ಬಕಿಟ್ ಈ ಶ್ವರರು

ಬಕಿಟ್ ಈ ಶ್ವರರು

ಕವನ

ಬಕಿಟ್  ಈ ಶ್ವರರು  ಸ್ವಾಮಿ ಬಕಿಟ್  ಈ ಶ್ವರರು


ಕಿಸಿಯುತ್ತಾರೆ ದೇನೆಸಿಯಂತೆ ಬಿಟ್ಟು ಮೂರೂ ಮತ್ತು ಹಲ್ಲು ಮೂವತ್ತೆರಡು .
ಬಾಗುತಾರೆ ಕಾಣುವ ತನಕ ಕುಂಡಿ, ಅಣ್ಣಾ ಬಾಗಿದನೆಂದು ಬೀಗಬೇಡ
ಇಡುತಾನೆ ಯಾವಾಗಲಾದರೂ  ಬುಡ್ದಕ್ಕೆ ಬತ್ತಿ .

ಸದಾ ಬೇರೆಯವರ ಮಾತಿನ ಮೇಲೆ ಹಿಡಿತ
ಯಾಕಂದ್ರೆ ಆಗಾಗ ಹುಚ್ಚುನಾಯಿ  ಕಡಿತ
ತಲೆ ಇದೆ ತುಂಬಾ ಬೇವರ್ಸಿ ಬುದ್ದಿ
ಇಲ್ಲಿಂದ ಅಲ್ಲಿಗೆ ಚುಚ್ಚುವ ಆದುನಿಕ ನಾರದರು .

ಎಲರಿಗೂ ಒಂದೇ ಇವರಿಗೆರಡು ಸೀಳು ನಾಲಿಗೆ
ಏನೇನೂ ಅಲ್ಲ ಇವರ ಮುಂದೆ ಊಸರವಳ್ಳಿ
ಅನ್ನ ಕೊಟ್ಟ ಬೆಪ್ಪರಿಗಿವರು ನಮಕ್  ಹರಾಮ್
ಹುಶಾರ್ ಅಣ್ಣ ನಮ್ಮಲ್ಲಿ ಎಲ್ಲಾದರೂ ಇರಬಹುದು .