ಪ್ರೀತಿಗೆ ಮೋಸವ ಮಾಡಿದ ಮೋಸಗಾತಿ
ಕವನ
ಯಾಕೆ ಬಂದೆ ಹುಡುಗಿ ನನ್ನ ಬಾಳಿನಲ್ಲಿ...
ಪ್ರಶಾಂತವಾಗಿದ್ದ ನನ್ನ ಮನಸಿನಲ್ಲಿ ಬಿರುಗಾಳಿ
ಎಬ್ಬಿಸಿ ಹೊರಟುಹೋದೆ ಏಕೆ?
ಸ್ನೇಹದ ಹೆಸರಲ್ಲಿ ಹತ್ತಿರವಾದ ನೀನು
ಪ್ರೀತಿಯ ಆಸೆ ಹುಟ್ಟಿಸಿ ನನ್ನ ಮನದಲಿ..
ಪ್ರೀತಿಯ ನಾಟಕವಾಡಿ ಏಕೆ ಮೋಸಮಾಡಿದೆ..
ನೀನೆ ನನ್ನ ಜೀವ ಎಂದೆ, ನೀನೆ ನನ್ನ ಪ್ರಾಣ ಎಂದೆ..
ಜೀವನ ಪೂರ್ತಿ ನಿನ್ನೊಡನೆ ಇರುವೆನೆಂದೆ...
ಕಪಟತನ ಅರಿಯದ ನನ್ನೊಡನೆ ಚೆಲ್ಲಾಟವ ಆಡಿದೆ ಏಕೆ..
ಎರಡು ದೋಣಿಯ ಮೇಲೆ ಒಟ್ಟಿಗೆ ನಡೆದೆ ಹುಡುಗಿ ನೀನು...
ನೀ ಮೋಸವ ಮಾಡಿದ್ದು ನನಗಲ್ಲ ಹುಡುಗಿ..
ಪ್ರೀತಿಗೆ ಮೋಸವ ಮಾಡಿದ ಮೋಸಗಾತಿ ನೀನು