್ದೆಯು

ಚಾಣುಕ್ಯನ ಹೇಳಿಕೆಗಳು

ಇವು ಚಾಣುಕ್ಯನ ಹೇಳಿಕೆಗಳು ಅಲ್ಲವೋ ಹೌದೋ ಗೊತ್ತಿಲ್ಲ


ಆದರೆ ಈ-ಮೈಲ್ ನಲ್ಲಿ ಚಾಣುಕ್ಯನ ಹೇಳಿಕೆಗಳು ಎಂಬ ತಲೆಬರಹದಲ್ಲಿ ಬಂದಿದೆ


ಮಿಕ್ಕಿದ್ದು ಬುದ್ದಿವಂತ ಸಂಪದಿಗರಿಗೆ ಬಿಟ್ಟಿದ್ದು



 


. ಅತಿಯಾದ ಪ್ರಾಮಾಣಿಕತೆಯು ತೊಂದರೆಯೆ ನೇರವಾದ ಮರಗಳನ್ನು ಕತ್ತರಿಸಲಾಗುತ್ತೆ ಮತ್ತು ಪ್ರಾಮಾಣಿಕನು ಮೊದಲು ತೊಂದರೆಗೊಳಗಾಗುತ್ತಾನೆ


.ಹಾವಿಗೆ ವಿಷವಿಲ್ಲದಿದ್ದರು ವಿಷದ ಹಾವಿನಂತೆ ಬುಸುಗುಡಬೇಕು


೩ ನಿನ್ನ ರಹಸ್ಯಗಳನ್ನು ಎಂದಿಗು ಯಾರಲ್ಲಿಯು ಹಂಚಿಕೊಳ್ಳಬೇಡ ಅದು ನಿನ್ನ ನಾಶಕ್ಕೆ ಕಾರಣಾವಾಗಬಲ್ಲದು

ಹುಣಸೆಹಣ್ಣಿನ ಅನ್ನ

ಬೇಕಾಗುವ ಸಾಮಗ್ರಿಗಳು
ಎಣ್ಣೆ
ಸಾಸಿವೆ
ಕಡಲೆಬೇಳೆ
ಕರಬೇವು
ಒಣಮೆಣಸಿನಕಾಯಿ
ಹಸಿಮೆಣಸಿನಕಾಯಿ
ಈರುಳ್ಳಿ
ಹುಣಸೆರಸ
ಬೆಲ್ಲ
ಉಪ್ಪು
ಅಕ್ಕಿ
 
ಮಾಡುವ ವಿಧಾನ
ಕುಕ್ಕರ್ ಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ, ಕಡಲೆಬೇಳೆ, ಕರಬೇವು, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ ಹಾಕಿ ಇವು ಚಟಪಟ ಅಂದ ಮೇಲೆ ಈರುಳ್ಳಿ ಹಾಕಿ ಬೇಯಿಸಿ ಇದಕ್ಕೆ ಹುಣಸೆರಸ, ಬೆಲ್ಲ, ಉಪ್ಪು, ಅಕ್ಕಿ, ನೀರು ಹಾಕಿ 3 ಸಿಟಿ ಹೊಡಿಸಬೇಕು.

ಬಾಳಪಯಣದ ಮೊದಲ ಹೆಜ್ಜೆಯಲಿ

ನನಗೋ ನಿನ್ನನ್ನು ನೋಡುವ ಕಾತರ

ಮನಸ್ಸಲ್ಲಿ ಏನೋ ಒಂಥರಾ

ಇನ್ನೇನು ಸಿಗಲಿದೆ ಅದಕೆ ಉತ್ತರ

 

ಅಂತೂ ನೀ ಬಂದೆ ತುಂಬು ನಾಚಿಕೆಯಿಂದ

ಮೊದಲ ನೋಟವೇ ಮಾಡಿತ್ತು ಮೋಡಿ

ಮಾತನಾಡಿಸಲು ಕೂಡಿಸಿದರು ಜೋಡಿ

 

ಅಬ್ಬ ಅದೇನು ಸೌಂದರ್ಯ

ಸೌಂದರ್ಯಕ್ಕೆ ಕಳಶವಿಟ್ಟಂತೆ ಸೌಜನ್ಯ

ಸೌಜನ್ಯವನ್ನೂ ಮೀರಿದ ಸಹಜತೆ

ಅದಕ್ಕೆ ತಕ್ಕ ಹಾಗೆ ಮುಗ್ಧತೆ

ನನ್ನನ್ನು ಸೆಳೆಯಲು ಇವಿಷ್ಟು ಸಾಕಾಯಿತೇ?

