ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸರ್ವಜ್ನ ವಚನಗಳು

ಬೆಚ್ಚನಾ ಮನೆಯಿದ್ದು, ವೆಚ್ಚಕ್ಕೆ ಹೊನ್ನಿದ್ದು,
ಇಚ್ಚೆಯರಿತು ನಡೆವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ನ.

ಎಷ್ಟೊಂದು ಪ್ರಸ್ತುತ ಈ ವಚನ ಇಂದಿನ ದಿನಗಳಲ್ಲಿಯೂ ಸಹ,,,,
ಸಂಪದಿಗರಿಗಾಗಿ...........ಪ್ರೀತಿಯಿಂದ.

ಮಡದಿಯ ಪ್ರೀತಿ

ಜಗಮೆಚ್ಚಲೆಂದು
ನಾನು ಬರೆಯುವದಿಲ್ಲ
ಮೆಚ್ಚದರೆ ಸಾಕು
ನನ್ನ ಮಡದಿ.

ಜಗವೇನು ಅರಿಯುವದು?
ಈ ನನ್ನ ಪ್ರೀತಿಯನು
ಮಡದಿ ತಾ ಅರಿತಿಹಳು
ಈ ಜಗಕಿಂತಲೂ ನನ್ನ.

ಜಗದ ಪ್ರೀತಿ ತೊರೆದರೂ
ಮಡದಿ ಪ್ರೀತಿಯ ತೊರೆಯಲಾಗದು
ಮಡದಿ ಪ್ರೀತಿ ತೊರೆದರೆ
ಜಗದ ಪ್ರೀತಿಯಿಂದೇನಿಹುದು?
ಮಡದಿ ಪ್ರೀತಿಯ ಮರೆತು
ಜಗದ ಪ್ರೀತಿಯ ನೆನೆಯೆ
ಜಗವು ತಾ ನನ್ನ ಪೊರೆಯುವದೇ?
ಮಡದಿ ಪ್ರೀತಿಯ ನೆನೆಯೆ

ಪಬ್ ಸುಬ್ಬನ ರಾಮಾಯಣ ...

ಇದೇನೋ ಇದು ಬೆಂಗಳೊರಿಗೆ ಆದಿಮಾನವರು ಬಂದಿದ್ದಾರೆ ಎಂದ ಸುಬ್ಬು. ಲೇ ಮಗನೆ ಅವ್ರು ಆದಿಮಾನವರು ಅಲ್ಲ ಅವ್ರು ಬೇರೆ ದೇಶದಿಂದ ಇಲ್ಲಿಗೆ ಬಂದಿದ್ದಾರೆ ಎನ್ದೆ. ಮತ್ತೆ ಅವರೇಕೆ ಅರೇ ಬೆತ್ತಲೆ ಯಾಗಿ ಏಕೆ ಇರುವದು ಎಂದ ಸುಬ್ಬು. ಲೋ ಅದು Latest Fashion ಕಣೋ. ನಿಜವಾಗ್ಲೂ ಅವ್ನು ತನ್ನ ಊರು ರಾಮಸಂದ್ರ ಬಿಟ್ಟು ಯಾವ ಸಿಟಿನು ನೋಡಿರಲಿಲ್ಲ ಪಾಪ.

ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ?

ಆತ್ಮೀಯ

ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ?
(ಯಮಾನಿಲೇ೦ದ್ರಚ೦ದ್ರಾರ್ಕವಿಷ್ಣು ಸಿ೦ಹಾಶುವಾಜಿಷು|
ಶುಕಾಹಿಕಪಿಭೇಕೇಷು) ಹರಿ (ರ್ನಾ ಕಪಿಲೇ ತ್ರಿಷು)
(ಅಮರಕೋಶದ ತ್ರುತೀಯ ಕಾ೦ಡ ೩೩೦)
ಹರಿ ಅ೦ದ್ರೆ
೧ ಯಮ
೨ ವಾಯು
೩ ಇ೦ದ್ರ
೪ ಚ೦ದ್ರ
೫ ಸೂರ್ಯ
೬ ವಿಷ್ಣು
೭ ಸಿ೦ಹ
೮ ಕಿರಣ
೯ ಕುದುರೆ
೧೦ ಗಿಣಿ
೧೧ ಹಾವು
೧೨ ಮ೦ಗ :)
೧೩ ಕಪ್ಪೆ
೧೪ ಚಿನ್ನದ ಬಣ್ಣವುಳ್ಳದ್ದು

ಸುಮನಸಿನ ’ಮನಸು’ ಅವರಿಗೆ!

