ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೆನಪುಗಳೇ ಹೀಗೆ..

 ನೆನಪುಗಳೇ  ಹೀಗೆ..

 ಬತ್ತಲಾರದ ಚಿಲುಮೆಯ ಹಾಗೆ

ಒಲವೆಂಬ ಹಣತೆಯ ಹಚ್ಚಲು  ಅವಶ್ಯವಾದ

ನಲ್ಮೆಯ  ಬತ್ತಿಯ ಹಾಗೆ..

ಮೌನದೇವಿಯ ಮಡಿಲಿನ

ಘೋರ ಕದನದ ಹಾಗೆ.....

ನನಸನ್ನು ಕನಸನ್ನಾಗಿ ಮಾಡುವ ಹಂಬಲದಲ್ಲಿ.....

ಒಲವಿನೋರತೆಯ ಕಾಣುವ ಹುಮ್ಮಸ್ಸಿನಲ್ಲಿ.....ನೆನಪುಗಳೇ  ಹೀಗೆ..

ಕಡಲೇಕಾಯಿ ಪರಿಷೆ

ಕಾಯಿ ಕಾಯಿ ಕಡಲೇಕಾಯಿ ಎಲ್ಲಿ ನೋಡಿದರೂ ಕಡಲೇಕಾಯಿ
ಬಸವನಗುಡಿಯ ಕಡಲೇಕಾಯಿ ಪರಿಷೆಯ ಕಡಲೇಕಾಯಿ..

ಸುಂಕೇನಹಳ್ಳಿಯಲ್ಲಿ ಬೆಳೆಯುತ್ತಿದ್ದ ಕಡಲೇಕಾಯಿ
ಬಸವನ ದಾಳಿಗೆ ತುತ್ತಾಗಿ ನಾಶವಾಗುತ್ತಿದ್ದ ಕಡಲೇಕಾಯಿ..
ರೈತರ ಆಕ್ರೋಶಕ್ಕೆ ಬೆದರಿ ಕಲ್ಲಾಗಿ ಹೋದ ಬಸವ
ತಪ್ಪಿನ ಅರಿವಾಗಿ ಕಡಲೇಕಾಯಿ ನೈವೇದ್ಯ ಸಮರ್ಪಿಸಿದ ರೈತರು...

ಬಸವನಗುಡಿಯಾಗಿ ಬದಲಾದ ಸುಂಕೇನಹಳ್ಳಿ..
ಐನೂರುವರ್ಷ ಇತಿಹಾಸದ ಕಡಲೇಕಾಯಿ ಪರಿಷೆ..
ಕಾರ್ತಿಕ ಮಾಸದ ಕಡೆಯ ಸೋಮವಾರದ ಪರಿಷೆ..
ಸಂತೋಷ ಸಂಭ್ರಮ ಸಡಗರದ ಕಡಲೇಕಾಯಿ ಪರಿಷೆ..

ಹಸಿ ಬಿಸಿ ರುಚಿಯಾದ ಚಿಂತಾಮಣಿ ಕಡಲೇಕಾಯಿ...
ಬಡವರ ಬಾದಾಮಿ ಗರಮಾ ಗರಂ ಕಡಲೇಕಾಯಿ
ಕಾಯಿ ಕಾಯಿ ಕಡಲೇಕಾಯಿ ಎಲ್ಲಿ ನೋಡಿದರೂ ಕಡಲೇಕಾಯಿ

ಕಥೆ: ಹೀಗೊಂದು ಕನಸು.. ಕಾಲ ಕೂಡಿ ಬರಬೇಕು (ಬಾಗ ೧)


 ಕಥೆ: ಹೀಗೊಂದು ಕನಸು.. ಕಾಲ ಕೂಡಿ ಬರಬೇಕು (ಬಾಗ ೧)


’ಎಲೊ ಜಡಬಾಲಕ ನೀನು ಯಾರು’ ಪ್ರಶ್ನೆ


’ನಾನು ಜಡನಲ್ಲ ನನ್ನ ಉಪಸ್ಥಿಥಿ ಮಾತ್ರದಿಂದ ಈ ಜಡ ಪ್ರಪಂಚ ಚಲಿಸುತ್ತದೆ’

ಯದಾ ಯದಾಹಿ ಧರ್ಮಸ್ಯ... : ಕಲಿಕಾ ಪ್ರಕ್ರಿಯೆಯ ಅವನತಿ ಮತ್ತು ಪುನರುಜ್ಜಿವನ.

