ದುರಂತ ನಾಯಕ...

ದುರಂತ ನಾಯಕ...

ಬರಹ

ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪. ನಿಧನ - ೩೦ ಸೆಪ್ಟೆಂಬರ್ ೧೯೯೦.

 

ಇಂದಿಗೆ ಸರಿಯಾಗಿ ೨೦ ವರ್ಷಗಳು...ನಮ್ಮ ನಿಮ್ಮೆಲ್ಲರ ಮೆಚ್ಚಿನ ನಾಯಕ ಕರಾಟೆ ಕಿಂಗ್, ಆಟೋ ರಾಜ, ಸಾಂಗ್ಲಿಯಾನ ಶಂಕರ್ ನಾಗ್

ಅವರು ಭೌತಿಕವಾಗಿ ಅಗಲಿದ ದಿನ.. ಕನ್ನಡ ಚಿತ್ರರಂಗವನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ ಖ್ಯಾತಿ ಇವರಿಗೆ ಸಲ್ಲುವುದು..ನಟನಾಗಿ,

ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ...ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ

ಪಾದಾರ್ಪಣೆ ಮಾಡಿದ ಈತ ಮತ್ತೆ ತಿರುಗಿ ನೋಡಲಿಲ್ಲ..ಮಿಂಚಿನ ಓಟ ಚಿತ್ರದ ಮೂಲಕ ನಿರ್ದೇಶಕನಾಗಿ ಪ್ರಥಮ ಪ್ರಯತ್ನದಲ್ಲೇ

ಏಳು ರಾಜ್ಯ ಪ್ರಶಸ್ತಿ ಗಳಿಸಿದ ಪ್ರತಿಭಾವಂತ. ಇವರ ನಿರ್ದೇಶನಕ್ಕೆ ಉದಾಹರಣೆಗಳು ಮಿಂಚಿನ ಓಟ, ಜನ್ಮ ಜನ್ಮದ ಅನುಬಂಧ, ಆಕ್ಸಿಡೆಂಟ್,

ಗೀತ, ಒಂದು ಮುತ್ತಿನ ಕಥೆ....ಇವರ ನಟನಾ ಕೌಶಲ್ಯದ ಬಗ್ಗೆ ಎರಡನೇ ಮಾತೆ ಬೇಡ...ನೋಡಿ ಸ್ವಾಮಿ ನಾವಿರೋದೆ ಹೀಗೆ, ಸಾಂಗ್ಲಿಯಾನ

ಸಾಂಗ್ಲಿಯಾನ - ೨, ತರ್ಕ, ಸಿ.ಬಿ.ಐ. ಶಂಕರ್ ಇನ್ನು ಹಲವಾರು...ಅವರ ಕಟ್ಟಕಡೆಯ ಚಿತ್ರ ನಿಗೂಢ ರಹಸ್ಯ...

 

ಬರೀ ಹಿರಿತೆರೆಯಷ್ಟೇ ಅಲ್ಲದೆ ಕಿರುತೆರೆಗೆ ಇವರು ನೀಡಿದ ಕೊಡುಗೆ ಪ್ರಪ್ರಂಚವೆ ಒಬ್ಬ ಕನ್ನಡಿಗನನ್ನು ಪ್ರಶಂಶಿಸುವಂತಾಯಿತು.

ಇವರ ನಿರ್ದೇಶನದಲ್ಲಿ ಮೂಡಿ ಬಂದ ಮಾಲ್ಗುಡಿ ಡೇಸ್ ಕಥಾ ಮಾಲಿಕೆ ಬರೀ ಕನ್ನಡದಲ್ಲಷ್ಟೇ ಅಲ್ಲದೆ ಎಷ್ಟೋ ಭಾಷೆಗಳಲ್ಲಿ ಅನುವಾದ

ಕಂಡಿತು...

 

ಮೂಲತಃ ರಂಗಭೂಮಿಯಿಂದ ಬಂದ ಈತ ಮೊದಮೊದಲು ಮರಾಥಿ ರಂಗಭೂಮಿಯಲ್ಲಿ ಕೆಲಸ ಮಾಡಿ ಅಲ್ಲೂ ಸ್ಯೆ ಎನಿಸಿಕೊಂಡರು...

