ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Windows mobile 6.5 ನಲ್ಲಿ ಕನ್ನಡ ಓದೋದು ಹೇಗೆ?

 


ಸಂಪದ ವೆಬ್ಸೈಟ್ ಅನ್ನು ನನ್ನ ಮೊಬೈಲ್ ನಲ್ಲಿ ತೆರೆಯಲು ಯತ್ನಿಸಿದೆ. ಯುನಿಕೋಡ್ ಎನಬಲ್ ಆಗಿದೆ. ಆದರೂ ಕನ್ನಡ ಅಕ್ಷರಗಳು ಕಾಣುತ್ತಿಲ್ಲ. ಏನಾದರೂ ಪರಿಹಾರ ಇದೆಯಾ?

ಅರ್ನೆಸ್ಟೋ ಚೆ ಗುವರ

ಹೀಗೆ ಸುಮ್ಮನೆ ಚೆ ನೆನಪಾದ, ಸೈಟುಗಳ ಜಾಲಾಟ ಶುರುವಾಯಿತು, ಅವನ ಕೆಲವು ಪ್ರಸಿದ್ಧ ಹೇಳಿಕೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದೆ....


“ನೀನಿಲ್ಲಿ ನನ್ನನ್ನು ಕೊಲ್ಲುಲು ಬಂದಿರುವೆ ಎಂದು ತಿಳಿದಿದೆ. ಹೇಡಿಯೇ, ಗುಂಡಿಕ್ಕು ನಿನೊಬ್ಬ ಮನುಷ್ಯನನ್ನು ಮಾತ್ರ ಕೊಲ್ಲಲ್ಲಿರುವೆ ಅಷ್ಟೆ.”


“ಮೌನವು ಬೇರೆಯೇ ಮಾಧ್ಯಮ ತರುವ ಒಂದು ವಾದ.”


“ಕ್ರಾಂತಿ ಎಂಬುದು ಹಣ್ಣಾಗಿ ಬೀಳುವ ಒಂದು ಸೇಬು ಹಣ್ಣಿನಂತಲ್ಲ. ನೀವು ಅದು ಬೀಳುವಂತೆ ಮಾಡಬೇಕು.”


“ಹೊಸ ನಾಯಕರುಗಳನ್ನೂ ಕ್ರೂರಿಗಳಾಗಿ ಪರಿವರ್ತಿಸಲಷ್ಟೆ ಕ್ರೂರ ನಾಯಕರುಗಳ ಸ್ಥಾನ ಬದಲಾಯಿತು.”


“ವಾಸ್ತವಾಗಿ, ಕ್ರಿಸ್ತನೇ ನನ್ನ ದಾರಿಗೆ ಅಡ್ಡಿಯಾದದ್ದು. ನೀಷೆಯಂತೆ ನಾನು ಸಹ ಅವನನ್ನು ಒಂದು ಹುಳುವಿನಂತೆ ಹೊಸಕಿ ಹಾಕಲು ಹಿಂದೆಮುಂದೆ ನೋಡುವುದಿಲ್ಲ.”


“ಹಲವು ಮಂದಿ ನನ್ನನ್ನು ಒಬ್ಬ ಸಾಹಸಿಗ ಎಂದು ಕರೆಯುತ್ತಾರೆ- ಹೌದು, ಒಂದು ಭಿನ್ನ ರೀತಿಯಿಂದ ಅದು ನಿಜವೆ, ತನ್ನ ಹಳಸಲು ಮಾತುಗಳನ್ನು ನಿಜಮಾಡಲು ತನ್ನನ್ನು ಅಪಾಯಕ್ಕೊಡ್ಡಿಕೊಳ್ಳುವವರಲ್ಲಿ ನಾನೂ ಒಬ್ಬ.”

ಉತ್ತರಭಾರತದಲ್ಲಿ ಎಲ್ಲಿಯೂ ರಜೆ ಇಲ್ಲ! ಕರ್ನಾಟಕದಲ್ಲಿ ಏನು ವಿಶೇಷ?

