ಪೋಸ್ಟ್ ಮ್ಯಾನ್ ಸುಬ್ಬ

ಪೋಸ್ಟ್ ಮ್ಯಾನ್ ಸುಬ್ಬ

ಬೆಳಗ್ಗೆನೇ ಸುಬ್ಬ ಬಸ್ಟಾಂಡ್್ನಾಗೆ ನಿಂತಿದ್ದ. ಯಾಕಲಾ ಸುಬ್ಬ. ಯಾರಾದರೂ ಊರಿಂದ ಬರ್ತಾವ್ರೆ ಏನಲಾ. ಇಲ್ಲಾ ಕಲಾ ಬಸ್ಸಿಗೆ ಪೋಸ್ಟ್ ಚೀಲ ಬತ್ತದೆ ಕಾಯ್ತಾ ಇದೀನಿ ಅಂದ. ಸರಿ ಬಸ್ಸು ಬಂತು. ಒಂದು ಹತ್ತು ಚೀಲ ಪೋಸ್ಟ್ ಬಂತು. ಅದಷ್ಟನ್ನೂ ಸೈಕಲ್್ಗೆ ಹಾಕ್ಕೊಂಡು ಹತ್ತಕ್ಕೆ ಅಂತಾ ಹೋದ. ಮಗಂದು ಚೀಲಕ್ಕೆ ಚಪ್ಪಲಿ ಸಿಕ್ಕಾಕೊಂಡು ಧಪ್ ಅಂತಾ ಮಕಾಡೆ ಬಿದ್ದ. ಯಾಕಲಾ. ಏ ಥೂ ನಮ್ಮಪ್ಪ ನನ್ನ ಚಪ್ಪಲಿ ಹಾಕ್ಕೊಂಡು ಹೋಗವ್ರೆ ಅಂದ. ಮಗಂದು ಕಾಲಿಗಿಂತ ಎರಡು ಇಂಚು ಉದ್ದನೇ ಇತ್ತು.

ಹತ್ತು ಹಳ್ಳಿಗೆ ನಮ್ಮದು ಒಂದೇ ಪೋಸ್ಟ್ ಆಫೀಸ್. ಮಗಾ ರಾತ್ರಿ ಹತ್ತಾದರೂ ಪೋಸ್ಟ್ ಹಂಚುತಾನೇ ಇರ್ತಾ ಇದ್ದ. ಯಡಿಯೂರಪ್ಪಂಗೆ ಸಾನೇ ಬಯ್ತಾ ಇದ್ದ. ಯಾಕಲಾ, ಲೇ ಯಡಿಯೂರಪ್ಪ ತಾನು ಸೈನ್ ಆಗಕ್ಕೆ ವಿಧವಾ ಪೆನ್ಸನ್, ಸಂಧ್ಯಾ ಸುರಕ್ಸಾ ಅಂತಾ ಹಿಂಗೆ ಸಾನೇ ಯೋಜನೆ ಮಾಡಿದಾನೆ ಅವೆಲ್ಲಾ ಹಂಚೋ ಅಷ್ಟೊತ್ತಿಗೆ ಇಷ್ಟು ಹೊತ್ತು ಆಯ್ತದೆ ಕಲಾ ಅಂದ. ಸರೀ ಅಷ್ಟೊತ್ತಿಗೆ ವಿಧವೆ ಗಂಗಮ್ಮ ಬಂದ್ಲು. ಬೀದಿ ದೀಪದಾಗೆ ಆ ಯಮ್ಮನ ಮನಿ ಆರ್ಡರ್ ಕೊಟ್ಟ. ನಿನ್ನ ಹೆಂಡ್ತಿಗೂ ಹಿಂಗೆ ದುಡ್ಡು ಬರಂಗೆ ಆಗ್ಲಿ ಅಂತಾ ಆಸೀರ್ವಾದ ಮಾಡಿದ್ಲು. ಏ ಥೂ. ಅಂದರೆ ನಾನು ಸಾಯಬೇಕಾ ಅಂದ. ಸರಿ ತೊಳಚ್ಯಾನಾಯ್ಕ ಬಂದು ನಂಗೆ ಯಾವುದು ಕಾಗಜ ಬಂದಿಲ್ವೇನ್ಲಾ ಅಂದ. ಬಂದಿಲ್ಲ ಕಲಾ ಅಂದ. ಅಂಗಾರೆ ನೀನೆ ಬರೆದು ಕಾಗಜ ಹಾಕಲಾ ಅಂದ. ಮಗನೇ ಹೋಗಲಾ ಅಂತಾ ಬಯ್ದ. ಸುಬ್ಬನ ಜೋಬ್ನಾಗೆ ಒಂದು ಸಾವಿರ ರೂಪಾಯಿ ಇತ್ತು . ಇದೇನಲಾ ಇಟೊಂದು ಕಾಸು ಮಡಿಗಿದಿಯಾ. ಲೇ ಪೆನ್ಸನ್ ಎಲ್ಲಾ ಕೊಟ್ಟಾಗ ಪಿರುತಿಗೆ ಅಂತಾ ಜನಾ ಹತ್ತು ರೂಪಾಯಿ ಕೊಡ್ತಾರೆ ಅಂದ. ಏ ಥೂ. ಮಕ್ಕಳ ನಿಮ್ಮಿಂದನೇ ಸರ್ಕಾರದ ಯೋಜನೆಗೆಳು ನೆಗೆದು ಬಿದ್ದು ಹೋಗ್ತಿರೋದು ಅಂದೆ.

