ಕಾಫಿ ಮತ್ತು ಆತ್ಮ
- Read more about ಕಾಫಿ ಮತ್ತು ಆತ್ಮ
- Log in or register to post comments
- 40 comments
ಪರೀಕ್ಷಾ ಕೊಠಡಿ. ಸೈನ್ಸ್ ಪರೀಕ್ಷೆ ದಿನ. ಮೇಲ್ವಿಚಾರಕರು ಪ್ರಶ್ನೆಪತ್ರಿಕೆಗಳನ್ನು ಕೊಡುತ್ತಾ ಬಂದರು. ಜೀರೋದಿಂದ ನೂರು ಕಿ.ಮೀ.-ಐದೇ ಸೆಕೆಂಡುಗಳಲ್ಲಿ ಎಂದು ಬೈಕುಗಳಿಗೆ ಪ್ರಚಾರ ಮಾಡುತ್ತಾರಲ್ಲ, ಹಾಗೇ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮಕ್ಕಳ ಮುಖ ಐದೇ ಸೆಕೆಂಡುಗಳಲ್ಲಿ ಜೀರೋಗೆ ಇಳಿದಿರುತ್ತಿತ್ತು. ಬಹಳ ಟಫ್ ಇರಬೇಕು.
ಮೇಲ್ವಿಚಾರಕರು ನನ್ನ ಬಳಿ ಬಂದಾಗ ನಗುತ್ತಾ ಪ್ರಶ್ನೆಪತ್ರಿಕೆ ತೆಗೆದುಕೊಂಡೆ. ಪೂರ್ತಿ ತಯಾರಾಗಿ ಬಂದವರಿಗೆ ಯಾವುದೇ ಭಯವಿರುವುದಿಲ್ಲ . ಪ್ರಶ್ನೆ ಪತ್ರಿಕೆ ಮೇಲೆ ಕಣ್ಣಾಡಿಸುವ ಮೊದಲು ಪ್ಯಾಂಟ್‌ನ ಎಡಕಿಸೆಗೆ ಕೈಹಾಕಿ ಚೀಟಿ ತೆಗೆದು ಪ್ರಶ್ನೆ ಪತ್ರಿಕೆಯ ಅಡಿಯಲ್ಲಿ ಇಟ್ಟು ನೋಡಿಕೊಂಡು ಬರೆಯಲು ಆರಂಭಿಸಿದೆ.
ಸಂಪದಿಗ ಮಿತ್ರರೇ,
ಇದೊಂದು ವಿನಂತಿ ಪತ್ರ....
ದಿಲ್ಲಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ ೨೦೧೧ ರ ಪ್ರಯುಕ್ತ ಪ್ರಕಟಣೆಯಾಗಿರುವ ಅನಿವಾಸಿ ಭಾರತೀಯರ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿರುವ ನಾನು ನಿಮ್ಮ ಪ್ರೋತ್ಸಾಹ ದೊರೆತಲ್ಲಿ ಭಾರತದ ಮಹತ್ವವನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದೇನೆ. ಈ ಕಾರ್ಯದಲ್ಲಿ ನನ್ನನ್ನು ಬೆಂಬಲಿಸಿ ಗೆಲ್ಲಿಸುತ್ತೀರಿ ಅಂತ ನಂಬಿದ್ದೇನೆ. ಇದಕ್ಕಾಗಿ ತಮ್ಮ ಸ್ವಲ್ಪ ಸಮಯ ನೀಡಿ, ಈ ತಾಣಕ್ಕೆ ಹೋಗಿ, ಅಲ್ಲಿ ನನ್ನ ಬಗ್ಗೆ ಬರೆದ ವಿಚಾರಗಳು ಸರಿಯೆನಿಸಿದರೆ, ನನ್ನನ್ನು ದೃಢೀಕರಿಸಿ (endorse me) ಮತ್ತು ತಮ್ಮ ಮತ ಹಾಕಿ (vote for me) ಬೆಂಬಲಿಸುವಿರಿ ಎಂದು ನಂಬಿದ್ದೇನೆ.