 

ನಿನ್ನೆಲ್ಲ ಈ ಗುಣಗಳೂ ಹಾಗೆಯೇ ಇರಲಿ

ಯಾವ ದುರ್ಗುಣಗಳೂ ನಿನ್ನನ್ನು ಸೋಕದಿರಲಿ

ನೇಮಿನಾಥನ ಸರಸ್ವತೀ ದರ್ಶನ

ಶೃಂಗಾರವೇ ಪ್ರಧಾನವಾದ ಕಾವ್ಯ ಲೀಲಾವತಿ ಪ್ರಬಂಧ. ನೇಮಿನಾಥಪುರಾಣ ನೇಮಿನಾಥ ತೀರ್ಥಂಕರನ ಕಥೆಯನ್ನುಳ್ಳದ್ದು. ಲೀಲಾವತಿಯಲ್ಲಿ ನೇಮಿನಾಥನ ಸರಸ್ವತೀ ದರ್ಶನ ವಿಸ್ತೃತವೂ ವಿಶೇಷವೂ ಆಗಿ ಹೊರಹೊಮ್ಮಿದೆ. ಕವಿ ತನ್ನನ್ನು ತಾನು ವಿಶ್ವವಿದ್ಯಾವಿನೋದಂ ಭಾರತೀಚಿತ್ತಚೋರ ಎಂದು ಕರೆದುಕೊಂಡಿದ್ದಾನೆ. ತನ್ನ ಕೃತಿಯನ್ನು ಕಲಾನರ್ತಕಿಯ ನೃತ್ಯರಂಗವೇದಿಕೆ (ಸರಸಕೃತಿ ಕಲಾನರ್ತಕಿ ನೃತ್ಯರಂಗಂ) ಎಂದು ವರ್ಣಿಸಿಕೊಂಡಿರುವ ನೇಮಿಚಂದ್ರ, ಇನ್ನೊಂದು ಪದ್ಯದಲ್ಲಿ, ತನ್ನ ಕೃತಿಯುವತಿಯನ್ನು ಸರಸ್ವತಿಯ ವಿಶೇಷಣಗಳಿಂದ ವರ್ಣಿಸಿದ್ದಾನೆ. ಈಗಾಗಲೇ ನಾಗಚಂದ್ರ ತನ್ನ ಕೃತಿ ಪಂಪರಾಮಾಯಣವನ್ನು ವಚಶ್ರೀನರ್ತಕೀ ನೃತ್ಯವೇದಿಕೆ ಎಂದು ಕರೆದಿರುವುದನ್ನು ಗಮನಿಸಿದ್ದೇವೆ. ಅಲ್ಲಿ ಮಾತೆಂಬ ಲಕ್ಷ್ಮಿ ನರ್ತಿಸುತ್ತಿದ್ದರೆ, ನೇಮಿಚಂದ್ರನಲ್ಲಿ ಸರಸ್ವತಿಯು ಕಲಾನರ್ತಕಿಯಾಗಿದ್ದಾಳೆ. ಕಾವ್ಯಾರಂಭದ ಸರಸ್ವತೀ ಸ್ತುತಿಯೇ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.


ಜಿನಪದಬೋಧವಾರ್ದಿಭವೆ ಭವ್ಯ ಮನೋಹರಕಾಂತೆ ಕಾಮಸಂ

ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?

ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?

ಇಲ್ಲೊಬ್ಬ ಹುಡುಗನ ಭಾವಚಿತ್ರದ ಫ್ಲೆಕ್ಸ್‌ಗಳನ್ನು ದೀಪದ ಕಂಬಗಳಿಗೆ, ರಸ್ತೆಯ ಮಧ್ಯೆಯಲ್ಲಿರುವ ವೃತ್ತದಲ್ಲಿ ಕಟ್ಟಲಾಗಿದೆ.  ಏನೆಂದು ಓದಿದರೆ, ಆತನ ಹೆಸರು, ಜನ್ಮ ದಿನಾಂಕ, ಮರಣ ದಿನಾಂಕ ಎಲ್ಲ ನಮೂದಿಸಿದ್ದಾರೆ.