ಬೆಳಗ್ಗೆನೇ ನಿಂಗನ ಚಾ ಅಂಗಡಿ ತಾವ ಸೇರಿದ್ವಿ. ಗೌಡಪ್ಪ ಬಂದೋನೆ ಒಂದು ಕಾಗಜ ಬರೆಯಲಾ ಅಂದ. ಏನ್ರೀ ಗೌಡ್ರೆ ಬಸಮ್ಮ ಊರಿಗೆ ಹೋಗವ್ಳೆ. ಅಲ್ಲಿ ಟವರ್ ಇಲ್ಲಾ ಕಲಾ ಅಂದ. ಸರಿ ಬೊಗಳಿರಿ ಅಂದ ಸುಬ್ಬ. ಲೇ ಬಸವಿ ನೀನು ಊರಿಗೆ ಹೋಗಿ ಸಾನೇ ದಿನಾ ಆಗೈತೆ. ಲಕ್ಸ್ಮೀ ಊಟನೇ ಮಾಡ್ತಾ ಇಲ್ಲಾ ಅಂದ. ಯಾರು ನಿಮ್ಮ ಮಗಳಾ ಅಲ್ಲಾ ಕಲಾ ನಮ್ಮ ಹಸ. ಏ ಥೂ. ಸರಿ ಮುಂದೆ ಹೇಳಿ. ಬಸಮ್ಮ ನೀನು ಸರಿಯಾದ ಟೇಮಿಗೆ ಮುದ್ದೆ ಹಂಗೇ ಬಸ್ಸಾರು ತಿನ್ನು. ಬೆಳಗ್ಗೆ ವಾಕಿಂಗ್ ಮಾಡು. ಇಲ್ಲಾ ಅಂದ್ರೆ ರಮ್ಯನ ತರಾ ಇದ್ದೋಳು ರಕ್ಸಿತಾ ಆಗೋಯ್ತ್ಯಾ. ಅಂಗೇ ಮಕ್ಕೊಬೇಕಾದ್ರೆ ಸೊಳ್ಳೆ ಪರದೆ ಕಟ್ಕೊ, ಇಲ್ಲಾ ಅಂದ್ರೆ ಚಿಕೂನ್ ಗುನ್ಯಾ ಬತ್ತದೆ. ಅಂಗೇ ಮನೆಯಿಂದ ಹೊರ ಹೋಗಬೇಕಾದ್ರೆ ಸಾನೇ ಪೌಡರ್ ಹಚ್ಕೊ ಜನಕ್ಕೆ ನೀನು ಯಾರು ಅಂತಾ ಗೊತ್ತಾಗಬಾರದು ಅಂತಿದ್ದಾಗೆನೇ ಇದಕ್ಕೆಲ್ಲಾ ಇನ್ ಲ್ಯಾಂಡ್ ಲೆಟರ್ ಆಗಕ್ಕಿಲ್ಲಾ. ಇದನ್ನ A4 ಸೀಟ್ನಾಗೆ ಬರೆದು ರಿಜಿಸ್ಟರ್ ಪೋಸ್ಟ್ ಮಾಡಬೇಕು ಅಂದಾ ಸುಬ್ಬ.

