ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸೃಷ್ಟಿಸಿದ ಚಿತ್ರ ’ನವಿಲಾದವರು’

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸೃಷ್ಟಿಸಿದ ಚಿತ್ರ ’ನವಿಲಾದವರು’

ಬರಹ

ಸೃಜನಶೀಲ ಅಭಿವ್ಯಕ್ತಿ ಎಂದೆಂದಿಗೂ ಯಾತನೆಯ ಚಟುವಟಿಕೆಯೇ ಆಗಿರುತ್ತದೆ. ಅಕ್ಷರವೋ ಕುಂಚವೋ ಆದರೆ ಒಂದು ಮಟ್ಟಕ್ಕೆ ಅಭಿವ್ಯಕ್ತಿಗೆ ಒಂದು ಚೌಕಟ್ಟನ್ನು ಒದಗಿಸಿಬಿಡಬಹುದು. ಅನುಭವ, ಸಂಸ್ಕಾರ ಇವೆರಡು ಸಂಕಟದೊಂದಿಗೆ ಬೆರೆತಾಗ ಆ ಸೃಜನಶೀಲ ಅಭಿವ್ಯಕ್ತಿ ಹೆಚ್ಚು ಅರ್ಥಪೂರ್ಣವಾಗಬಲ್ಲದು. ದೃಶ್ಯಮಾಧ್ಯಮ ಅನುಭವ, ಸಂಸ್ಕಾರಕ್ಕೆ ಮಾತ್ರ ಒದಗಿಬರುವ ಒಲಿದುಬರುವ ಸಾಧನವೇನಲ್ಲ. ಏಕೆಂದರೆ ವೆಚ್ಚ ಬರಿ ಕುಂಚಕ್ಕೆ, ಬಣ್ಣಕ್ಕೆ ಸೀಮಿತವಾಗಿರುವುದಿಲ್ಲ. ಹೆಚ್ಚು ಆರ್ಥಿಕ ಸಂಪನ್ಮೂಲ, ಮಾನವ ಸಂಪನ್ಮೂಲವನ್ನು ಬೇಡುವ ಚಟುವಟಿಕೆ-ದೃಶ್ಯಮಾಧ್ಯಮ.

ಹೆಂಡತಿಯ ವಡವೆಗಳನ್ನು ಅಡವಿಟ್ಟು ಸುಧೀರ್ಘವಾದ ನಾಲ್ಕು ವರ್ಷಗಳ ಸತತ ಪ್ರಯತ್ನಗಳ ಪರಿಣಾಮವಾದ ಪಥೇರ್ ಪಾಂಚಾಲಿ ಪ್ರೇಕ್ಷಕನಿಗೆ ಇಂದಿಗೂ ಒಂದು ಅನುಭವವನ್ನು ಕೊಡಬಲ್ಲ ಅಮರ ಕೃತಿಯಾಗುಳಿದಿದೆ. ವ್ಯಕ್ತಿಗತವಾದ ಪ್ರಯತ್ನಗಳು ಸಾಮೂಹಿಕವಾದಾಗ ಅನೇಕ ಮಜಲುಗಳಿಗೆ ವಿಸ್ತರಿಸಿಕೊಳ್ಳುತ್ತಲೇ ಸಾಮೂಹಿಕ ಧ್ವನಿಯನ್ನು ಪಡೆಯುತ್ತಲೇ ಸಾಮಾನ್ಯ ಮನುಷ್ಯನಿಗೆ ಅಸಾಧ್ಯವೂ ಆಗಿಬಿಡುತ್ತವೆ. ಸಿನಿಮಾ, ವ್ಯಕ್ತಿಯ ಕನಸನ್ನು ಅಭಿವ್ಯಕ್ತಿಯ ಸಂಕಟವನ್ನು ತುಳಿದುಬಿಡುವಂಥಹ ಉದ್ದಿಮೆ. ವ್ಯಕ್ತಿ ಇಲ್ಲಿ ನಗಣ್ಯ. ಸಮೂಹವೂ ಒಂದು ದೊಡ್ಡ ಅಡಚಣೆ. ಇಂಥಹ ಸಂದರ್ಭಗಳಲ್ಲಿ ನೂರು ಸಾವಿರ ಲಕ್ಷ ದಶಲಕ್ಷ ಕೋಟಿ ದಶಕೋಟಿ ಮತ್ತು ನೂರುಕೋಟಿ ಎನ್ನುವುದು ಉದ್ದಿಮೆಯಲ್ಲಿ ಸರಳ ಅಂಕೆಗಳಾಗಿಬಿಟ್ಟಿವೆ. ವ್ಯಕ್ತಿಯೊಡನೆಯೆ, ನೂರು ಸಾವಿರಗಳು ನಗಣ್ಯವಾಗಿಬಿಟ್ಟಿವೆ. ಹಾಸ್ಯಾಸ್ಪದವೂ ಆಗಿವೆ.

