ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಯೋಧ್ಯೆ ಪ್ರಕರಣ : ನಿನ್ನೆ ಮತ್ತು ಇಂದು ನಾನು ಕಂಡದ್ದು


  ಅಯೋಧ್ಯೆ ತೀರ್ಪು ಹೊರಬೀಳಲಿರುವ ಇಂದು, ಅಂದರೆ ಸೆಪ್ಟೆಂಬರ್ ೩೦ರಂದು, ಮಧ್ಯಾಹ್ನ ೧೨ ಗಂಟೆಗೀಗ ಈ ಲೇಖನ ಬರೆಯಲು ಕುಳಿತಿದ್ದೇನೆ.

ರಾಮ್ ಅಲ್ಲಾ ಭಾಯೀ ಭಾಯೀ

ಅರೆ ಏ ಕ್ಯಾ ರಾಮ್ ನಮ್ದೂಗೆ ಸಲುವಾಗಿ ಭಾರತದಾಗೆ ಜನ ಕಿತ್ತಾಡ್ತವ್ರೆ. ಅದೂ ಒಂದು ಎರಡೆ ಜಾಗಕ್ಕೆ, ಏ ಅಚ್ಚಾ ನಹೀ ಭಯ್ಯಾ. ಹೌದು ಅಲ್ಲಾ ನೀವು ಹೇಳಿದ್ದು ಸರೀ ಇದೆ. ನಮಗೆ ವಿಶಾಲವಾಗಿ ಇಲ್ಲಿ ಜಾಗ ಇರೋ ಬೇಕಾದ್ರೆ ಆ ಎರಡು ಎಕರೆಯಲ್ಲಿ ಏನು ಮೆಕ್ಕೆ ಜೋಳ ಬೆಳೆಯಬೇಕಾಗಿದೆಯಾ. ಅದೂ ಅಲ್ಲದೆ ಅದೂ ನನ್ನ ತಮ್ಮನ ಆಸ್ತಿ ಭರತಂದು. ಹಿಸ್ಸೆ ಆಗಿ. ಖಾತೆ ಏರಿಸಿ. ಪಾಣಿನೂ ಅವನ ಹೆಸರಿಗೇನೇ ಇದೆ. ಇದರ ಬಗ್ಗೆ ನಾನು ಮತ್ತೆ ರೀ ಎಂಟ್ರಿ ಕೊಟ್ಟರೆ ನಮ್ಮಮ್ಮ ಉಗೀತಾಳೆ ಅಂದರು ದೇವತಾ ಪುರಷ ರಾಮ್. ನಮ್ದೂ ಅದೇ ಭಯ್ಯಾ. ಮೆಕ್ಕಾ ಮದೀನಾದಾಗೆ ನಮ್ದೂಕೆ ದೊಡ್ಡ ಜಾಗ ಇದೆ. ಇಲ್ಲಿ ಬಂದು ನಾವು ಏನು ಮಾಡಬೇಕು. ಅದೂ ಅಲ್ಲದೆ ಕಳೆದ ಒಂದು ವರ್ಷದಿಂದ ಸ್ಪೈನಲ್ ಕಾರ್ಡ್ ಪ್ರಾಬ್ಲಮ್ ಇರೋದ್ರಿಂದ ಓಡಾಡಕ್ಕೂ ಆಗ್ತಾ ಇಲ್ಲ.

ಸೌರ ವಿಕಿರಣದಿಂದ ದೂರದರ್ಶನ ಪ್ರಸಾರದಲ್ಲಿ ವ್ಯತ್ಯಯ

ಬೆಳಿಗ್ಗೆ ಈ-ಟಿವಿ ಕನ್ನಡದಲ್ಲಿ ಕೆಳಗೆ ಒಂದು ಸಾಲು ಬರುತ್ತಿತ್ತು. "ಸೌರ ವಿಕಿರಣಗಳ ಪರಿಣಾಮ ಇಂದು ಬೆಳಿಗ್ಗೆ 11-38ರಿಂದ 11-50ರ ವರೆಗೆ ಪ್ರಸಾರದಲ್ಲಿ ವ್ಯತ್ಯಯವಾಗಬಹುದು". ಏನಾದರೂ ವ್ಯತ್ಯಯವಾಗಬಹುದೇ ಎಂದು ಕಾದು ಕುಳಿತಿದ್ದೆ, 11-38am ಆದ ಕೂಡಲೇ ಪ್ರಸಾರದಲ್ಲಿ ಅಡಚಣೆ ಉಂಟಾಯಿತು. ಈಗಲೂ ಅದೇ ರೀತಿ ತೊಡಕಾಗಿ ಪ್ರಸಾರವಾಗುತ್ತಿದೆ. ಎಷ್ಟು ಹೊತ್ತಿಗೆ ಸರಿಯಾಗುತ್ತದೆಯೋ ನೋಡಬೇಕು. ಉಳಿದ ಚಾನಲ್‌ಗಳಿಗೂ ಅದೇ ರೀತಿ ಆಗಿದೆ.