ಪ್ರೊ. ಬಾಲಗಂಗಾಧರ

Degeneration of a Learning Process and its Rejuvenation

Prof. Balagangadhar

ಯದಾ ಯದಾಹಿ ಧರ್ಮಸ್ಯ ... ಸಂಭವಾಮಿ ಯುಗೇಯುಗೇ : ಭಗವದ್ ಗೀತೆಯ ಈ ಶ್ಲೋಕ ಬಹಳಷ್ಟು ಜನರಿಗೆ ಚಿರಪರಿಚಿತ. ಈ ಮಂದಿನ ಚರ್ಚೆಯ ಸಲುವಾಗಿ ಈ ಶ್ಲೋಕದ  ಒಂದು ಕರಡು ಭಾಷಾಂತರವನ್ನು ಮಾಡಲು ನನಗೆ ಅನುಮತಿ ನೀಡಿ.

ಮಂಗ್ಳೂರಲ್ಲಿ ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

ರಾಷ್ಟ್ರೀಯ ಅನುವಾದ ಮಿಶನ್ ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು. ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ ದಿನಾಂಕ: 6 ರಿಂದ 8 ಡಿಸೆಂಬರ್, 2010 ಸ್ಥಳ: ಸಂತ ಅಲೋಸಿಯಸ್ ಪದವಿ ಕಾಲೇಜು, ಮಂಗಳೂರು ಆಸಕ್ತರು ಸಂಪರ್ಕಿಸಿ : ಜ್ಞಾನಮೂರ್ತಿ- 9986048159

ಕಾಲದ ಕನ್ನಡಿ: ಇದೆಲ್ಲಾ ನಮ್ಮದೇ ದುಡ್ಡು ಸ್ವಾಮಿ !!!

ಕಾಲದ ಕನ್ನಡಿ: ಹೌದು! ಇದೆಲ್ಲಾ ನಮ್ಮದೇ ದುಡ್ಡು ಸ್ವಾಮಿ !!! 


 


ನಿನ್ನೆ ನನ್ನ ಆತ್ಮೀಯ ಮಿತ್ರ ಚಿಕ್ಕಮಗಳೂರಿನ ಗಿರೀಶ್ ನನ್ನ ಚರವಾಣಿಗೆ ಒ೦ದು ಸ೦ದೇಶ ಕಳುಹಿಸಿದರು. ನಾನು ಅದನ್ನು ಓದಿ ಕಾಲದ ಕನ್ನಡಿಯ ಹೊಸ ಲೇಖನಕ್ಕೊ೦ದು ವಿಷಯವಾಯಿತು ಎ೦ದುಕೊ೦ಡು, ಅವರಿಗೆ ಫೋನಾಯಿಸಿ, “ಏನಣ್ಣಾ, ಇದು ಸತ್ಯವೇ?“  ಹೌದು ನಾವಡರೇ, ನಾನು ನ೦ಬಬಹುದೇ? ನೂರಕ್ಕೆ ನೂರು! ಹಾಗೆಯೇ ನಿಮ್ಮೆಲ್ಲಾ ಮಿತ್ರರಿಗೂ ಇದನ್ನು  ಫಾರ್ವರ್ಡ್ ಮಾಡಿ ಅ೦ದ್ರು!  ಆ ವಿಚಾರ ಏನ೦ದ್ರೆ,

ಬದನೆ ಬೋಧನೆಯೆಂಬೊ ರಿವೈಂಡ್ ರಾಗ...

