ಚಾಣುಕ್ಯನ ಹೇಳಿಕೆಗಳು

ಚಾಣುಕ್ಯನ ಹೇಳಿಕೆಗಳು

ಇವು ಚಾಣುಕ್ಯನ ಹೇಳಿಕೆಗಳು ಅಲ್ಲವೋ ಹೌದೋ ಗೊತ್ತಿಲ್ಲ


ಆದರೆ ಈ-ಮೈಲ್ ನಲ್ಲಿ ಚಾಣುಕ್ಯನ ಹೇಳಿಕೆಗಳು ಎಂಬ ತಲೆಬರಹದಲ್ಲಿ ಬಂದಿದೆ


ಮಿಕ್ಕಿದ್ದು ಬುದ್ದಿವಂತ ಸಂಪದಿಗರಿಗೆ ಬಿಟ್ಟಿದ್ದು



 


. ಅತಿಯಾದ ಪ್ರಾಮಾಣಿಕತೆಯು ತೊಂದರೆಯೆ ನೇರವಾದ ಮರಗಳನ್ನು ಕತ್ತರಿಸಲಾಗುತ್ತೆ ಮತ್ತು ಪ್ರಾಮಾಣಿಕನು ಮೊದಲು ತೊಂದರೆಗೊಳಗಾಗುತ್ತಾನೆ


.ಹಾವಿಗೆ ವಿಷವಿಲ್ಲದಿದ್ದರು ವಿಷದ ಹಾವಿನಂತೆ ಬುಸುಗುಡಬೇಕು


೩ ನಿನ್ನ ರಹಸ್ಯಗಳನ್ನು ಎಂದಿಗು ಯಾರಲ್ಲಿಯು ಹಂಚಿಕೊಳ್ಳಬೇಡ ಅದು ನಿನ್ನ ನಾಶಕ್ಕೆ ಕಾರಣಾವಾಗಬಲ್ಲದು


. ಯಾವ ಗೆಳೆತನೆವೆ ಆಗಲಿ ಯಾವುದೊ ಉದ್ದೇಶದಿಂದಲೆ ಕೂಡಿರುತ್ತದೆ , ಸ್ವಂತ ಉಪಯೋಗದ ದೂರದೃಷ್ಟಿಯಿಲ್ಲದ ಗೆಳೆತನ ಯಾವುದು ಇಲ್ಲ , ಇದು ಕಹಿ ಸತ್ಯ


೫ ಯಾವುದೇ ಕೆಲಸಕ್ಕೆ ಮುಂಚೆ ನಿಮ್ಮನ್ನು ಪ್ರಶ್ನಿಸಿಕೊಳ್ಳಿ ೧.ನಾನು ಏತಕ್ಕೆ ಈ ಕೆಲಸ ಮಾಡಬೇಕು ೨.ಈ ಕೆಲಸದ ಪರಿಣಾಮವೇನು ಮತ್ತು ೩.ಈ ಕೆಲಸದಲ್ಲಿ ನಾನು ಯಶಸ್ವಿಯಾಗುವೆನಾ?


೬ ಭಯ ನಿಮ್ಮನ್ನು ಸಮೀಪಿಸುತ್ತಿರುವಂತೆಯೆ ನೀವೆ ಅದರ ಮೇಲೆ ಆಕ್ರಮಣ ನಡೆಸಿ ನಾಶಪಡಿಸಿ


. ಒಮ್ಮೆ ನೀವು ಕೆಲಸ ಪ್ರಾರಂಬಿಸಿದ ನಂತರ ನಿಲ್ಲಿಸದಿರಿ ಮತ್ತು ಯಶಸ್ಸಿನ ಬಗ್ಗೆ ಹೆದರದಿರಿ


. ಹೂವಿನ ಸುಗಂದ ಗಾಳಿಬೀಸಿದತ್ತ ಮಾತ್ರ ಹರಡುತ್ತದೆ ಆದರೆ ಮನುಷ್ಯನ ಒಳ್ಳೆಯತನದ ಪರಿಣಾಮ ಎಲ್ಲ ದಿಕ್ಕಿನಲ್ಲು ಹರಡುತ್ತದೆ


. ಮನುಷ್ಯ ತನ್ನ ಸಾದನೆಯಿಂದಷ್ಟೆ ದೊಡ್ಡವನು ಹುಟ್ಟಿನಿಂದಲ್ಲ


೧೦ ಮೂರ್ಖನ ಕೈಯಲ್ಲಿರುವ ಉತ್ತಮ ಪುಸ್ತಕವು ಕುರುಡನ ಕೈಯಲ್ಲಿನ ಕನ್ನಡಿಯಂತೆ


 



 

Rating
No votes yet

Comments