ಲಿನಕ್ಸ್ ಮತ್ತು ವಿಂಡೋಸ್ dual bootಗೆ ನನ್ನ ವಿಧಾನ
ಲಿನಕ್ಸ್ ಹಾಗೂ ವಿಂಡೋಸ್‌ನ್ನು ಒಟ್ಟಿಗೆ (dual boot) ಬಳಸುವಾಗ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತಿತ್ತು. ಲಿನಕ್ಸಿನಲ್ಲಿ ಏನೋ ಪ್ರಯೋಗ ಮಾಡುವುದಕ್ಕೆ ಹೋಗಿ grub ಹಾಳಾಗಿಬಿಟ್ಟರೆ ಅದನ್ನು ಸರಿಪಡಿಸುವ ತನಕ ಲಿನಕ್ಸೂ ಉಪಯೋಗಿಸುವುದಕ್ಕೆ ಆಗುತ್ತಿರಲಿಲ್ಲ, ವಿಂಡೋಸೂ ಬೂಟಾಗುತ್ತಿರಲಿಲ್ಲ. ಕೆಲವು ಸಲ ಈ ರೀತಿ ಕಿತಾಪತಿ ಮಾಡಿಟ್ಟು ಅಪ್ಪನಿಂದ ಬೈಸಿಕೊಳ್ಳುತ್ತಿದ್ದೆ. ಇದಕ್ಕೇನಾದರೂ ಪರಿಹಾರ ಇದೆಯೇ ಎಂದು ಯೋಚಿಸುತ್ತಿದ್ದಾಗ ಹೊಳೆಯಿತು ನೋಡಿ ಒಂದು ಐಡಿಯಾ! ನನ್ನ ಹತ್ತಿರ ಒಂದು ಹಳೆಯ ಹಾರ್ಡ್‌ಡಿಸ್ಕ್ ಇತ್ತು. ಆದರೆ ಅದರ ಜಂಪರ್ ಎಲ್ಲೋ ಕಳೆದು ಹೋಗಿತ್ತು. ಆಮೇಲೆ ಹಳೆಯ ಸಿಡಿ ಡ್ರೈವ್ ಒಂದರಿಂದ ಜಂಪರ್ ತೆಗೆದು ಇದಕ್ಕೆ ಹಾಕಿ ಮಾಸ್ಟರ್ ಡಿಸ್ಕ್ ಮಾಡಿದೆ. ನನ್ನ ಕಂಪ್ಯೂಟರ್‌ನ ಹೊಸ ಹಾರ್ಡ್‌ಡಿಸ್ಕ್ ಡಿಸ್‌ಕನೆಕ್ಟ್ ಮಾಡಿ ಈ ಡಿಸ್ಕ್‌ನ್ನು ಕನೆಕ್ಟ್ ಮಾಡಿದೆ. ನಂತರ ಅದರಲ್ಲಿ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಂಡೆ. ಆಮೇಲೆ ಹೊಸ ಹಾರ್ಡ್‌ಡಿಸ್ಕ್‌ನ್ನೂ ಕನೆಕ್ಟ್ ಮಾಡಿದೆ. ಈಗ ವಿಂಡೋಸ್ ಬೂಟ್ ಆಗಬೇಕೆಂದರೆ BIOSನಲ್ಲಿ ಹಳೆಯ ಹಾರ್ಡ್‌ಡಿಸ್ಕ್ None ಎಂದು ಕೊಡುತ್ತೇನೆ. ಆಗ ಹೊಸ ಹಾರ್ಡ್‌ಡಿಸ್ಕಿನಿಂದ ವಿಂಡೋಸ್ ಬೂಟಾಗುತ್ತದೆ. ನನಗೆ ಲಿನಕ್ಸ್ ಉಪಯೋಗಿಸಬೇಕಿದ್ದರೆ BIOSನಲ್ಲಿ ಹಳೆಯ ಹಾರ್ಡ್‌ಡಿಸ್ಕ್‌ನ್ನು ಮಾಸ್ಟರ್ ಡಿಸ್ಕ್ ಎಂದೂ, ಹೊಸ ಹಾರ್ಡ್‌ಡಿಸ್ಕ್‌ನ್ನು None ಎಂದೂ ಕೊಡುತ್ತೇನೆ. ಆಗ ಹಳೆಯ ಹಾರ್ಡ್‌ಡಿಸ್ಕ್‌ನಿಂದ ಲಿನಕ್ಸ್ ಬೂಟಾಗುತ್ತದೆ. ತಮಾಷೆ ಅಂದ್ರೆ ಒಂದು ಸಲ ಲಿನಕ್ಸ್ ಅಥವಾ ವಿಂಡೋಸ್ ಬೂಟಾದ ನಂತರ ಹೊಸದು ಮತ್ತು ಹಳೆಯದು ಎರಡೂ ಹಾರ್ಡ್‌ಡಿಸ್ಕ್‌ನ್ನು ತೋರಿಸುತ್ತದೆ. ಹಾಗಾಗಿ ಯಾವ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಯಾವ ಡಿಸ್ಕಿನ ಮಾಹಿತಿ ಬೇಕಾದರೂ ಪಡೆಯಬಹುದು. ಯಾವುದಾದರೂ ಒಂದು ಡಿಸ್ಕನ್ನು BIOSನಲ್ಲಿ None ಎಂದು ಕೊಡದಿದ್ದರೆ ಯಾವುದರಿಂದಲೂ ಬೂಟಾಗುತ್ತಿಲ್ಲ. ಅದಕ್ಕೂ ಒಂದು ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇನೆ.
ಈ ಐಡಿಯಾಗಳೆಲ್ಲಾ ಹೇಗೆ ಹೊಳೆಯುತ್ತವೆ ಅಂತ ಕೆಲವೊಮ್ಮೆ ನನಗೇ ಆಶ್ಚರ್ಯವಾಗುತ್ತದೆ. ನಾನು ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ಒಂದಕ್ಷರ ಕಂಪ್ಯೂಟರ್ ಸೈನ್ಸ್ ಓದಿಲ್ಲ. ಆದರೂ ಕಂಪ್ಯೂಟರ್‌ನ ಮೇಲಿನ ತುಡಿತ ನಾನಾಗಿಯೇ ಹೊಸ ವಿಷಯಗಳನ್ನು ಕಲಿತುಕೊಳ್ಳುವಂತೆ ಮಾಡಿದೆ.
-ಪ್ರಸನ್ನ ಶಂಕರಪುರ
Comments
ಉ: ಲಿನಕ್ಸ್ ಮತ್ತು ವಿಂಡೋಸ್ dual bootಗೆ ನನ್ನ ವಿಧಾನ
In reply to ಉ: ಲಿನಕ್ಸ್ ಮತ್ತು ವಿಂಡೋಸ್ dual bootಗೆ ನನ್ನ ವಿಧಾನ by sriranjan
ಉ: ಲಿನಕ್ಸ್ ಮತ್ತು ವಿಂಡೋಸ್ dual bootಗೆ ನನ್ನ ವಿಧಾನ