ಈವತ್ತಿನ ದಿನ ಅದ್ಹೇಗೆಲ್ಲ ಕಳೆಯಿತು ಅಂತ ಯೋಚಿಸುತ್ತ  ಇನ್ನೇನು ಹಾಸಿಗೆಯಲ್ಲಿ ಒಂದೊಳ್ಳೆ ಸುಖನಿದ್ದೆ ಸವಿಯಬೇಕು ಅಂತ ಆಲೋಚಿದ್ದೇ ಹಾಸಿಗೆಯಿಂದ ಎದ್ದು ಕೂತೆ. ಮಲಗೋ ಮೊದಲು ಡೈರಿ ಬರೆಯುವುದು ನನ್ನ ವಾಡಿಕೆ. ಹಾಗೆ ಅದನ್ನು ಬರೆಯಲು ಕುಳಿತಿದ್ದೂ  ಆಯಿತು, ಇವತ್ತಿನ ದಿನದ ಸ್ವಾರಸ್ಯಗಳನ್ನು ಬರೆಯಲು ಮನಸ್ಸೂ ಸ್ವಲ್ಪ ಹೆಚ್ಚೇ ಉತ್ಸುಕವಾಗಿತ್ತು. ಡೈರಿ ಬರೆಯೋಕೂ ಮೊದಲು ಊಟ ಮುಗಿಸಿದ್ದೆನಾ ಅಂತ ಖಾತ್ರಿಯಾಗಬೇಕಿತ್ತು. ಹೌದು ಊಟ ಮಾಡಿದ್ದೇನೆ. ಬದನೆ ಗೊಜ್ಜು , ತಿಳಿಸಾರು ಮಾಡಿ ಹೆಂಡತಿಯೇ ಕಯ್ಯಾರ ಬಡಿಸಿದ್ದಳು. 

 

ಈ ಸಂಜೆ ಪ್ರತಿ ಸಂಜೆ ಯಾಗಿರಲಿ ನನ್ನ ನಿನ್ನ ಜೀವನದೊಳು

ನಿನ್ನೊಂದಿಗಿನ ಈ ಸಂಜೆ ಹೆಜ್ಜೆಯೊಳು ಹೆಜ್ಜೆ ಇರಲು
ಅನುರಾಗವು ರಾಗವಾಗಿ ಹೊಮ್ಮುತಲಿರಲು
ಪಾದದ ಕೆಳಗಿನ ಮರಳು ಇನ್ನೂ ಸಡಿಲವಾಯಿತು!!
ಅಲೆಯ ಕರೆಗೆ ಬೆಳಕಿತ್ತ ರವಿಯು ಕಡಲೊಳು ಲೀನನಾಗಲು
ಆ ಕೆಂಬಣ್ಣದ ಪ್ರತಿಬಿಂಬಕ್ಕೆ ನೀನು ಇನ್ನೂ ಕೆಂಪಾಗಲು
ಆಗ ತಾನೇ ಮೂಡಿದ ಚಂದಿರ ನಾಚಿ ಮೋಡದ ಮರೆಯಾದ !!!

 

ನಿನ್ನೊಂದಿಗಿನ ತುಂಟಾಟ , ಸಂಭಾಷಣೆಯ ಹಲವು ದಿನದ ಕನಸು
ಇಂದು ಸಾಕ್ಷಿಯಾಯಿತು ಅದಕೆ ಈ ಮೂಕ ಕಡಲು
ಮುಗುಳುನಗೆಯ ಆ ಪ್ರಹರಕ್ಕೆ ಬೆಳದಿಂಗಳಿಗೂ ಬೆರಗು
ಮೋಡದ ನಡುವಿನ ಚಂದಿರನಿಗೆ ಅಸೂಯೆ ಮೂಡಿಸಿದ ನಿನ್ನ ನಗೆಯು
ಅದ ದೋಚುವ ಕಳ್ಳ ನಾನಾಗಬೇಕು ಎಂಬ ಆಸೆಯು ನಿತ್ಯವೂ