ಮತ್ತೊಂದು ಭಾವಚಿತ್ರ ಕಾಣಿಸಿತು. ಅದರಲ್ಲಿ ಒಬ್ಬ ಯುವಕ. ಹಸನ್ಮುಖಿಯ ಚಿತ್ರ.  ಆದರೆ, ಅದರಲ್ಲಿಯೂ ಹೆಸರು, ದಿನಾಂಕ ಇತ್ಯಾದಿ.  

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ


ಕಳೆದವಾರ ಸಂಪದ ಸಮ್ಮೇಳನ ನಡೆಯಿತು. ನಂತರ ಸಂಪದದಲ್ಲಿ ಏಕೊ ಒಂದು ರೀತಿ ಜಡವಾದ ವಾತವರಣ. ಮದುವೆಯ ಸಂಭ್ರಮವೆಲ್ಲ ಕಳೆದಮೇಲೆ ಮನೆಯಲ್ಲಿನ ನೆಂಟರೆಲ್ಲ ಊರಿಗೆ ಹೊರಟನಂತರ ಮನೆಯಲ್ಲ ಭಣಭಣವೆನಿಸುವ ರೀತಿ ಏಕೊ ಸಂಪದ ಸಪ್ಪೆ ಸಪ್ಪೆ. ಅದಕ್ಕೆ ಪೂರಕವೆನೆಸುವಂತೆ ಬೆಂಗಳೂರಿನ ವಾತವರಣವೂ ಏಕೊ ಬಾನುವಾರದಿಂದ ಮೋಡ ಮೋಡ ಚಳಿ ಚಳಿ.

ಮೂಢ ಉವಾಚ -48

             ಮೂಢ ಉವಾಚ -48


ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು|
ಚಾಡಿಯನು ಹೇಳುವರು ಸಂಬಂಧ ಕೆಡಿಸುವರು||
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು|
ಸಂಬಂಧ ಉಳಿಸಿ ಬೆಳೆಸುವರವರು ಮೂಢ||


 


ಕ್ಷಮಿಸುವರು ನರರು ಬಲಹೀನತೆಯಿಂದ|
ಆಸೆ ಪಡದಿಹರು ದೊರೆಯದಿರುವುದರಿಂದ||
ಧೀರನಾ ಕ್ಷಮೆಗೆ ಬೆಲೆಯಿರುವ ಪರಿ ಯೋಗಿಯ|
ನಿರ್ಮೋಹತೆಗೆ ಬಲವುಂಟು ಮೂಢ||


*************************


-ಕವಿನಾಗರಾಜ್.

ಪ್ರೀತಿಗೆ ಮೋಸವ ಮಾಡಿದ ಮೋಸಗಾತಿ

ಯಾಕೆ ಬಂದೆ ಹುಡುಗಿ ನನ್ನ ಬಾಳಿನಲ್ಲಿ...


ಪ್ರಶಾಂತವಾಗಿದ್ದ ನನ್ನ ಮನಸಿನಲ್ಲಿ ಬಿರುಗಾಳಿ


ಎಬ್ಬಿಸಿ ಹೊರಟುಹೋದೆ ಏಕೆ?


 


ಸ್ನೇಹದ ಹೆಸರಲ್ಲಿ ಹತ್ತಿರವಾದ ನೀನು


ಪ್ರೀತಿಯ ಆಸೆ ಹುಟ್ಟಿಸಿ ನನ್ನ ಮನದಲಿ..


ಪ್ರೀತಿಯ ನಾಟಕವಾಡಿ ಏಕೆ ಮೋಸಮಾಡಿದೆ..


 


ನೀನೆ ನನ್ನ ಜೀವ ಎಂದೆ, ನೀನೆ ನನ್ನ ಪ್ರಾಣ ಎಂದೆ..


ಜೀವನ ಪೂರ್ತಿ ನಿನ್ನೊಡನೆ ಇರುವೆನೆಂದೆ...


ಕಪಟತನ ಅರಿಯದ ನನ್ನೊಡನೆ ಚೆಲ್ಲಾಟವ ಆಡಿದೆ ಏಕೆ..


 


ಎರಡು ದೋಣಿಯ ಮೇಲೆ ಒಟ್ಟಿಗೆ ನಡೆದೆ ಹುಡುಗಿ ನೀನು...


ನೀ ಮೋಸವ ಮಾಡಿದ್ದು ನನಗಲ್ಲ ಹುಡುಗಿ..