ಅಟ್ಟೊತ್ತಿಗೆ ನಿಂಗ ಚಾ ಹುಯ್ಯದು ಬಿಟ್ಟು ನನಗೂ ಒಂದು ಕಾಗಜ ಬರೆದು ಕೊಡಲಾ ಅಂದ. ಸರಿ ಹೇಳು. ಅಂಗೇ ಫ್ರೀ ಚಾ ಕೊಡು ಅಂದ ಸುಬ್ಬ. ಯಾರಿಗಲಾ ಇದು. ನಮ್ಮವ್ವಂಗೆ ಕಲಾ ಅಂದ ನಿಂಗ. ಅವ್ವಾ ಹೆಂಗೆ ಇದೀಯಾ. ನಾನು ಸಂದಾಕಿದೀನಿ. ನೀನು ಸಂದಾಕಿದ್ದೀಯಾ ಎಂದು ನಂಬಿರುತ್ತೇನೆ. ಪೈಲ್ಸ್ ಇರೋದ್ರಿಂದ ಸಾನೇ ಮೆಣಸಿನ ಕಾಯಿ ತಿನ್ಬೇಡ. ಫಾರಿನ್ ಸೌಚಾಲಯಕ್ಕೆ ಹೋಗು. ಮುಂದೆ ಹೇಳಲಾ. ನಮ್ಮ ಮನ್ಯಾಗೆ ಪಾರ್ವತಿ ಕರಾ ಹಾಕಿದ್ಲು. ಹುಟ್ಟಿ ಒಂದು ಗಂಟೆಗೆ ಸತ್ತೋಯ್ತು. ಹೊಸದಾಗಿ ಸಾಲ ಮಾಡಿ ತಂದಿದ್ದ ಎಮ್ಮೆ ಹುಲ್ಲು ಜಾಸ್ತಿ ತಿಂದು ನಿಗರ್್ಕಂಡೈತೆ. ಆಮ್ಯಾಕೆ ನಮ್ಮ ಮನೆ ಪಕ್ಕದೋಳು ರಂಗಿ ರಾಜನ ಜೊತೆ ಓಡೋದ್ಲು. ಇನ್ನು ನನ್ನ ತಮ್ಮ ದೊಡ್ಡ ನಿಂಗ. ಮರದಿಂದ ಬಿದ್ದು ಕಾಲು ಮುರಿದುಕೊಂಡವ್ನೆ. ಆಮ್ಯಾಕೆ ಬೆಳಗ್ಗೆ ಇಂದಾ ನಂಗೂ ಸಾನೇ ಹೊಟ್ಟೆ ನೋವು. ಒಂದು ಹತ್ತು ಕಿತಾ ಕೆರೆತಾವ ಹೋಗಿ ಬಂದಿದೀನಿ.ಈಗ ಆಸ್ಪತ್ರಾಗೆ ಹೋಗ್ತಾ ಇದೀನಿ ಚಾ ಅಂಗಡಿ ನೀರು ತುಂಬಿ ಬರೀ ಸ್ಟೌವ್ ಮಾತ್ರ ಉಳಕೊಂಡೈತೆ  ಅಂದ ನಿಂಗ. ಅಯ್ಯೋ ನಿನ್ನ ಮಕ್ಕೆ ಹಳೇ ಕಲಗಚ್ಚು ಹುಯ್ಯಾ. ನೋಡಲಾ ಇಷ್ಟೆಲ್ಲಾ ಬರೆಯೋದಕ್ಕಿಂತ "start immidietly. come to halli" ಅಂತಾ ಒಂದು ಟೆಲಿಗ್ರಾಂ ಕೊಡು ಸಾಕು ಅಂದ ಸುಬ್ಬ.

ಅಟ್ಟೊತ್ತಿಗೆ ಗೌಡಪ್ಪ ಬಂದೋನು ಲೇ ನನ್ನ ಎರಡನೇ ಹೆಂಡರಿಗೆ ವಿಧವಾ ಪೆನ್ಸನ್ ಬಂದಿಲ್ಲಾ ಕಲಾ ಅಂದ. ಏ ನೀವು ಬದುಕೇ ಇದೀರಲ್ರಿ. ಲೇ ಅದಕ್ಕೆ ಗಂಡ ಬದುಕೇ ಇರಬೇಕು ಅಂತಾ ಏನು ಇಲ್ಲಾ ಯಾರು ಬೇಕಾದ್ರೂ ತಗೋಬೋದು ಅಂದ. ಏ ಥೂ. ಮಗಾ ಗೌಡಪ್ಪ ಮನೇಲ್ಲಿ ಇರೋರಿಗೆಲ್ಲಾ ಪೆನ್ಸನ್ ಮಾಡಿಸಿದ್ದ. ಏ ಥೂ.

ಸರಿ ಸುಬ್ಬ ಬೆಳಗ್ಗೆನೇ ಜಮೀನಿಗೆ ಹೊಂಟಿದ್ದ. ಯಾಕಲಾ. ಪೋಸ್ಟ್ ಆಫೀಸ್ ಬಿಟ್ಟೇನ್ಲಾ ಅಂದೆ. ಹೂಂ ಕಲಾ. ಎಲ್ಲಾರಿಗೂ ನಾನೇ ಕಾಗಜ ಬರೆದು ಕೊಡೋದು ನೋಡಿದ ಆಫೀಸರ್. ಹಿಂಗೆ ಬಿಟ್ರೆ ನನ್ನ ಬುಡಕ್ಕೆ ಬತ್ತಾನೆ ಅಂತಾ ಕೆಲಸದಿಂದ ತೆಗೆದಿದಾರೆ ಅಂದ.

 

Rating
No votes yet

Comments