ದಯ ತೋರಲಿದುವೆ ವೇಳೆಯು, ದಾಶರಥಿ!

ದಯ ತೋರಲಿದುವೆ ವೇಳೆಯು, ದಾಶರಥಿ!

ದಯ ತೋರಲಿದುವೆ ವೇಳೆಯು, ದಾಶರಥೀ ||

 

ಜಗದ ಬವಣೆಯೆಂಬಾನಯ
ಸಿಂಗದೊಲು ನೀನಳಿಸುವೆ


ಜಗದಯ್ಯ ಆ ಬೊಮ್ಮನಿಗು
ಸೊಗಸಿನಲೆ ತೊಡಕಿಳಿಸಿಹ ನೀ || ದಯ ತೋರಲಿದುವೆ ವೇಳೆಯು! ||

 

ಮುನ್ನ ನೀ ಕೊಟ್ಟಾಣತಿಯನು
ಮನಸಾರೆ ನಿದಾನದಲಿ ನಾ
ಸನ್ನಡತೆಯಲಿ ಪಾಲಿಸಿರಲು ಈ
-ಗೆನ್ನ ಬಳಿಸಾರಿ ಈ ತ್ಯಾಗರಾಜನಿಗೆ || ದಯ ತೋರಲಿದುವೆ ವೇಳೆಯು! ||

 

-ಹಂಸಾನಂದಿ

 

(ತ್ಯಾಗರಾಜರ ಗಾನವಾರಿಧಿ ರಾಗದ, ’ದಯಜೂಚುಟಕಿದಿ ವೇಳರಾ’ ಎಂಬ ರಚನೆಯ ಅನುವಾದ )

Rating
No votes yet