ಮೂಢ ಉವಾಚ -44
ಕೆಲಸಕಾರ್ಯವ ನೋಡೆ ಒಂದು ಕೈಮೇಲು|
ಧೃಢ ನಿಲುವು ಇರಲು ಕಾಲದ ಅರಿವು||
ಸರಳ ನಡೆಯೊಡನೆ ಜಾಣತನ ಮೇಳವಿಸೆ|
ನಾಯಕನು ಉದಯಿಸುವ ಕಾಣು ಮೂಢ||
ನುಡಿದಂತೆ ನಡೆದು ಮಾದರಿಯು ತಾನಾಗಿ|
ಪರರ ಮನವರಿತು ನಡೆವ ಕರುಣೆಯಿರಲಾಗಿ||
ಕೆಲಸ ಮಾಡಿಸುವ ಕಲೆಯು ಕರಗತವು ತಾನಾಗೆ|
ನಾಯಕನು ಉದಯಿಸುವ ಕಾಣು ಮೂಢ||
ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ. ಈ ಹಿಂದೆ ಮುಂದಾಗುವುದನ್ನು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು ವಿವರಿಸುವುದಿಲ್ಲ. ಆದರೆ ಮುಂದೆ ಮುಂದೆ ಹಿಂದಿನ ವಾಡೆಯಲ್ಲಿನ ನಿಲುವುಗನ್ನಡಿ ಹೊರತು ಉಳಿದೆಲ್ಲ ಹೊಸತರಂತಿದ್ದ ವಸ್ತುಗಳು ವಾಡೆಯ ಬೀಗ ತೆಗೆದ ಬಳಿಕ ಧೂಳೀಪಟವಾಗಿಹೋಗುತ್ತವೆ. ನಾನು ಬಲ್ಲಂತೆ ಕನ್ನಡಿಗಳು ಹಾಳಾಗುವುದಿಲ್ಲ. ಅವುಗಳ ಕಣಕಣವೂ ಹೊಸಕನ್ನಡಿಗಳಾಗಿ ಇರುತ್ತವೆ. ಒಳಗೆ ನುಸುಳುವ ಬಿಂಬಗಳನ್ನು ತಿಂದುಕೊಂಡು ಬದುಕುತ್ತವೆ. ಇಲ್ಲಿಯೂ ನಿಲುವುಗನ್ನಡಿ ಹುಡಿಯಾಗದೆ ಉಳಿಯುತ್ತದೆ.
ತಲೆಮರೆಸಿಕೊಂಡು ಹೋಗುವುದರಲ್ಲಿ ಸಾಮ್ರಾಟರಾಗಿರುವ ನಗೆ ಸಾಮ್ರಾಟರನ್ನು ಹುಡುಕಿ ಕರೆತರುವುದಕ್ಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಗಾರಿಯ ಉಸ್ತುವಾರಿಯನ್ನು ಯುವ ಸದಸ್ಯರೊಬ್ಬರು ವಹಿಸಿಕೊಂಡದ್ದು, ತಮ್ಮ ಅತ್ಯಾಪ್ತ ಚೇಲ ಕುಚೇಲ ತಮ್ಮ ವಿರುದ್ಧವೇ ತಿರುಗಿ ಬಿದ್ದದ್ದು ಇವೆಲ್ಲವುಗಳನ್ನು ಕಂಡ ಸಾಮ್ರಾಟರು ಕಂಗಾಲಾಗಿದ್ದರು. ಹಲ್ಲಿಲ್ಲದ ತನ್ನ ಬಳಿಯಿರುವ ಕಡಲೆಯನ್ನು ಕಿತ್ತುಕೊಳ್ಳಲು ಬರುವ ‘ಹಲ್ಕಟ್’ ಮಂದಿಯಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದರು.