ಚಿತ್ರರಂಗದಲ್ಲಿ ಎಷ್ಟೇ ನಿರತರಾಗಿದ್ದರು ರಂಗಭೂಮಿಯ ಕಡೆ ಇದ್ದ ಒಲವು ಎಂದಿಗೂ ಕಮ್ಮಿಯಾಗಿರಲಿಲ್ಲ... ಅದಕ್ಕೆ ನಿದರ್ಶನ ಅವರ ಕನಸಿನ ಕೂಸು

"ಸಂಕೇತ್". ಅವರ ಪ್ರಖ್ಯಾತ ನಾಟಕಗಳು "ಅಂಜು ಮಲ್ಲಿಗೆ" , "ಬ್ಯಾರಿಸ್ಟರ್' , "ಸಂಧ್ಯಾ ಛಾಯ", "ನಾಗ ಮಂಡಲ".

 

ಕಳೆದ ಬಾರಿ ವಿಜಯ ಕರ್ನಾಟಕದಲ್ಲಿ ಅವರ ಹುಟ್ಟು ಹಬ್ಬದ ದಿನ ವಿಶೇಷವಾಗಿ ಬಂದ ಸಂಚಿಕೆಯಲ್ಲಿ ಅವರ ಪತ್ನಿ ಅರುಂಧತಿ ನಾಗ್ ರ, ಸಂದರ್ಶನದಲ್ಲಿ

ಅವರು ಹೇಳಿದ್ದು..."ಶಂಕರ್ ಗೆ ಒಂದು ದಿನಕ್ಕೆ ೨೪ ಗಂಟೆಗಳು ಸಾಲುತ್ತಿರಲಿಲ್ಲ, ಬೆಳಗ್ಗೆ ೫ ಗಂಟೆಗೆ ಶೂಟಿಂಗ್ ಗೆಂದು ಹೊರಟರೆ ಮತ್ತೆ ಬರುತ್ತಿದ್ದದ್ದು..

ಮರುದಿನ ಬೆಳಗ್ಗೆ ೧ ಅಥವಾ ೨ ಗಂಟೆಗೆ...೩ ತಾಸು ನಿದ್ದೆ ಅಷ್ಟೇ...ಆತ ಮಾಡುತ್ತಿದ್ದದ್ದು...ಬೆಳಗ್ಗಿನ ಹೊತ್ತು ಅವರಿಗೆ ಟೀ ಮಾಡಿಕೊಡಲು ಸಹ ನನ್ನ

ಕೈಲಿ ಆಗುತ್ತಿರಲಿಲ್ಲ" ಎಂದು ಕಣ್ಣೀರು ಹಾಕಿದರು... 

 

ಒಬ್ಬ ನಾಯಕ ನಟ ವರ್ಷಕ್ಕೆ ಎಷ್ಟು ಸಿನಿಮಾ ಮಾಡಬಹುದು...ಈಗಿನ ನಟರು ಅಬ್ಬಬ್ಬ ಅಂದರೆ ೨ ಅಥವಾ ೩ ಅಷ್ಟೇ... ಅದೇ ಶಂಕರಣ್ಣ ವರ್ಷದಲ್ಲಿ

೧೪ ಸಿನಿಮಾ ಮಾಡಿ ಅಷ್ಟು ಅದೇ ವರ್ಷದಲ್ಲಿ ಪ್ರದರ್ಶನಗೊಂಡ ಸಾಧಕ...

 

ಇಂದು ಆತ ಇದ್ದಿದ್ದರೆ ಕನ್ನಡ ಚಿತ್ರರಂಗ ಯಾವ ಮಟ್ಟಕ್ಕೆ ಇದ್ದಿರಬಹುದೆಂದು ಊಹಿಸಿದರೆ ಒಮ್ಮೆ ಮೈ ಪುಳಕಗೊಳ್ಳುತ್ತದೆ....

 

ಆದರೆ ದೇವರ ಆಟ ಬಲ್ಲವರಾರು....