ದೇಶದ ಉಳಿದ ಭಾಗಗಳಲ್ಲಿ ಇನ್ನು ರಜೆ ಘೋಷಣೆ ಆಗಿಲ್ಲ. ನಮ್ಮಲ್ಲಿ ಮಾತ್ರ ಯಾಕೆ? ಅದೂ ಎರಡು ದಿನ?

ನಮ್ಮ ಸರಕಾರ ಜನರ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದೆಯೋ? ಉತ್ತರ-ಪ್ರದೇಶ ಸರಕಾರ ಜನರ ಪ್ರಾಣದ ಬಗ್ಗೆ ಅಷ್ಟೊಂದು ಮುತುವರ್ಜಿ ಹೊಂದಿಲ್ಲವೋ?

ರಜೆ ಕೊಡುವುದರಿಂದ ಮುಗ್ಧ ಮಕ್ಕಳಿಗೂ ವಿವಾದದ ಬಗ್ಗೆ ಕುತೂಹಲ ಮೂಡುವುದಿಲ್ಲವೇ? ಅಥವಾ ನಮ್ಮಲ್ಲಿ ಹೆಚ್ಚು ದುಬಾರಿ ಜೀವಗಳಿವೆಯೇ?

ನಿಮ್ಮ ಅಭಿಪ್ರಾಯವೇನು?

ಲಿನಕ್ಸ್ ಮತ್ತು ವಿಂಡೋಸ್ dual bootಗೆ ನನ್ನ ವಿಧಾನ

ಲಿನಕ್ಸ್ ಹಾಗೂ ವಿಂಡೋಸ್‌ನ್ನು ಒಟ್ಟಿಗೆ (dual boot) ಬಳಸುವಾಗ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತಿತ್ತು. ಲಿನಕ್ಸಿನಲ್ಲಿ ಏನೋ ಪ್ರಯೋಗ ಮಾಡುವುದಕ್ಕೆ ಹೋಗಿ grub ಹಾಳಾಗಿಬಿಟ್ಟರೆ ಅದನ್ನು ಸರಿಪಡಿಸುವ ತನಕ ಲಿನಕ್ಸೂ ಉಪಯೋಗಿಸುವುದಕ್ಕೆ ಆಗುತ್ತಿರಲಿಲ್ಲ, ವಿಂಡೋಸೂ ಬೂಟಾಗುತ್ತಿರಲಿಲ್ಲ. ಕೆಲವು ಸಲ ಈ ರೀತಿ ಕಿತಾಪತಿ ಮಾಡಿಟ್ಟು ಅಪ್ಪನಿಂದ ಬೈಸಿಕೊಳ್ಳುತ್ತಿದ್ದೆ. ಇದಕ್ಕೇನಾದರೂ ಪರಿಹಾರ ಇದೆಯೇ ಎಂದು ಯೋಚಿಸುತ್ತಿದ್ದಾಗ ಹೊಳೆಯಿತು ನೋಡಿ ಒಂದು ಐಡಿಯಾ! ನನ್ನ ಹತ್ತಿರ ಒಂದು ಹಳೆಯ ಹಾರ್ಡ್‌ಡಿಸ್ಕ್ ಇತ್ತು. ಆದರೆ ಅದರ ಜಂಪರ್‍ ಎಲ್ಲೋ ಕಳೆದು ಹೋಗಿತ್ತು. ಆಮೇಲೆ ಹಳೆಯ ಸಿಡಿ ಡ್ರೈವ್ ಒಂದರಿಂದ ಜಂಪರ್‍ ತೆಗೆದು ಇದಕ್ಕೆ ಹಾಕಿ ಮಾಸ್ಟರ್‍ ಡಿಸ್ಕ್ ಮಾಡಿದೆ.