 

-ಪ್ರಸನ್ನ. ಶಂಕರಪುರ

ದಯ ತೋರಲಿದುವೆ ವೇಳೆಯು, ದಾಶರಥಿ!

ದಯ ತೋರಲಿದುವೆ ವೇಳೆಯು, ದಾಶರಥೀ ||

 

ಜಗದ ಬವಣೆಯೆಂಬಾನಯ
ಸಿಂಗದೊಲು ನೀನಳಿಸುವೆ


ಜಗದಯ್ಯ ಆ ಬೊಮ್ಮನಿಗು
ಸೊಗಸಿನಲೆ ತೊಡಕಿಳಿಸಿಹ ನೀ || ದಯ ತೋರಲಿದುವೆ ವೇಳೆಯು! ||

 

ಮುನ್ನ ನೀ ಕೊಟ್ಟಾಣತಿಯನು
ಮನಸಾರೆ ನಿದಾನದಲಿ ನಾ
ಸನ್ನಡತೆಯಲಿ ಪಾಲಿಸಿರಲು ಈ
-ಗೆನ್ನ ಬಳಿಸಾರಿ ಈ ತ್ಯಾಗರಾಜನಿಗೆ || ದಯ ತೋರಲಿದುವೆ ವೇಳೆಯು! ||

 

-ಹಂಸಾನಂದಿ

 

(ತ್ಯಾಗರಾಜರ ಗಾನವಾರಿಧಿ ರಾಗದ, ’ದಯಜೂಚುಟಕಿದಿ ವೇಳರಾ’ ಎಂಬ ರಚನೆಯ ಅನುವಾದ )

ನಾ ಕಂಡ ನೀ

ಎರಡುವರುಷ ಹಿಂದೆ ಬರೆದ ಕವನಕ್ಕೆ ಇಂದು ಸಂಪದದಲ್ಲಿ ಪ್ರಕಟವಾಗುವ ಭಾಗ್ಯ !!!!!

 

ಒಂದೆಡೆ ನಿಂತಿರುವ ನೀರು ನಾನು
ಬೇರೆಡೆಗೆ ಹರಿಯುತ ಸಾಗಿದೆ ನೀನು
ಕೆರೆ ಸರೋವರ ಇಲ್ಲ ನಾ ಕಡಲೋ..
ತೊರೆ ಝರಿ ಇಲ್ಲ ನೀ ನದಿಯೋ ..
ಹರಿಯುವ ನೀರಾದರು ನೀನು
ಬಂದು ಸೇರುವೆ ಈ ಕಡಲು

 

 

ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!

ಮಂದಿರವಿದ್ದಿತ್ತೋ ಅಥವಾ ಮಸೀದಿಯಿದ್ದಿತ್ತೋ ಎಂದು ನಿರ್ಧರಿಸುವುದು ಆದರೂ ಕಷ್ಟ,
ಆ ಸ್ಥಳ ಮಾತ್ರ ನಿಜವಾಗಿಯೂ ನಮಗೆ ಸದಾ ಇತ್ತು ಮತ್ತು ಸದಾ ಇರುತ್ತದೆ ಆಗಿ ವಿಶಿಷ್ಟ;

ಬೇರಾವ ಸ್ಥಳವೂ ಇಷ್ಟು ಸುದೀರ್ಘ ಕಾಲ ಇದ್ದಿರಲಿಲ್ಲವೇನೋ ಈ ರೀತಿ ಸುದ್ದಿಯಲ್ಲಿ,
ಇನ್ನಾವ ಸ್ಥಳವೂ ನಮ್ಮನ್ನು ಬಂಧಿಸಿರಲಿಲ್ಲವೇನೋ ಈ ರೀತಿ ಭಾವನೆಗಳ ಸುಳಿಯಲ್ಲಿ;

ಅನ್ಯರನು ಸಾಕ್ಷಿ ಮತ್ತು ಬುದ್ಧಿವಂತಿಕೆಯಿಂದ ಸೋಲಿಸುವುದು ಅಲ್ಲ ಕಣ್ರೀ ಮಹತ್ಕಾರ್ಯ,
ತೆರೆದ ಹೃದಯದೊಂದಿಗೆ ಅನ್ಯರನು ಆದರಿಸುವುದೇ ನಾವೆಲ್ಲರೂ ಮಾಡಬೇಕಾದ ಕಾರ್ಯ;
 
ನ್ಯಾಯಾಲಯದ ತೀರ್ಪು ಯಾವೊಂದು ಪಕ್ಷಕ್ಕೂ ಅಸ್ವೀಕಾರ್ಹವೆಂಬುದು ನಿಜದಿ ಸುಸ್ಪಷ್ಟ,

ದುರಂತ ನಾಯಕ...

ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪. ನಿಧನ - ೩೦ ಸೆಪ್ಟೆಂಬರ್ ೧೯೯೦.