ಸುಮನಸಿನ ’ಮನಸು’ ಅವರಿಗೆ!

ಓ ಮನಸೆ! ನಿಮ್ಮ ಕವನವೈಖರಿ ಬಲು ಸೊಗಸು,
’ನೀವ್’ ಕಾವ್ಯವತಿ, ಅತಿ ಮತಿಯ ಭಾವ ಸರಸ್ಸು,
ಮನಸಿನ ಪುಷ್ಪವನದಲಿ ಪರಾಗದ ಸೂಸು
ಕುಸುಮವೃಂದ ಪ್ರಸರಿಪ ಕಂಪಿನ ಮೆರಸು!
*
ಓ ಮನಸೆ! ಅನಿತು ಮೆರೆವ ಭಾವಗೀತೆ
ಹೊರಗಿರಬೇಕು ದಿನದಿರುಳ ಬೆಳಕಿನ ಜೊಜೆ
ಬಂಧಿಸಿದಿರೇಕೆ ಕಾರ್ಗತ್ತಲ ಕೊಟಡಿಯಲಿ,
ಕಪ್ಪುಬಿಳಿ ಮಾಡಿ ಗೃಹದೊಳಗೋಡೆಗಳು ನೀಲಿ?
*

ಬೆಲ್ಲದ ಕಟ್ಟೆಯ ಕಟ್ಟಿ...

ಬೆಲ್ಲದ ಬೆಟ್ಟದ ನಟ್ಟ ನಡು
ಬೇವಿನದೊಂದು ಬೀಜವ ನೆಟ್ಟು
ಸಾವಿರ ವರುಷ ಹಾಲ್ಮಳೆಗರೆಯಲು
ಸವಿಯಾದೀತೇ ಬೆಳೆಯುವ ಬೇವು?

ಸಂಸ್ಕೃತ ಮೂಲ:

गुलपर्वतमध्यस्थं निम्बबीजं प्रतिष्टितम्।
पयोवर्षसहस्रेण निम्बः किं मधुरं यते॥

ಕೊಸರು:
ಇದೇ ತಿಳಿವುಳ್ಳ ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಅನ್ನುವ ಬಸವಣ್ಣನವರ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು,,,,,,,,

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ವ್ರುಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು, ಎಂದು ಅಡಿಗರ ಭಾವಗೀತೆ ರತ್ನಮಾಲ ಪ್ರಕಾಶ್ ರವರ ಮಧುರ ಕಂಠದಲ್ಲಿ ಕಾರಿನ ತುಂಬಾ ತುಂಬಿಕೊಂಡಿತ್ತು.

ಕೇಶ ವಿನ್ಯಾಸ! ಸಮ್ಮರ್ ಹೇರ್ ಸ್ಟೈಲ್!

ಬೇಸಿಗೆ ಇಲ್ಲಿದೆ! (ಮೈಗೆ ಹಿತವಾಗುವ) ಸೂರ್ಯನ ರಶ್ಮಿಗಳು ಚೂಪಾಗಿ ಮೈಗೆ ತಟ್ಟುವಂತಿದೆ. ಸ್ವಲ್ಪಮಟ್ಟದಲ್ಲಿ ಸೂರ್ಯನ ಕಿರಣಗಳು ಮೈಗೆ (ತಗುಲಿದರೆ )ಆರೋಗ್ಯಕ್ಕಾಗಿ ಅತ್ಯಗತ್ಯ. ವೈಟಮಿನ್ "ಡಿ" ಅಂಶದ ಕೊರತೆ ಬರುವುದಿಲ್ಲ. ದೇಹದಲ್ಲಿರುವ ಮೂಳೆಗಳು ಗಟ್ಟಿಯಾಗಿ, ಆರೋಗ್ಯದಿಂದಿರಲು ಅನುಕೂಲವಾಗುತ್ತೆ.

