ಸುಮನಸಿನ ’ಮನಸು’ ಅವರಿಗೆ!

ಸುಮನಸಿನ ’ಮನಸು’ ಅವರಿಗೆ!

ಬರಹ

ಸುಮನಸಿನ ’ಮನಸು’ ಅವರಿಗೆ!

ಓ ಮನಸೆ! ನಿಮ್ಮ ಕವನವೈಖರಿ ಬಲು ಸೊಗಸು,
’ನೀವ್’ ಕಾವ್ಯವತಿ, ಅತಿ ಮತಿಯ ಭಾವ ಸರಸ್ಸು,
ಮನಸಿನ ಪುಷ್ಪವನದಲಿ ಪರಾಗದ ಸೂಸು
ಕುಸುಮವೃಂದ ಪ್ರಸರಿಪ ಕಂಪಿನ ಮೆರಸು!
*
ಓ ಮನಸೆ! ಅನಿತು ಮೆರೆವ ಭಾವಗೀತೆ
ಹೊರಗಿರಬೇಕು ದಿನದಿರುಳ ಬೆಳಕಿನ ಜೊಜೆ
ಬಂಧಿಸಿದಿರೇಕೆ ಕಾರ್ಗತ್ತಲ ಕೊಟಡಿಯಲಿ,
ಕಪ್ಪುಬಿಳಿ ಮಾಡಿ ಗೃಹದೊಳಗೋಡೆಗಳು ನೀಲಿ?
*
ಶ್ರಮವಹಿಸಿ ಓದಿ ನೊಂದವು ನಯನಗಳು,
ರವಾನಿಸಿ ಮೆದುಳಿಗೆ ದೂರು ತಙ್ಞತೆಗೆ ಕೊಲ್ಲು,
ಓದುವಾಕಾಂಕ್ಷೆ ಪಡೆಯಿತು ತಕ್ಷಣ ನಿಲ್ಲು,
ತತ್ಪರತೆ ಮುರಿದು ಮನಸಿಗೆ ಬೇಸರದ ನರಳು.
*
ನಕ್ಷತ್ರಗಳು ರಾತ್ರಿಯಾಗಸಕೆ ಚಂದ,
ಈಕ್ಷಿಸುವವರಿಗೆಲ್ಲ ಆಗುವುದಾನಂದ.
ದಿನದಿರುಳಲಿ ರಾರಾಜಿಸಲಿ ರವಿಕಿರಣಗಳು
ಬಿಳಿಹಾಳೆಗಳಲಿ ನಿಮ್ಮ ಕಾವ್ಯಗೀತೆಗಳು!
*
- ವಿಜಯಶೀಲ
*