"ಪ್ರೀತಿಯ ಪತ್ರ "

ಪ್ರಿಯಂವದೆ, ಇಲ್ಲಿ ಸೊಗಸಾದ ಚಳಿಗಾಲವೊಂದು ವೃಥಾ ಹೋಗುತ್ತಿದೆ. ನೀನಿಲ್ಲ. ಬಂದು ಹೋಗುತ್ತೇನೆಂದು ಮಾತು ಕೊಟ್ಟವಳು ನೀನು. ಪ್ರತೀ ಸಂಜೆ ಬರುವ ರೇಲಿನ ಹಾದಿ ಕಾಯುತ್ತೇನೆ. ನಾನಿರುವ ಜಾಗ ಊರಿನಿಂದ ದೂರ. ಸಂಜೆ ಹತ್ತಿರಾದಂತೆಲ್ಲ ಏನೋ ಸಂಭ್ರಮ. ಕುಳಿತಲ್ಲೇ ಕಾತರಗೊಳ್ಳುತ್ತೇನೆ. ಇಷ್ಟಕ್ಕೂ ಸಿಂಗಾರಗೊಳ್ಳಲು ನನ್ನಲ್ಲೇನಿದೆ? ಅದೇ ಮಾಸಿಹೋದ ತಿಳಿನೀಲಿ ಜೀನ್ಸ್ ಪ್ಯಾಂಟು. ಸದಾ ತೊಡುವ ಕಪ್ಪನೆಯ ದೊಗಳೆ ಅಂಗಿ. ಇಷ್ಟು ಪುರಾತನವಾದ ಇಂಥ ದೊಡ್ಡ ಮನೆಯಲ್ಲಿ ನಾನು ಒಬ್ಬಂಟಿಯಾಗಿ ಹೀಗೆ ಯಾಕಾದರೂ ಇದ್ದೇನೋ? ಬೆಳಗ್ಗೆ ಬೇಗನೆ ಎದ್ದು ಒಂದು ಟೀ ಕಾಯಿಸಿಕೊಳ್ಳುತ್ತೇನೆ. ಹಿಂದೆಯೇ ಹೊತ್ತಿಕೊಳ್ಳುವ ಸಿಗರೇಟು. ಕತ್ತಲಲ್ಲಿ ಬಂದು ತಾಕಿ ಹೋಗುವ ಹಕ್ಕಿಯ ಹಾಗೆ ಹಾಡೊಂದು ಸುಮ್ಮನೆ ನೆನಪಾಗುತ್ತದೆ. ಜೊತೆಯಲ್ಲೇ ನಿನ್ನ ಮೈಯ ಮಚ್ಚೆ. ಹಿತವಾಗಿ ಹಾಡಿಕೊಳ್ಳುತ್ತೇನೆ. ಹೊರಗಡೆ ಇನ್ನೂ ತಿಳಿಗತ್ತಲು. ಬೂಟು ಮೆಟ್ಟಿಕೊಂಡವನೇ ಬಂಗಲೆಯಾಚೆಗಿನ ಅರಾಜಕ ಕಾಡಿನಲ್ಲಿ ಗೊತ್ತು ಗುರಿಯಿಲ್ಲದೆ ಹೆಜ್ಜೆ ಹಾಕುತ್ತೇನೆ. ಹಾಡು ಹಿಂಬಾಲಿಸಿ ಬರುತ್ತದೆ.

"ಬಾಯ್ ಫ್ರೆಂಡ್"

ನಾಲ್ಕು ಜನ ಸ್ನೇಹಿತರು ೩೦ ವರ್ಷಗಳ ಬಳಿಕ ಒಂದು ಗುಂಡಿನ ಪಾರ್ಟಿಯಲ್ಲಿ ಭೇಟಿಯಾದರು..


ಕೆಲವು ಪೆಗ್ಗುಗಳ ಬಳಿಕ ಒಬ್ಬಾತ ಶೌಚಕ್ಕೆಂದು ಹೋದ.. ಉಳಿದ ಮೂವರು ತಮ್ಮ ಮಕ್ಕಳ ಬಗ್ಗೆ ಮಾತಾಡಲು ಶುರು ಮಾಡಿದರು.


 


ಮೊದಲನೆಯವ ಹೇಳಿದ ನನ್ನ ಮಗ ನನ್ನ ಹೆಮ್ಮೆಯ ಪುತ್ರ.....ನನ್ನ ಮಗ ಎಂ.ಬಿ.ಎ. ಮುಗಿಸಿ ಒಂದು ಪ್ರತಿಷ್ಟಿತ ಕಂಪನಿಯಲ್ಲಿ


ಉನ್ನತ ಹುದ್ದೆಯಲ್ಲಿದ್ದಾನೆ.  ಅವನು ಈಗ ಎಷ್ಟು ಸಿರಿವಂತನೆಂದರೆ ತನ್ನ ಸ್ನೇಹಿತನ ಹುಟ್ಟು ಹಬ್ಬಕ್ಕೆಂದು ಮರ್ಸಿಡಿಸ್ ಕಾರನ್ನು


ಉಡುಗೊರೆಯಾಗಿ ನೀಡಿದ್ದಾನೆ.


