ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ


ಕಳೆದವಾರ ಸಂಪದ ಸಮ್ಮೇಳನ ನಡೆಯಿತು. ನಂತರ ಸಂಪದದಲ್ಲಿ ಏಕೊ ಒಂದು ರೀತಿ ಜಡವಾದ ವಾತವರಣ. ಮದುವೆಯ ಸಂಭ್ರಮವೆಲ್ಲ ಕಳೆದಮೇಲೆ ಮನೆಯಲ್ಲಿನ ನೆಂಟರೆಲ್ಲ ಊರಿಗೆ ಹೊರಟನಂತರ ಮನೆಯಲ್ಲ ಭಣಭಣವೆನಿಸುವ ರೀತಿ ಏಕೊ ಸಂಪದ ಸಪ್ಪೆ ಸಪ್ಪೆ. ಅದಕ್ಕೆ ಪೂರಕವೆನೆಸುವಂತೆ ಬೆಂಗಳೂರಿನ ವಾತವರಣವೂ ಏಕೊ ಬಾನುವಾರದಿಂದ ಮೋಡ ಮೋಡ ಚಳಿ ಚಳಿ.


ಸಂಪದದ ಬ್ಲಾಗ್ ಗೋಡೆಗಳು ಅಷ್ಟೆ ಏಕೊ ಕಳೆ ಕಳೆದು ಕೊಂಡಿದೆ. ಬಹಳಷ್ಟು ಬ್ಲಾಗ್ ಐಕಾನ್ ಗಳು ಈ ವಾರ ಕಣ್ಮರೆಯಾಗಿದ್ದಾರೆ. ಅತ್ರಾಡಿ ಸುರೇಶ್ರವರು, ಬೆಳ್ಳಾಲ ಗೋಪಿನಾಥರಾಯರು, ಇಸ್ಮಾಯಿ ಬಸ್ ಒವ್ನರಗಳು, ಬಹಳಷ್ಟು ಬರಹಗಾರಾರು ಏಕೊ ಸುಮ್ಮನ್ನಿದ್ದಾರೆ. ’ಮೂಡ’ ಪದ್ಯದ ನಾಗರಾಜರು, ’ಬೆಳ್ಳಿಕೋಳಿ’ ನಾವಡರು ಅಪ್ರೂಪಕ್ಕೆ ಒಂದು ಇಣಿಕು ಹಾಕಿದ್ದು ಬಿಟ್ಟರೆ ಹೆಚ್ಚು ಕಾಣಿಸಿಲ್ಲ. ಪ್ರಸನ್ನ,ಚಿಂಟು ಮುಂತಾದವರು ಇಣುಕಿಹಾಕಿದು ಅಪರೂಪವೆ. ದಿನಕೊಂದು ಪದ್ಯ ಹೊಸೆದು ನಮಗೆಲ್ಲ ಅಂತರ್ಜಾಲದಲ್ಲಿಯೆ ನೂರೊಂದು ಸಿಹಿ ತಿನ್ನಿಸಿದ ಜಯಂತ್ ಸಹ ಏಕೊ ಮತ್ತೆ ಕಡಿಮೆ ಉತ್ಸಾಹಿರರಾಗಿದ್ದಾರೆ.


ಬಹಳಷ್ಟು ಸಂಪದಿಗರು ಏನು ಮಾಡುತ್ತಿದಾರೊ ಅಂತ ಕುತೂಹಲ. ಇಸ್ಮಾಯಿಲ್ ಬಸ್ ಹತ್ತಿ ಲೋಕಲ್ ಟೂರ ಅಥವ ಹೊಳೆನರಸಿಪುರದ ಮಂಜು೭೮೭ ರವರ ಮಲ್ಯರ ಪ್ಲೇನ್ ಏರಿ ಮತ್ತೊಂದು ವಿದೇಶಿ ಪ್ರವಾಸವ !! .


ಹೇಗಾದರು ಸರಿ ಎಲ್ಲರೂ ರಜಾದ ಮಜಾ ಕಳೆದೊ ಅಥವ ಅವರವರ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಮತ್ತೆ ಸಂಪದದಲ್ಲಿ ಹಾಜರಾಗಿ ಪೂರ್ಣ ಉತ್ಸಾಹಭರಿತರಾಗಿ (FUUL ZOOM ?) ಬ್ಲಾಗ್ ಗೋಡೆಗಳಿಗೆ ಹೊಸ ಹೊಸ ಬಣ್ಣ ತುಂಬಲಿ. ಲೇಖನ ವಿಬಾಗದಲ್ಲಿ ಹೊಸ ಹೊಸ ವಿಚಾರಗಳು ಮೂಡಲಿ. ಹೊಸ ಹೊಸ ಕವನಗಳು ಕೇಳಿಸಲಿ. ನವನವೀನ ಆಕರ್ಷಕ ಚಿತ್ರಗಳು ಕಾಣಿಸಲಿ ಎಂದು ನಿರೀಕ್ಷಿಸುತ್ತ ಈ ಗೋಡೆ ಬರಹವನ್ನ ಮುಗಿಸುತ್ತಿದ್ದೇನೆ

Rating
No votes yet

Comments