 

ಇಂದಿಗೆ ಸರಿಯಾಗಿ ೨೦ ವರ್ಷಗಳು...ನಮ್ಮ ನಿಮ್ಮೆಲ್ಲರ ಮೆಚ್ಚಿನ ನಾಯಕ ಕರಾಟೆ ಕಿಂಗ್, ಆಟೋ ರಾಜ, ಸಾಂಗ್ಲಿಯಾನ ಶಂಕರ್ ನಾಗ್

ಅವರು ಭೌತಿಕವಾಗಿ ಅಗಲಿದ ದಿನ.. ಕನ್ನಡ ಚಿತ್ರರಂಗವನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ ಖ್ಯಾತಿ ಇವರಿಗೆ ಸಲ್ಲುವುದು..ನಟನಾಗಿ,

ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ...ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ

ಪಾದಾರ್ಪಣೆ ಮಾಡಿದ ಈತ ಮತ್ತೆ ತಿರುಗಿ ನೋಡಲಿಲ್ಲ..ಮಿಂಚಿನ ಓಟ ಚಿತ್ರದ ಮೂಲಕ ನಿರ್ದೇಶಕನಾಗಿ ಪ್ರಥಮ ಪ್ರಯತ್ನದಲ್ಲೇ

ಏಳು ರಾಜ್ಯ ಪ್ರಶಸ್ತಿ ಗಳಿಸಿದ ಪ್ರತಿಭಾವಂತ. ಇವರ ನಿರ್ದೇಶನಕ್ಕೆ ಉದಾಹರಣೆಗಳು ಮಿಂಚಿನ ಓಟ, ಜನ್ಮ ಜನ್ಮದ ಅನುಬಂಧ, ಆಕ್ಸಿಡೆಂಟ್,

ಗೀತ, ಒಂದು ಮುತ್ತಿನ ಕಥೆ....ಇವರ ನಟನಾ ಕೌಶಲ್ಯದ ಬಗ್ಗೆ ಎರಡನೇ ಮಾತೆ ಬೇಡ...ನೋಡಿ ಸ್ವಾಮಿ ನಾವಿರೋದೆ ಹೀಗೆ, ಸಾಂಗ್ಲಿಯಾನ

ಇಬ್ಬಗೆ

ಇಬ್ಬಗೆ


------


 


ನನ್ನ ಪಕ್ಕ ಕೂತಿದ್ದವನ ಮುಖದಲ್ಲಿ ಬೆವರಿನ ಸೆಲೆಗಳೊಡೆಯುತ್ತಿದ್ದವು. ನಾನು "ಮಾದೇಶ್, ಎ.ಸಿ ಆನ್ ಮಾಡು" ಎಂದಾಗ ಆತ ನನ್ನನ್ನು ನೋಡಿ ಕಿಟಕಿಯ ಕಡೆ ಮುಖ ಮಾಡಿ ಮೌನಿಯಾದ. ಮಾದೇಶ ಎ.ಸಿ ಆನ್ ಮಾಡಿದ. ಬೆವರಿಂಗಲು ಹತ್ತು ನಿಮಿಷ ಹಿಡಿಯಿತು.


 


ಕಾರು ಸಾಗುತ್ತಿತ್ತು. ಮಾದೇಶ ಏ.ಸಿ ಆಫ಼್ ಮಾಡಿ ಅರ್ಧ ಗಂಟೆ ಆಗಿತ್ತು. ಬೆವರಿನ ಸೆಲೆಗಾಗಿ ನಾನು ಪಕ್ಕದವನ ಮುಖ ಹುಡುಕಿದೆ. ಸಿಗಲಿಲ್ಲ. ಇದ್ದಕ್ಕಿದ್ದಂತೆ ಆತ ಕಾರ್ ನಿಲ್ಲಿಸುವಂತೆ ಕೈಸನ್ನೆ ಮಾಡಿದ. ನಾನು ಹೊರಗೆ ನೋಡಿದೆ. ಶಿರಾಡಿ ಘಾಟಿಯ ನಡುವೆ ಎಲ್ಲೋ. ಕಾರಿನಿಂದ ಇಳಿದವನೇ, ಹಿಂದಿನ ದಿಕ್ಕಿನಲ್ಲಿ ಓಡಲು ಶುರು ಮಾಡಿದ. ನಾನು ಓಡಿದೆ. ಎರಡು ನಿಮಿಷ ಓಡಿ, ಪಕ್ಕೆ ಹಿಡಿದುಕೊಂಡು ನಿಂತು ಏದುತ್ತಿದ್ದ. ನಾನೂ ನನ್ನ ಹೊಟ್ಟೆ ಹಿಡಿದುಕೊಂಡು ಅವನ ಮುಂದೆ ನಿಂತೆ. ಆಕಾಶ ನೋಡುತ್ತ ಕಣ್ಣು ಮುಚ್ಚಿಕೊಂಡು ಕಾರ್ ಕಡೆಗೆ ಬಿಸಿಲಿನಲ್ಲಿ ಹೊಳೆಯುತ್ತಿದ್ದ ಹೊಸ ಡಾಂಬರಿನ ವಾಸನೆ ಮೂಸುತ್ತ ನಡೆದ.