 


ಎರಡನೆಯವ "ಹೌದಾ' ಎಂದು ಉದ್ಗಾರ ತೆಗೆದು..ನನ್ನ ಮಗನು ಏನು ಕಮ್ಮಿಯಿಲ್ಲ...ಅವನು ಪೈಲಟ್ ಟ್ರೈನಿಂಗ್ ಮುಗಿಸಿ


ಈಗ ಒಂದು ದೊಡ್ಡ ವಿಮಾನ ಯಾನ ಕಚೇರಿಯಲ್ಲಿ ಕೆಲಸಕ್ಕೆ ಸೇರಿ ಈಗ ತನ್ನದೇ ಆದ ಒಂದು ವಿಮಾನ ಯಾನ ಕಂಪನಿ


ತೆರೆದಿದ್ದಾನೆ..ಅವನು ತನ್ನ ಸ್ನೇಹಿತನ ಹುಟ್ಟು ಹಬ್ಬದ ಸಲುವಾಗಿ ಒಂದು ಪ್ರತ್ಯೇಕ ವಿಮಾನವನ್ನೇ ಉಡುಗೊರೆಯಾಗಿ ನೀಡಿದ್ದಾನೆ.


 

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸೃಷ್ಟಿಸಿದ ಚಿತ್ರ ’ನವಿಲಾದವರು’

ಸೃಜನಶೀಲ ಅಭಿವ್ಯಕ್ತಿ ಎಂದೆಂದಿಗೂ ಯಾತನೆಯ ಚಟುವಟಿಕೆಯೇ ಆಗಿರುತ್ತದೆ. ಅಕ್ಷರವೋ ಕುಂಚವೋ ಆದರೆ ಒಂದು ಮಟ್ಟಕ್ಕೆ ಅಭಿವ್ಯಕ್ತಿಗೆ ಒಂದು ಚೌಕಟ್ಟನ್ನು ಒದಗಿಸಿಬಿಡಬಹುದು. ಅನುಭವ, ಸಂಸ್ಕಾರ ಇವೆರಡು ಸಂಕಟದೊಂದಿಗೆ ಬೆರೆತಾಗ ಆ ಸೃಜನಶೀಲ ಅಭಿವ್ಯಕ್ತಿ ಹೆಚ್ಚು ಅರ್ಥಪೂರ್ಣವಾಗಬಲ್ಲದು. ದೃಶ್ಯಮಾಧ್ಯಮ ಅನುಭವ, ಸಂಸ್ಕಾರಕ್ಕೆ ಮಾತ್ರ ಒದಗಿಬರುವ ಒಲಿದುಬರುವ ಸಾಧನವೇನಲ್ಲ. ಏಕೆಂದರೆ ವೆಚ್ಚ ಬರಿ ಕುಂಚಕ್ಕೆ, ಬಣ್ಣಕ್ಕೆ ಸೀಮಿತವಾಗಿರುವುದಿಲ್ಲ. ಹೆಚ್ಚು ಆರ್ಥಿಕ ಸಂಪನ್ಮೂಲ, ಮಾನವ ಸಂಪನ್ಮೂಲವನ್ನು ಬೇಡುವ ಚಟುವಟಿಕೆ-ದೃಶ್ಯಮಾಧ್ಯಮ.

ಯಾರಿಗೆ ಮಂದಿರಾ... ಯಾರಿಗೆ ಮಸೀದೀ....

ಬಲ್ಲಿರೇನಯ್ಯಾ.......

ಭಳಿರೇ ಪರಾಕ್ರಮ ಕಂಠೀರವಾ............!

ಅಖಂಡ ಭರತ ಖಂಡದ ಅಯೋಧ್ಯೆಯನ್ನು ಆಳಿ ಜನಮನಗೆದ್ದಿರುವ ಮರ್ಯಾದಾ ಪುರುಷೋತ್ತಮ ಯಾರೆಂದು ಬಲ್ಲೀರಿ.......?