ಪ್ರಿಯೆ,
ನನ್ನ ಜೊತೆ
ನೀನು
ಬ೦ದರೆ
ನಿನ್ನನ್ನು
ಪ್ರೀತಿಸುವೆ.
ನೀನು
ಬರದಿದ್ದರೆ
......
......
ಜೀವನವನ್ನು
ಪ್ರೀತಿಸುವೆ.....
*******
-2-
ನಲ್ಲೆ...
ನಮ್ಮಿಬ್ಬರ
ಮಧ್ಯೆಯ
ಪ್ರೀತಿ ಪ್ರೇಮದ
ಶಬ್ದಗಳು
...ಪಿಸುಮಾತುಗಳು
ಎಲ್ಲವೂ
ಖಾಲಿಯಾಗಿವೆ
ಸರಿ,
ಇನ್ನು
ನಾನು
ಬರಲಾ...? !
*****
ಧಾರವಾಡದಲ್ಲಿ ಸಾಮಾನ್ಯ ಹಸಿರು ಚಿಣಗಿ ಹಾವು ಕಂಡು ಬರುವುದು ವಿರಳ. ಆದರೆ ಇಂದು ನಮಗೆ ಆ ಭಾಗ್ಯ ಲಭಿಸಿತ್ತು. ಪ್ರೊ. ಗಂಗಾಧರ ಕಲ್ಲೂರ ಹಾಗೂ ದಂತ ವೈದ್ಯ ಡಾ.ಮಹಾಂತೇಶ ಸರದೇಸಾಯಿ ಅವರ ಮೂಲಕ ನಾವು ಫಲಾನುಭವಿಗಳಾದೆವು. ಹರ ಸಾಹಸ ಪಟ್ಟು ಅವರು ಆ ಕಿರು ಬೆರಳು ಗಾತ್ರ ದೇಹದ ಆಗಂತುಕ ಅತಿಥಿಯನ್ನು ಕೆಲಕಾಲ ತಾತ್ಕಾಲಿಕವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬಕಿಟ್ ಈ ಶ್ವರರು ಸ್ವಾಮಿ ಬಕಿಟ್ ಈ ಶ್ವರರು
ಕಿಸಿಯುತ್ತಾರೆ ದೇನೆಸಿಯಂತೆ ಬಿಟ್ಟು ಮೂರೂ ಮತ್ತು ಹಲ್ಲು ಮೂವತ್ತೆರಡು .
ಬಾಗುತಾರೆ ಕಾಣುವ ತನಕ ಕುಂಡಿ, ಅಣ್ಣಾ ಬಾಗಿದನೆಂದು ಬೀಗಬೇಡ
ಇಡುತಾನೆ ಯಾವಾಗಲಾದರೂ ಬುಡ್ದಕ್ಕೆ ಬತ್ತಿ .
ಸದಾ ಬೇರೆಯವರ ಮಾತಿನ ಮೇಲೆ ಹಿಡಿತ
ಯಾಕಂದ್ರೆ ಆಗಾಗ ಹುಚ್ಚುನಾಯಿ ಕಡಿತ
ತಲೆ ಇದೆ ತುಂಬಾ ಬೇವರ್ಸಿ ಬುದ್ದಿ
ಇಲ್ಲಿಂದ ಅಲ್ಲಿಗೆ ಚುಚ್ಚುವ ಆದುನಿಕ ನಾರದರು .
ಎಲರಿಗೂ ಒಂದೇ ಇವರಿಗೆರಡು ಸೀಳು ನಾಲಿಗೆ
ಏನೇನೂ ಅಲ್ಲ ಇವರ ಮುಂದೆ ಊಸರವಳ್ಳಿ
ಅನ್ನ ಕೊಟ್ಟ ಬೆಪ್ಪರಿಗಿವರು ನಮಕ್ ಹರಾಮ್
ಹುಶಾರ್ ಅಣ್ಣ ನಮ್ಮಲ್ಲಿ ಎಲ್ಲಾದರೂ ಇರಬಹುದು .