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ ೧ ಗಂಟೆ ೧೦ ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ ’ನವಿಲಾದವರು’ ಚಿತ್ರವನ್ನು ಹಾಸ್ಯಾಸ್ಪದ ಚಟುವಟಿಕೆ ಎನ್ನಬೇಕೆ? ಅಥವ ಕೆಟ್ಟ ವಿಜೃಂಭಣೆಯ, ಅನೈತಿಕ ಸಂಭಾವನೆ/ವೆಚ್ಚದ ವಿರುದ್ಧ ಎತ್ತಿರುವ ಅರ್ಥಪೂರ್ಣ ಪ್ರಶ್ನೆ ಎಂದೆನ್ನಬೇಕೆ? ಈ ಪ್ರಶ್ನೆಗಳನ್ನು ಹೆಚ್ಚು ಮಹತ್ವಪೂರ್ಣ ಚರ್ಚೆಗೆ ಒಡ್ಡುವ ಆಶಯದೊಂದಿಗೆ ನವಿಲಾದವರು ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ (http://www.samvaada.com)ಏರ್ಪಡಿಸಿದೆ. ಗಿರಿರಾಜ್‌ರವರು ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.

ಸಂವಾದ ಮತ್ತು ಚರ್ಚೆಯಲ್ಲಿ ಭಾಗವಹಿಸುವವರು:
‘ನವಿಲಾದವರು ಚಿತ್ರತಂಡ’
ಶಶಾಂಕ್, ಚಿತ್ರ ನಿರ್ದೇಶಕರು
ಪಿ ಶೇಷಾದ್ರಿ, ಚಿತ್ರ ನಿರ್ದೇಶಕರು
ವೇಲು, ಲಹರಿ ಆಡಿಯೋ ಮಾಲೀಕರು
ಅಮಾನುಲ್ಲಾ, ಹಿರಿ-ಕಿರು ತೆರೆ ನಟ
ಸುಚೇಂದ್ರ ಪ್ರಸಾದ್, ನಟ-ನಿರ್ದೇಶಕ
ದಿನಾಂಕ: ಅಕ್ಟೋಬರ್ ೨, ಶನಿವಾರ

ಸಮಯ: ಸಂಜೆ ೫ಕ್ಕೆ

ಸ್ಥಳ:
ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರ.
ನಂ.೧೫೧, ೭ನೇ ಕ್ರಾಸ್, ಟೀಚರ್ಸ್ ಕಾಲನಿ, ೧ನೇ ಫೇಸ್
ದಯಾನಂದ ಸಾಗರ್ ಕಾಲೇಜ್, ವಸುಧಾ ಭವನದ ಎದುರು,
ಬೆಂಗಳೂರು-೭೮

ಕಾರ್ಯಕ್ರಮಕ್ಕೆ ನೊಂದಾವಣೆ ಕಡ್ಡಾಯ. ನೊಂದಾಯಿಸಲು ಸಂಪರ್ಕಿಸಿ:
ಅರೇಹಳ್ಳಿ ರವಿ: 99004 39930
ಕಿರಣ್ ಎಂ: 97317 55966

ತಾಂತ್ರಿಕ ವರ್ಗ:

ನಿರ್ದೇಶಕ: ಗಿರಿರಾಜ್ ಬಿ ಎಂ
ಸಂಗೀತ ನಿರ್ದೇಶಕ: ಆಶ್ಲೇಯ - ಅಭಿಲಾಷ್
ಛಾಯಾಗ್ರಹಣ: ಕ್ಸೇವಿಯರ್
ಸಂಕಲನ : ಪ್ರಕಾಶ್ ಕೆ ಎಂ
ನಿರ್ಮಾಪಕರು:ಭೂಮಿ