ಭಗವಾನ್ ಶ್ರೀರಾಮ ಚಂದ್ರ ಎಂದು ಕೇಳಿಬಲ್ಲೆವೂ....

ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದೂ....

ಪೋಸ್ಟ್ ಮ್ಯಾನ್ ಸುಬ್ಬ

ಬೆಳಗ್ಗೆನೇ ಸುಬ್ಬ ಬಸ್ಟಾಂಡ್್ನಾಗೆ ನಿಂತಿದ್ದ. ಯಾಕಲಾ ಸುಬ್ಬ. ಯಾರಾದರೂ ಊರಿಂದ ಬರ್ತಾವ್ರೆ ಏನಲಾ. ಇಲ್ಲಾ ಕಲಾ ಬಸ್ಸಿಗೆ ಪೋಸ್ಟ್ ಚೀಲ ಬತ್ತದೆ ಕಾಯ್ತಾ ಇದೀನಿ ಅಂದ. ಸರಿ ಬಸ್ಸು ಬಂತು. ಒಂದು ಹತ್ತು ಚೀಲ ಪೋಸ್ಟ್ ಬಂತು. ಅದಷ್ಟನ್ನೂ ಸೈಕಲ್್ಗೆ ಹಾಕ್ಕೊಂಡು ಹತ್ತಕ್ಕೆ ಅಂತಾ ಹೋದ. ಮಗಂದು ಚೀಲಕ್ಕೆ ಚಪ್ಪಲಿ ಸಿಕ್ಕಾಕೊಂಡು ಧಪ್ ಅಂತಾ ಮಕಾಡೆ ಬಿದ್ದ. ಯಾಕಲಾ. ಏ ಥೂ ನಮ್ಮಪ್ಪ ನನ್ನ ಚಪ್ಪಲಿ ಹಾಕ್ಕೊಂಡು ಹೋಗವ್ರೆ ಅಂದ. ಮಗಂದು ಕಾಲಿಗಿಂತ ಎರಡು ಇಂಚು ಉದ್ದನೇ ಇತ್ತು.

ಯಾಕೆ ಹೀಗೆ?

ಯಾಕೆ ಹೀಗೆ?

ಅಬ್ಬಬ್ಬ ಎಷ್ಟು ಮಳೆ ಈ ಸಾರಿ .. ಕಳೆದ ವರ್ಷ ಹೀಗಿರಲಿಲ್ಲ. ಮಳೆಗಾಲ ಮುಗಿದರೆ ಸಾಕಾಗಿದೆ. ಹಾಗೆ ಚಳಿಗಾಲ ಬಂದಾಗ ಎಂದೂ ಇರದ ಈ ವರ್ಷದ ಚಳಿ ಅನ್ನಿಸುತ್ತೆ.. ಚಳಿಗಾಲ ಮುಗಿದು ಬಿಸಿಲು ಯಾವಾಗ ಬರುತ್ತೋ ಎಂದು. ಇನ್ನು ಬೇಸಿಗೆ ಕಾಲದ ಬಗ್ಗೆ ಅಂತು ಹೇಳುವ ಹಾಗೆ ಇಲ್ಲ. ಇದು ಬರಿ ಋತು ಗಳ ಬಗ್ಗೆ ಅಲ್ಲ. ಹಾಗೆ ನೋಡಿದರೆ ತಲೆ ನೋವು ಬಂದಾಗ ಅದೇ ಅತ್ಯಂತ ಯಾತನಮಯ ಖಾಯಿಲೆ ಅನ್ಸುತ್ತೆ. ಜ್ವರ ನೆಗಡಿ ಕೆಮ್ಮಲು ಎಲ್ಲ ತಲೆನೋವಿನ ಮುಂದೆ ಏನು ಇಲ್ಲ ಅನ್ನೋ ಹಾಗೆ. ಜ್ವರ ಬಂದಾಗ ಲಾಜಿಕ್ ಉಲ್ಟಾ ಆಗುತ್ತದೆ. ಯಾಕೆ ಹೀಗೆ?