ಹನ್ನೆರಡು ಉಪಯುಕ್ತ ಸ್ವತಂತ್ರ ತಂತ್ರಾಂಶಗಳು, ಮತ್ತೊಂದು

"The best things in life are free." ಎಂಬ ಮಾತಿದೆ ಇಂಗ್ಲೀಷಿನಲ್ಲಿ. ನಮ್ಮೆಲ್ಲರ ಸುದೈವವೋ ಏನೋ, ತಂತ್ರಾಂಶ ಜಗತ್ತಿನಲ್ಲಿ ಕೂಡ ಈ ಮಾತು ನಿಜವಾಗಿದೆ. ಎಷ್ಟೋ ಉತ್ತಮ ತಂತ್ರಾಂಶಗಳನ್ನು ನೀವು ಹಣ ಕೊಟ್ಟು ಕೊಳ್ಳಬೇಕಿಲ್ಲ, ಸಂಪೂರ್ಣ ಮುಫತ್ತಾಗಿ ನಿಮಗೆ ಬಳಸಲು ಸಿಗುತ್ತದೆ!

ಹೀಗೇ ಒಂದೂ ಪೈಸೆ ಖರ್ಚು ಮಾಡಿಸದೆ ಸಿಗುವ ಉತ್ತಮ ತಂತ್ರಾಂಶಗಳಲ್ಲಿ ಸಿಂಹಪಾಲು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳದ್ದು (free and open source software). ತಂತ್ರಾಂಶ ಪಡೆದು ಬಳಸುವವರಿಗೆ ಬಳಕೆಗೆ ಅನುಮತಿ ನೀಡುವುದಷ್ಟೇ ಅಲ್ಲದೆ ಅದನ್ನು ತಮಗೆ ಬೇಕಿರುವಂತೆ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯವನ್ನೂ ನೀಡುವ ತಂತ್ರಾಂಶಗಳಿವು. ದುಡ್ಡು ಕೊಟ್ಟು ಮನೆ ಖರೀದಿಸಿದವನಿಗೆ, "ನಿನ್ನದೇ ಮನೆಯಪ್ಪ ನಿನಗಿಷ್ಟ ಬಂದಂತೆ ಬದಲಾಯಿಸಿಕೊಳ್ಳುವ ಸ್ವಾತ್ರಂತ್ರ್ಯ ನಿನಗಿದೆ" ಎನ್ನುವಷ್ಟು ಸಹಜವಾದ ಸಿದ್ಧಾಂತ ಇದರ ಹಿಂದಿರುವುದು. ತಂತ್ರಾಂಶಗಳನ್ನು ಬಳಸುವವರ ಅದೃಷ್ಟ, ಇಂತಹ ಹಲವು ತಂತ್ರಾಂಶಗಳು ನಿಮಗೆ ಆ ಸ್ವಾತಂತ್ರ್ಯ ನೀಡುವುದರ ಜೊತೆಜೊತೆಗೇ ಉಚಿತವಾಗಿ ಕೂಡ ಸಿಗುತ್ತದೆ!

ಅಂತಹ ಕೆಲವು ಉತ್ತಮ ತಂತ್ರಾಂಶಗಳ ಪರಿಚಯ ಮಾಡಿಕೊಳ್ಳೋಣ ಬರ್ತೀರ? ಕಂಪ್ಯೂಟರ್ ಬಳಕೆದಾರನ ದಿನಬಳಕೆಗೆ ಬೇಕಾದ ಹದಿಮೂರು ಅತ್ಯುತ್ತಮ ತಂತ್ರಾಂಶಗಳು ಇಗೋ ನಿಮ್ಮ ಮುಂದಿದೆ.